ನಿಡಗುಂದಿ : ಯಲ್ಲಾಲಿಂಗ ಮಹಾರಾಜರ ಶಿಷ್ಯರಾದ ಪಟ್ಟಣದ ಭೀಮಾಶಂಕರ ಮಹಾರಾಜರ 37 ನೇ ಪುಣ್ಯತಿಥಿ ನಿಮಿತ್ತ ನಡೆಯುವ ಜಾತ್ರೆಯ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಅ.1 ಶನಿವಾರ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಪಟ್ಟಣದ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಲಿದೆ. ಪ್ರಥಮ 15001, ದ್ವಿತೀಯ 10001ರೂ, ತೃತೀಯ 7001 ರೂ, ಚತುರ್ಥ 5001 ರೂ ಬಹುಮಾನವಿದ್ದು, ನಾನಾ ವೈಯಕ್ತಿಕ ಬಹುಮಾನಗಳು ಇವೆ.
ಅ.2 ರಂದು ಬೆಳಿಗ್ಗೆ ರಾಜ್ಯ ಮಟ್ಟದ ಕೊಕ್ಕೊ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ 25,001 ರೂ, ದ್ವಿತೀಯ 15001 ರೂ, ತೃತೀಯ 10,001 ರೂ, ಚತುರ್ಥ 5001 ರೂ ಬಹುಮಾನವಿದೆ. ಅದೇ ದಿನ ಮುಕ್ತ ರಸಪ್ರಶ್ನೆ ಸ್ಪರ್ದೆ ಜರುಗಲಿದೆ.
ಅ.3 ರಂದು ಮುಕ್ತ ರಂಗೋಲಿ ಸ್ಪರ್ಧೆ, ಪುರಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಮ್ಯುಸಿಕಲ್ ಚೇರ್ ಸ್ಪರ್ಧೆ ಜರುಗಲಿದ್ದು, ನಾನಾ ಬಹುಮಾನಗಳು ಇವೆ. ಹೆಚ್ಚಿನ ವಿವರಗಳಿಗೆ 7204900975 ಗೆ ಸಂಪರ್ಕಿಸಲು ಕೋರಲಾಗಿದೆ.
ಜಾತ್ರೆಗೆ ಸಾಂಸ್ಕೃತಿಕ ಮೆರುಗು: ಜಾತ್ರೆ ಜನಪದ ಸಾಂಸ್ಕೃತಿಕ ಮೆರುಗು ಹೊಂದಿದ್ದು
ಭೀಮಾಶಂಕರ ಮಹಾರಾಜರ ಜಾತ್ರೆಯ ಮಹತ್ವದ ಘಟ್ಟ ಅ. 4 ರಂದು ಜರುಗಲಿದೆ. ಬೆಳಿಗ್ಗೆ ಗದ್ದುಗೆಗೆ ಲಿಂಗಾಭಿಷೇಕ, 10 ಕ್ಕೆ ಭೀಮಾಶಂಕರ ಮಹಾರಾಜರ ರಜತ ಮೂರ್ತಿ ಹಾಗೂ ಪಲ್ಲಕ್ಕಿಯ ಅದ್ಧೂರಿ ಮೆರವಣಿಗೆ ನಡೆಯಲಿದೆ. ರುದ್ರಮುನಿ ಸ್ವಾಮೀಜಿ, ಹಿಪ್ಪರಗಿಯ ಪ್ರಭು ಮಹಾರಾಜರು, ಸೀತಮ್ಮನಗಿರಿಯ ಡಾ ಎ.ಸಿ. ವಾಲಿ, ಸಾಡಾದ ಪ್ರಕಾಶ ಮಹಾರಾಜರು ಆಶೀರ್ವಚನ ನೀಡುವರು.
ರಾತ್ರಿ ಯಲ್ಲಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ವಿಜಯಲಕ್ಷ್ಮಿ ಭಜನಾ ಮಂಡಳಿ ಅವರ ಭಜನಾ ನಡೆಯಲಿದೆ.
ಅ.3 ರಂದು ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಅ.5 ರಂದು ಬೆಳಿಗ್ಗೆ ನಾನಾ ಭಾರ ಎತ್ತುವ ಸ್ಪರ್ಧೆಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಪದವಿ ಕಾಲೇಜಿಗೆ ಎಲ್.ಐ.ಸಿ.ತಂಡ ಭೇಟಿ

ಗುಲಾಬಚಂದ ಜಾಧವಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಮಂಜಪ್ಪ ಹಡೇ೯ಕರ (ಎಂ.ಎಚ್.ಎಂ.)ಪದವಿ ಮಹಾವಿದ್ಯಾಲಯಕ್ಕೆ ಬೆಳಗಾವಿ ರಾಣಿ ಚೆನ್ನಮ್ಮ…

ಆರ್ಕಿಟೆಕ್ಟ್ ಹೇಳಿದ್ರೆ ಕೇಸರಿ ಹಾಕ್ತೀನಿ: ಬಿ ಸಿ ನಾಗೇಶ್

ಉತ್ತರಪ್ರಭ ಸುದ್ದಿ ಗದಗ: ವಿವೇಕ ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಹಚ್ಚುವ ಆರ್ಕಿಟೆಕ್ಟರ ಏನಾದರೂ ಕೇಸರಿ…

ಕೋಮು ಸೌಹಾರ್ದಕ್ಕೆ ಸಾಕ್ಷಿಯಾದ ಹಿಂದೂ-ಮುಸ್ಲಿಂ ಯುವಕರು

ನರೆಗಲ್ಲ: ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ಹಿಂದೂ, ಮುಸ್ಲಿಂ ಧರ್ಮದ ಜನರು…

ಲಿಂ.ತೋಂಟದ ಸಿದ್ದಲಿಂಗ ಶ್ರೀಗಳವರ “ಆಲಮಟ್ಟಿ ಪ್ರೇಮ ಕಾವ್ಯಭಾವ” ಅನನ್ಯ !!!

ಬರಹ : ಗುಲಾಬಚಂದ ಆರ್.ಜಾಧವ. ಆಲಮಟ್ಟಿಆಲಮಟ್ಟಿ (ವಿಜಯಪುರ ಜಿಲ್ಲೆ) : ಮನದಾಳದಿಂದ ಹೊರಡುವ ನಿಷ್ಕಲ್ಮಶ,ನಿಸ್ವಾರ್ಥವುಳ್ಳ ಪ್ರೀತಿ…