ಪಟಾಕಿ ನಿಷೇಧ ಆದೇಶ ಹಿಂಪಡೆದ ಸಿಎಂ: ಹಸಿರು ಪಟಾಕಿಗೆ ಅನುಮತಿ ನೀಡಿದ ಬಿಎಸ್ವೈ

ದೀಪಾವಳಿ ಹಿನ್ನೆಲೆ ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ನಿಷೇಧಿಸುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸಾರ್ವಜನಿಕರ ಒತ್ತಡಕ್ಕೆ ಮಣಿದ ಯಡಿಯೂರಪ್ಪ “ಹಸಿರು ಪಟಾಕಿ ”ಮಾರಾಟ ಮತ್ತು ಸಿಡಿಸಲು ಅವಕಾಶ ನೀಡಿದ್ದಾರೆ.