ಅವ್ಯವಸ್ಥೆಯ ಆಗರವಾದ ಗದಗ ಜಿಲ್ಲಾ ಆಸ್ಪತ್ರೆ; ಬೆಸಿಗೆಯಲ್ಲಿ ಬಾಣಂತಿ ಹಾಗೂ ಹಸುಗುಸುಗಳ ಪರದಾಟ

ಉತ್ತರಪ್ರಭ, ಗದಗ :
ಜಿಲ್ಲೆಯ ಪ್ರಮುಖ ಆರೋಗ್ಯ ಕೇಂದ್ರವಾದ ಗದಗ ಜಿಲ್ಲಾ ಆಸ್ಪತ್ರೆ, ಪ್ರಮುಖವಾಗಿ ಬೆಸಿಗೆಯ ದಿನಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಬಾಣಂತಿಯರಿಗೆ ಹಾಗೂ ಹಸುಗುಸುಗಳಿಗೆ ಅವ್ಯವಸ್ಥೆಯ ಆಗರವಾಗಿದೆ.

ಹೌದು, ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಅದರಲ್ಲು ಬಾಣಂತಿಯರ ವಾರ್ಡ್ ನಲ್ಲಿ ಎಷ್ಟೋದಿನಗಳಿಂದ ಕೆಟ್ಟುನಿಂತ ಫ್ಯಾನಗಳು ಅದರಲ್ಲು ಈ ಬಿಸಿ 40 ಡಿಗ್ರಿ ತಾಪಮಾನದ ಬೆಸಿಗೆಯಲ್ಲಿ ಸರಿಯಾದ ಗಾಳಿ ಇಲ್ಲದೆ ಬಾಣಂತಿಯರು ಹಾಗೂ ಆಗತಾನೆ ಹುಟ್ಟಿದ ಹಸುಗುಸುಗಳು ಪರದಾಡುವ ಪರಿಸ್ಥಿತಿ ಬಂದೊದಗಿದೆ.

ಸಮೀಪದ ದಿನಗಳಲ್ಲಿ ಗದಗ ಜಿಲ್ಲೆಯ ತಾಪಮಾನ 40 ಡಿಗ್ರಿಯ ಸುಮಾರಿಗೆ ಏರಿಕೆಯಾಗಿರುವಾಗ, ಆಸ್ಪತ್ರೆಯಲ್ಲಿ ಶೀತಲೀಕರಣ ವ್ಯವಸ್ಥೆ ಹೊಂದಿಲ್ಲದೆ, ಫ್ಯಾನ್ಗಳೂ ನಿಲ್ಲಿಸಿದಂತೆ ಇರುವುದು ಗಂಭೀರ ಸಮಸ್ಯೆಯಾಗಿದೆ. ವೈದ್ಯಕೀಯ ಸಿಬ್ಬಂದಿ ಮತ್ತು ಸಿಬ್ಬಂದಿಯ ಗಮನಕ್ಕೆ ವಿಷಯ ಬಂದಿದ್ದರೂ ಕೂಡ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ.

ಶಕೆಯಿಂದ ಅಳುತ್ತಿರುವ ಹಸುಗುಸುಗಳನ್ನು ವಾರ್ಡಿನಿಂದ ಹೊರತಂದು ಸಮಜಾಯಿಸುತ್ತಿರುವ ಪೋಷಕರು.

ಇದೊಂದೆ ಅಲ್ಲದೆ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಸ್ವಚ್ಚತೆ ಹಾಗೂ ಸಿಬ್ಬಂದಿ ವರ್ಗ ಮರೆಮಾಚಿ ಹೋಗಿದೆ.

ಫ್ಯಾನ್ಗಳು ಕಾರ್ಯನಿರ್ವಹಿಸದ ಕಾರಣ, ಭಾರೀ ಬಿಸಿಲಿನಲ್ಲಿ ಬಾಣಂತಿಯರು ಹಾಗೂ ಹಸುಗುಸುಗಳು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಬಾಣಂತಿಯರು, ಪೋಷಕರು, ಅಲ್ಲಿನ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

“ಬಡವರ್ಗದ ಮಹಿಳೆಯರಿಗೆ ಜಿಲ್ಲಾಸ್ಪತ್ರೆಯು ಇತರೆ ಆಸ್ಪತ್ರೆಗಳಿಗಿಂತ ಒಳ್ಳೆಯ ಬೆಂಬಲವಾಗಬೇಕೆಂಬ ನಿರೀಕ್ಷೆಯಿದೆ. ಅದರಲ್ಲು ಈ ಆಸ್ಪತ್ರೆಗೆ ಮಾಚಿ ಸಚಿವ, ಸಹಕಾರಿ ರಂಗದ ಧುರೀಣರಾದ ಕೆ.ಎಚ್.ಪಾಟೀಲರ ಹೆಸರು ನಾಮಕರಣಕ್ಕೆ ಕ್ಯಾಬಿನೆಟ್ ನಲ್ಲಿ ಅನುಮೊದನೆ ನೀಡಲಾಗಿದ್ದು, ಒಂದೆಡೆ ಬಿಜೆಪಿ ಕಾರ್ಯಕರ್ತರ ವಿರೋಧವಿದ್ದು, ಈ ಸಂದರ್ಭದಲ್ಲಿ ಇಂತಹ ಘಟನೆ ವಿಷಾದನೀಯ.

ಶೆಖೆಗೆ ಮನೆಯಿಂದಲೆ ಫ್ಯಾನಗಳನ್ನು ತಂದು ಬಳಸಿಕೊಳ್ಳುತ್ತಿರುವ ದೃಶ್ಯ.

ಸದ್ಯ ಈ ಕುರಿತು ಆಸ್ಪತ್ರೆಯ ಉನ್ನತ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ. ಸಾರ್ವಜನಿಕರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಕ್ಷಣವೇ ಸಮಸ್ಯೆ ಪರಿಹಾರವಾಗುವಂತೆ ಆಗ್ರಹಿಸುತ್ತಿದ್ದಾರೆ.

Exit mobile version