ಕ್ರೀಡೆಗಳಿಂದ ಆರೋಗ್ಯಕರ ಭಾವನೆ

ಉತ್ತರಪ್ರಭ ಸುದ್ದಿ
ನಿಡಗುಂದಿ: ಹಲ ಬಗೆಯ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವದರಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಲು ಸಾಧ್ಯ ಎಂದು ತಹಶೀಲ್ದಾರ ಅನೀಲಕುಮಾರ ಢವಳಗಿ ಹೇಳಿದರು. ಜಿಲ್ಲಾಡಳಿತ, ಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಹಾಗು ಕನಾ೯ಟಕ ಕ್ರೀಡಾ ಪ್ರಾಧಿಕಾರ ಮತ್ತು ಮಣಗೂರ ಸರಕಾರಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜರುಗಿದ ನಿಡಗುಂದಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯಕರ ಭಾವನೆಗೆ ಹಾಗು ಸುಂದರ ಭೂಷಣಕ್ಕೆ ಕ್ರೀಡೆಗಳು ಪ್ರೇರಣೆ ನೀಡುತ್ತವೆ ಎಂದರು.

ಮುಖ್ಯ ಅತಿಥಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ.ಗೌಡರ, ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ ಜೊತೆಗೆ ಪ್ರತಿಭೆ ಪ್ರಕಾಶನಕ್ಕೆ ವರದಾನ. ಜ್ಞಾನ ಹೆಚ್ಚಳ, ಕ್ರಿಯಾಶೀಲತೆ, ಪರಿಪೂರ್ಣ ವ್ಯಕ್ತಿತ್ವ ಹೊಂದಲು ಇಂಥ ಗ್ರಾಮೀಣ ಕ್ರೀಡೆಗಳು ಉತ್ತಮ ವೇದಿಕೆಯಾಗಿದ್ದು ಕ್ರೀಡಾ ಕ್ಷೇತ್ರವನ್ನು ಯಾರು ಕಡೆಗಣಿಸಬಾರದು ಎಂದರು.

ನಿಡಗುಂದಿ ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಗ್ರಾಮೀಣ ಭಾಗದಲ್ಲಿ ಪ್ರತಿಭಾಶಾಲಿ ಕ್ರೀಡಾಪಟುಗಳಿದ್ದಾರೆ. ಕ್ರೀಡಾ ಹವ್ಯಾಸ ಬೆಳೆಸಿಕೊಂಡರೆ ಭಾಗಶಃ ರೋಗ ರುಜಿನುಗಳಿಂದ ಬಹುಪಾಲ ದೂರಯಿರಬಹುದು.ದೈಹಿಕ ಸಾಮಥ್ರ್ಯ ಜೀವನ ಸಂತಸಕ್ಕೆ ಕಾರಣ.ಕ್ರೀಡೆಗಳು ನಿಜಕ್ಕೂ ಸ್ವಸ್ಥ ಸಮಾಜದ ಆಸ್ತಿ. ಕ್ರೀಡೆಗಳಿಗೆ ಮಹತ್ವ ನೀಡಿ ಭವಿಷ್ಯತ್ತಿನ ಜೀವನ ಉಲ್ಲಾಸಮಯವಾಗಿಸಿಕೊಳ್ಳಿ ಎಂದರು. ಅತಿಥಿಗಳಾಗಿ ಬಸವರಾಜ ವಂದಾಲ, ಆರ್.ಎ.ನದಾಫ್, ಎಂ.ಎಸ್.ಮುಕಾತಿ೯ಹಾಳ, ಉದಯಕುಮಾರ ಮಾಶೆಟ್ಟಿ, ಶಿವಾನಂದ ಮಂಗಾನವರ, ಬಿ.ಎಂ.ಪಾಟೀಲ, ಎಂ.ಎಂ.ದೊಡಮನಿ, ಶಿವನಗೌಡ ಪಾಟೀಲ, ಕೆ.ಎಸ್.ಧನಶೆಟ್ಟಿ, ಎಸ್.ಎಸ್.ಅವಟಿ ಇತರರಿದ್ದರು.

Exit mobile version