ತುಳಸಿ ವಿವಾಹೋತ್ಸವ

ಉತ್ತರಪ್ರಭ ಸುದ್ದಿ

ಗದಗ: ಅವಳಿ ನಗರದ ಸೇರಿದಂತೆ ಜಿಲ್ಲೆಯಲ್ಲಿ ತುಳಸಿ ಪೂಜಾ (ವಿವಾಹ) ಕಾರ್ಯಕ್ರಮ ಶನಿವಾರ ಸಂಜೆ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ತುಳಸಿ ಕಟ್ಟೆ ಶುಚಿಗೊಳಿಸಿ, ಬಣ್ಣ ಹಚ್ಚಲಾಯಿತು. ಕಬ್ಬು, ಮಾವಿನ ತಳಿರು- ತೋರಣ ಹಾಗೂ ಹೂ ದಂಡೆ, ಮಾಲೆಗಳೊಂದಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.

ಮೇಣದ ಬತ್ತಿ, ಹಣತೆಯ ದೀಪಗಳಿಂದ ಆವರಣ ಬೆಳಗಿಸಲಾಗಿತ್ತು. ವಿವಿಧ ರಂಗು-ರಂಗಾದ ರಂಗವಲ್ಲಿ ಎಲ್ಲರ ಮನೆ ಮುಂದೆ ರಾರಾಜಿಸುತ್ತಿದ್ದವು. ಗಣೇಶ ಪೂಜೆ ಬಳಿಕ ಶ್ರೀಕಷ್ಣನ ಮೂರ್ತಿಗೆ ಅಭಿಷೇಕ ಪೂಜೆ ನೆರವೇರಿಸಿ, ತುಳಸಿ ಮಾತೆಗೆ ಪೂಜಿಸಲಾಯಿತು.

ದೀಪ-ಧೂಪ, ತುಪ್ಪದಾರುತಿ ಬೆಳಗಿ, ರಾಧಾ- ಕೃಷ್ಣ ಭಕ್ತಿ ಗೀತೆಗಳೊಂದಿಗೆ ಆರತಿ ಮಾಡಲಾಯಿತು. ನಗರದ ವಿವಿಧ ಕಾಲೋನಿಯಲ್ಲಿನ ಪೂಜೆಯಲ್ಲಿ ಮಹಿಳೆಯರು, ಮಕ್ಕಳು ಭಾಗವಹಿಸಿದರು.

ಅಗತ್ಯ ವಸ್ತುಗಳ ಖರೀದಿನಗರದ ಮಾರುಕಟ್ಟೆಯಲ್ಲಿ ತುಳಸಿ ಪೂಜೆ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು. ಕಬ್ಬು,ಚೆಂಡು ಹೂವು ಸೇರಿದಂತೆ ವಿವಿಧ ವಸ್ತುಗಳ ಖರೀದಿ ಮಾಡಲಾಯಿತು. ಬೆಲೆ ಏರಿಕೆ ನಡುವೆ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
Exit mobile version