ಉತ್ತರಪ್ರಭ ಸುದ್ದಿ
ಮಸ್ಕಿ: ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕನ ಬಗ್ಗೆ ಮಾತನಾಡಲು ಪ್ರತಾಪಗೌಡ ಪಾಟೀಲಗೆ ಯಾವ ನೈತಿಕತೆ ಇಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರು ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಉಪ ಚುನಾವಣೆಯಲ್ಲಿ ಪ್ರತಾಪಗೌಡ ಸೋಲಿಗೆ ಕೆ.ಶಿವನಗೌಡ ನಾಯಕರೇ ಕಾರಣ ಎಂದು ಪ್ರತಾಪಗೌಡ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ. ತಾವು ಮೂರು ಭಾರಿ ಶಾಸಕರಾಗಿದ್ದ ಅವಧಿಯಲ್ಲಿ ಸರಿಯಾಗಿ ಆಡಳಿತ ನೀಡದೇ, ಪಕ್ಷದ ಕಾರ್ಯಕರ್ತರ ಕಾಳಜಿ ವಹಿಸದ ಪರಿಣಾಮವಾಗಿ ಸೋಲು ಅನುಭವಿಸಿದ್ದಾರೆ, ಹೊರತು ದೇವದುರ್ಗ ಶಾಸಕ ಶಿವನಗೌಡ ಕಾರಣವಲ್ಲ ಎಂಬುದನ್ನು ಅರಿತುಕೊಳ್ಳಬೇಕು.
ಕ್ಷೇತ್ರದ ಜನತೆ ಪ್ರತಾಪಗೌಡ ಪಾಟೀಲ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರು, ಅಧಿಕಾರ ಅವಧಿಯನ್ನು ಅನುಭವಿಸದೇ ಜನರ ಆದೇಶವನ್ನು ಧಿಕ್ಕರಿಸಿ ಹಣದ ಆಸೆಗಾಗಿ, ಅಧಿಕಾರದ ಹಪಾಹಪಿಗಾಗಿ ಮರಳಿ ಬಿಜೆಪಿಗೆ ಬಂದಿರುವ ಪ್ರತಾಪಗೌಡರಿಗೆ ಕ್ಷೇತ್ರದ ಮತದಾರರು ಉಪ ಚುನಾವಣೆಯಲ್ಲಿತಕ್ಕ ಪಾಠ ಕಲಿಸಿದ್ದಾರೆ, ಆದರೆ ಸೋಲಿನ ಹತಾಸೆದಿಂದಾಗಿ ಅನಗತ್ಯ ಹೇಳಿಕೆಗಳನ್ನು ಕೆ.ಶಿವನಗೌಡ ನಾಯಕನ ವಿರುದ್ಧ ನೀಡುವುದು ಸರಿಯಿಲ್ಲ, ಇದೇ ರೀತಿ ಹೇಳಿಕೆ ನೀಡಿದರೆ ಶಿವನಗೌಡ ಅಭಿಮಾನಿ ಬಳಗದಿಂದ ಮಸ್ಕಿಯಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆವನ್ನು ನೀಡಿದ್ದಾರೆ.