ನರೆಗಲ್ಲ: ಪ.ಪಂ ಬಜೆಟ್ ಪೂರ್ವಭಾವಿ ಸಭೆ ₹2166000 ಉಳಿತಾಯ ಬಜೆಟ್

ಅಧ್ಯಕ್ಷರಿಗೆ ತಿಳಿಸದೆ ಅಧಿಕಾರ ವಹಿಸಿಕೊಂಡ ಮುಖ್ಯಾಧಿಕಾರಿ: ಎಂದು ಸದಸ್ಯ ಮಾಲಗಿತ್ತಿಮಠ ಆರೋಪ..!

ಸದಸ್ಯರು ಜೀವಂತ ಇದ್ದಾರಾ ಸತ್ತಿದ್ದಾರೂ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ…

ಉತ್ತರಪ್ರಭ ಸುದ್ದಿ

ನರೆಗಲ್ಲ: ಸ್ಥಳೀಯ ಪಟ್ಟಣ ಪಂಚಾಯ್ತಿಯ ಸಭಾಂಗಣದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ವಿಜಯಲಕ್ಷ್ಮೀ ಚಲವಾದಿ ಅವರ ಅಧ್ಯಕ್ಷತೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡನೆಯ ಪೂರ್ವಬಾವಿ ಸಭೆ ಗುರುವಾರ ನಡೆಯಿತು.
ಈ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಆದಾಯ ಹೆಚ್ಚಳ, ಅಭಿವೃದ್ಧಿ, ಅಕ್ರಮಗಳಿಗೆ ಕಡಿವಾಣ ಹಾಕುವ ಕುರಿತಂತೆ ಸಲಹೆ ನೀಡಿದರು.

ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ, ಚರಂಡಿಗಳ ನಿರ್ಮಾಣ, ವಿದ್ಯುತ್ ಬೀದಿ ದೀಪಗಳ ಅಳವಡಿಕೆ, ಶುದ್ಧ ಕುಡಿವ ನೀರು ಪೂರೈಕೆಗೆ ಪೈಪಲೈನ್ ವಿಸ್ತರಣೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದು  ಪ. ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಚಲವಾದಿ ತಿಳಿಸಿದರು.

1ನೇ ವಾರ್ಡಿನ ಸದಸ್ಯ ರಾಚಯ್ಯ ಮಾಲಗಿತ್ತಿಮಠ ಮಾತನಾಡಿ ಪಟ್ಟಣ ಪಂಚಾಯತಿಗೆ ಆದಾಯ ತರುವ ವಾಣಿಜ್ಯ ಮಳಿಗೆಗಳು ಈಗಾಗಲೇ ಟೆಂಡರ್ ಆಗಿದ್ದು ಅವುಗಳನ್ನು ಟೆಂಡರ ಆದ ವ್ಯಕ್ತಿಗಳಿಗೆ ನೀಡಬೇಕು ಹಾಗೂ ಬಾಕಿ ಇದ್ದ ಬಾಡಿಗೆ ಹಣವನ್ನು ವಸೂಲಿ ಮಾಡಬೇಕು ಆದರೆ ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಮಿನಾವೇಶ ಎಣೆಸುತ್ತಿದ್ದು,ಆದಾಯ ಬಾ ಅಂದರೆ ಹೇಗೆ ತಾನೆ ಬರಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣವು ಹೋಬಳಿ ಕೇಂದ್ರವಾಗಿದ್ದು ವಾಣಿಜ್ಯ ಮಳಿಗೆಗಳ ತೆರಿಗೆ ವಸೂಲಿ ಕುರಿತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಆದಾಯ ಹೆಚ್ಚಳ್ಳಕ್ಕೆ ಆದ್ಯತೆ ನೀಡಬೇಕು ಎಂದು ಪ.ಪಂ. ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಸಲಹೆ ನೀಡಿದರು.

ಕಾನೂನು ಬಾಹಿರವಾಗಿ ಪಟ್ಟಣ ಪಂಚಾಯತಿಗೆ ಬಾಗಿಲಿಗೆ ಬೀಗ ಜಡಿದು ಸಾರ್ವಜನಿಕರು ಎರಡು ದಿನಗಳ ಕಾಲ ಪ್ರತಿಭಟನೆ ಮಾಡಿದರು, ಸಹಿತ ಸ್ಥಳೀಯ ಆಡಳಿತ ಕಣ್ಣು ಮುಚ್ಚಿಕುಳಿತ್ತಿತ್ತು ಸರಕಾರಿ ಇಲಾಖೆಯನ್ನು ಬಂದ ಮಾಡಿ ಪ್ರತಿಭಟಿಸುವ ಅಧಿಕಾರ ಯಾರಿಗೂ ಇಲ್ಲ ಇಂತದ್ದರಲ್ಲಿ ಎರಡು ದಿವಸ ಪ್ರತಿಭಟನೆ ಮಾಡಿದರು ಅಧ್ಯಕ್ಷರು ಉಪಾಧ್ಯಕ್ಷರು ಎನು ಮಾಡಿದರು ಇದರಿಂದ ಅಧ್ಯಕ್ಷ ಹಾಗೂ ಸದಸ್ಯರಿಗೆ ಅವಮಾನವಾಗಿದೆ, ಸದಸ್ಯರು ಜೀವಂತ ಇದ್ದಾರಾ ಅಥವಾ ಸತ್ತಿದ್ದಾರಾ ಎಂದು ಸಾರ್ವಜನಿಕರು ಪ್ರಶ್ನೇ ಮಾಡುತ್ತಿದ್ದಾರೆ, ಎಂದು ಸದಸ್ಯ ರಾಚಯ್ಯ ಮಾಲಗಿತ್ತಿಮಠ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಎರಡು ದಿನಗಳ ಕಾಲ ಸಾರ್ವಜನಿಕರು ಮುಖ್ಯಾಧಿಕಾರಿ ವರ್ಗಾವಣೆಗಾಗಿ ಪ್ರತಿಭಟನೆ ಮಾಡಿದ ಪರಿಣಾಮ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ನಾನು ನಿಯೋಜನೆ ಗೊಂಡಿದ್ದು ನಾನೆನು ಇಲ್ಲಿಗೆ ಬರಬೇಕು ಅಂತಾ ನಾನೆನು ಹಟ ಹಿಡಿದು ಕುಂತಿದ್ದಿಲ್ಲ ಎಂದು ನೂತನ ಮುಖ್ಯಾಧಿಕಾರಿ ಶಿವಾನಂದ ಅಜ್ಜನ್ನವರ ಹೇಳಿದರು.

ಈ ಸಂದರ್ಭದಲ್ಲಿ  ಪ. ಪಂ.ಸದಸ್ಯರಾದ ಅಕ್ಕಮ್ಮ ಮಣ್ಣೋಡ್ಡರ, ಶ್ರೀಶೈಲಪ್ಪ ಬಂಡಿಹಾಳ, ಫಕೀರಪ್ಪ ಬಂಬಲಾಪುರ, ಪಕ್ಕಿರಪ್ಪ ಮಳ್ಳಿ,  ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ವಿಶಾಲಾಕ್ಷಿ ಹೊಸಮನಿ, ಜ್ಯೋತಿ ಪಾಯಪ್ಪಗೌಡ್ರ,ಸುಮಿತ್ರಾ ಕಮಲಾಪುರ,  ವಿರೇಶ ಜೋಗಿ, ಮುತ್ತಪ್ಪ  ನೂಲ್ಕಿ,ಬಸೀರಾಬಾನು ನದಾಫ್, ಮಂಜುಳಾ ಹುರುಳಿ,ಮಲಿಕಸಾಬ್ ರೋಣದ, ದಾವುದ ಅಲಿ ಕುದರಿ,
Exit mobile version