ಯುರೋಪಿನ ಜರ್ಮನಿಯಲ್ಲಿ ಭಯಾನಕ ಪ್ರವಾಹ!

ಈ ಪ್ರವಾಹವೂ ಪಶ್ಚಿಮ ಯುರೋಪಿನಿಂದ ಶುರುವಾಗಿದ್ದು 125 ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 1300 ಜನರು ಕಾಣೆಯಾಗಿದ್ದಾರೆ ಹಾಗೆ ಅವರ ಸುಳಿವು ಇನ್ನೂ ಕಂಡುಬಂದಿಲ್ಲ ಹಾಗೂ ಅಲ್ಲಿನ ರಸ್ತೆ ಹದಗೆಟ್ಟು ನೀರಿನ ರಭಸಕ್ಕೆ ಒಂದರಮೇಲೊಂದು ಪಟ್ಟಣದ ಹಾಗೆ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾವೆ ಎಂದು ಹೇಳಲಾಗಿದೆ.

ಪುಸ್ತಕಗಳ ಸ್ಥಿತಿ ಕಂಡ ವಿದ್ಯಾರ್ಥಿಗಳು ಮಮ್ಮಲ ಮರಗುತ್ತಿದ್ದಾರೆ.

ಇದೀಗ ಕೊರೊನಾದಿಂದ ಕಂಗೆಟ್ಟ ಜನರಿಗೆ ಪ್ರವಾಹ ಗಾಯದ ಮೇಲೆ ಬರೆ ಎಳೆದಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಮಲಪ್ರಭಾ ನದಿ ಪ್ರವಾಹ ಬಂದಿದ್ದು ಕೊಣ್ಣೂರು ಗ್ರಾಮದ ಜನರ ಬದುಕು ಮೂರಾಬಟ್ಟೆಯಾಗಿದೆ. ನಿನ್ನೆಯಷ್ಟೆ ಪ್ರವಾಹ ಇಳಿಕೆಯಾಗಿದ್ದು, ನದಿ ನೀರು ಒಳಹೊಕ್ಕ ಪರಿಣಾಮ ಪುಸ್ತಕಗಳೆಲ್ಲ ನೀರಿನಲ್ಲಿ ತೋಯ್ದಿವೆ. ಇದರಿಂದ ಪುಸ್ತಕಗಳ ಸ್ಥಿತಿ ಕಂಡ ವಿದ್ಯಾರ್ಥಿಗಳು ಮಮ್ಮಲ ಮರಗುತ್ತಿದ್ದಾರೆ.

ನೆರೆ ಸಂತ್ರಸ್ಥರ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಿ : ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಜಿಲ್ಲೆಯಲ್ಲಿ ಪ್ರತಿವರ್ಷ ಪ್ರವಾಹ ಉಂಟಾಗುತ್ತಿದ್ದು, ಇದರಿಂದ ಮಲಪ್ರಭಾ, ಬೆಣ್ಣೆಹಳ್ಳ ಹಾಗೂ ತುಂಗಭದ್ರಾ ನದಿ ಪಾತ್ರದ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಹೀಗಾಗಿ ಸಂತ್ರಸ್ಥರಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸುವ ಬದಲಾಗಿ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.