ಆಲಮಟ್ಟಿ: ಕೃಷ್ಣೆಯ ತಟದಲ್ಲಿರುವ ಉದ್ಯಾನ ನಗರಿ ಆಲಮಟ್ಟಿಯಲ್ಲಿ ಹೋಳಿ ರಂಗಿನಾಟದ ಸಂಭ್ರಮ ಕಳೆ ಗಟ್ಟಿತ್ತು.
ಯುವಕರು,ಯುವತಿಯರು,ಮಹಿಳೆಯರು, ಮಕ್ಕಳು ಹಿರಿಯರು, ಕಿರಿಯರೆನ್ನದೇ ಎಲ್ಲ ವಯೋಮಾನದವರು ಬಣ್ಣದೋಕುಳಿಯಲ್ಲಿ ಮಿಂದು ಸಂಭ್ರಮಿಸಿದರು. ಬಣ್ಣದಾಟದಲ್ಲಿ ತನ್ಮಯರಾಗಿ ಸಂತಸದಿAದ ಕುಣಿದು ಕುಪ್ಪಳಿಸಿ ಹೋಳಿ ಆಚರಣಗೆ ವಿಶೇಷ ಮೆರುಗು ನೀಡಿದರು. ಅಲ್ಲದೇ ಭಾರತೀಯ ಭವ್ಯ ಪರಂಪರೆ ಸಂಸ್ಕೃತಿಗೆ ಸಾಕ್ಷಿಯಾದರು.

ಬಣ್ಣಾಸಕ್ತರು ವಿವಿಧ ರಂಗು ರಂಗಿನ ಬಣ್ಣ ಹಚ್ಜಿ ಖುಷಿ ಪಟ್ಡರು. ಗುಂಪು ಗುಂಪಾಗಿ ಮನೆ ಮನೆಗಳಿಗೆ ತೆರಳಿ ತಮ್ಮ ಆಪ್ತರನ್ನು ಮನೆಯಿಂದಾಚೆ ಹೊರ ಕರೆದು ಬಣ್ಣ ಎರಚಿ ಹೋಳಿ ಬಣ್ಣಕ್ಕೆ ಚಾಲನೆ ನೀಡಿದರು. ಹೆಣ್ಣು, ಗಂಡು ಎನ್ನದೇ ಕಲರ್ ರಂಗದಲ್ಲಿ ಮಿಂದೆದ್ದರು. ಹಲಗೆ ನಾದದದ ಸದ್ದಿನೊಂದಿಗೆ ನೃತ್ಯದ ಝಲಕ್ ಪ್ರದರ್ಶಿಸಿ ಗಮನ ಸೆಳೆದರು.

ಹೋಳಿ ಆಚರಣೆ ಇಲ್ಲಿ ವಿಶೇಷತೆಯ ಮೆರುಗು ಪಡೆದಿತ್ದು. ಸಾಮರಸ್ಯ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ಕೋಮು ಸೌಹಾರ್ದತೆ ಎದ್ದು ಕಾಣುತ್ತಿತ್ತು. ಸಾಮಾಜಿಕ ಸಾಮರಸ್ಯದ ಹೋಳಿ ಹಬ್ಬ ಜಾತಿ,ಮತ, ಪಂಥಗಳನ್ನು ಮರೆತು, ಮೇಲು,ಕೀಳು ಎಂಬ ಮತೀಯ ಭಾವನೆಗಳನ್ನು ತೊರೆದು ಭಾವೈಕ್ಯದ ಸಂಕೇತ ಬೀರಿತ್ತು.

ಹೋಳಿ ಬಣ್ಣದಲ್ಲಿ ಮಹಿಳೆಯರು ನಾವೇನು ಕಮ್ಮಿಯಿಲ್ಲ ಎಂಬ0ತೆ ಲಿಂಗ ಭೇದ ಮರೆತು ಬಣ್ಣದ ಆಟದಲ್ಲಿ ಮಿನುಗಿದರು. ಬೀದಿ ಬೀದಿಗಳಲ್ಲಿ ರಂಗಿನಾಟ ಮೇಳೈಸಿತ್ತು. ಮುಖಗಳಿಗೆ ಬಣ್ಞದ ಲೇಪನ ಸೃಷ್ಟಿಸಿ ಹೋಳಿ ವೈಭವ ಸಡಗರಿಸಿದರು. ಚಿಣ್ಣರು ವಿಧವಿಧವಾದ ಬಣ್ಣದ ಪಿಚಕಾರಿಗಳನ್ನು ಹಿಡಿದು ಪರಸ್ಪರ ಬಣ್ಣ ಎರಚಿ ಸಂತಸದಲ್ಲಿ ತೇಲಿದರು. ಬಣ್ಣದ ಸವಿರಸದೌತಣ ಕೃಷ್ಣೆಯ ಪರಿಸರದಲ್ಲಿ ರಾರಾಜಿಸಿತ್ತು. ಸ್ನೇಹಿತರು, ಪರಿಚಯಸ್ಥರು,ಸಂಬAಧಿಕರಿಗೆ ಬಣ್ಣ ಹಾಕಿ ಕೇಕೇ ಹಾಕುವ ಮೂಲಕ ಸಂಭ್ರಮದ ಓಕಳಿ ಹಬ್ಬ ಆಚರಿಸಿದರು.

ಮೊಘಲ್ ಉದ್ಯಾನದ ಸಂಗೀತ ಕಾರಂಜಿ ಎಂಟ್ರನ್ಸ್ ಪ್ಲಾಜಾ ಎದುರು ಉದ್ಯಾನವನದ ಕಾಮಿ9ಕರು ವಿಶೇಷ ರೀತಿಯಲ್ಲಿ ಬಣ್ಣದ ಆಟದಲ್ಲಿ ಮಿಂದರು. ಆಲಮಟ್ಟಿ ಸ್ಟೇಷನ್‌ದಲ್ಲಿ ಯುವಕರು ಬಣ್ಣದ ಜೋಶ್ ನಲ್ಲಿ ಕುಣಿದಾಡಿ ಸಂಭ್ರಮಿಸಿದರು. ಡ್ಖಾಂ ಸೈಟ್‌ನಲ್ಲಿ ಬಣ್ಣ ರಂಗಾಗಿತ್ತು. ಚಿಮ್ಮಲಗಿ ಭಾಗ 1 ಮತ್ತು 2 ಪುನರ್ವಸತಿ ಕೇಂದ್ರದ ಬಡಾವಣೆಯಲ್ಲಿ ಮಹಿಳೆಯರ ದಂಡು ರಂಗಿನಾಟದಲ್ಲಿ ತನ್ಮಯರಾಗಿ ನಲಿದರು. ಎಂ.ಎಚ್.ಎA.ಆAಗ್ಲ ಮಾದ್ಯಮ ಶಾಲೆ ಮುಖ್ಯ ಗುರುಮಾತೆ ಶ್ರೀಮತಿ ತನುಜಾ ಪೂಜಾರಿ ಚಿಣ್ಣರೊಂದಿಗೆ ಬಣ್ಣದ ಹಬ್ಬ ಆಚರಿಸಿ ಸೆಲ್ಫಿಯೊಂದಿಗೆ ಖುಷಿ ಹಂಚಿಕೊAಡರು. ಗ್ರಾಮದ ವಿವಿಧ ಬಡಾವಣೆಯಲ್ಲಿ ಹೋಳಿ ಹುಣ್ಣಿಮೆಯ ಪ್ರಯುಕ್ತ ಕಾಮ ದಹನ ಕಾರ್ಯಕ್ರಮ ನಡೆದವು