ರೈತರ ಹೋರಾಟಕ್ಕೆ ಸ್ಪಂದಿಸಿ ಶೀರ್ಘದಲ್ಲೆ ರೈತರ ಬೇಡಿಕೆಗಳನ್ನ ಈಡೇರಿಸಲು ಭರವಸೆ

ಉತ್ತರಪ್ರಭ ಸುದ್ದಿ

ಗದಗ: ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ರೈತರು ಶಿಂಗಟಾಲೂರ ಏತ ನೀರಾವರಿ ಎಡದಂಡೆ ಕಾಲುವೆ ಕಳಪೆ ಕಾಮಗಾರಿ ಹಾಗೂ ರೈತರ ಜಮೀನುಗಳಿಗೆ 3-4 ನಾಲ್ಕು ವರ್ಷದಿಂದ ನಷ್ಟದ ಪರಿಹಾರವನ್ನು ಒದಗಿಸಬೇಕೆಂದು, ಡೋಣಿ ಗ್ರಾಮದ ರೈತರು ಕಳೆದ 3-4ವರ್ಷದಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಯಾವುದೇ ರೀತಿಯ ಪರಿಹಾರ ಒದಗಿಸಲು ಹಿನ್ನಡೆಯಾಗಿದ್ದು ಕಾರಣದಿಂದಾಗಿ ರೈತರು 06/08/2022ರಂದು ಮಾನ್ಯ ಜಿಲ್ಲಾಡಳಿತ ಭವನದ ಮುಂದೆ ಧರಣಿ ಸತ್ಯಾಗ್ರಹ ಪ್ರಾರಂಭ ಮಾಡಿ ಇಂದಿಗೆ 11 ದಿನಗಳಾದರೂ ಅಧಿಕಾರಿಗಳು ಪರಿಹಾರ ಒದಗಿಸುವಲ್ಲಿ ವಿಫಲರಾಗಿರುವ ಕಾರಣ, ರೈತರ ವಿವಿಧ ಬೇಡಿಕೆಗಳನ್ನ ಈಡೇರಿಸಬೇಕೆಂದು ಹಾಗೂ ಶಿಂಗಟಾಲೂರ ಏತ ನೀರಾವರಿ ಎಡದಂಡೆ ಕಳಪೆಯಾಗಿದ್ದರ ಬಗ್ಗೆ ಪರಿಶೀಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತನಿಖೆ ಮಾಡಲು ಸೂಕ್ತ ನಿರ್ದೇಶನ ನೀಡಬೇಕೆಂದು ಹಾಗೂ ಕಳೆದ 3-4ವರ್ಷದಿಂದ ರೈತರ ಜಮೀನುಗಳಿಗೆ ಆದ ನಷ್ಟ ಪರಿಹಾರವನ್ನ ಶಿರ್ಘವೆ ಒದಗಿಸಿಕೊಡಬೇಕೆಂದು ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಕಳೆದ ಮೂರು ನಾಲ್ಕು ವರ್ಷದಿಂದ ರೈತರ ವಿವಿಧ ಬೇಡಿಕೆಗಳನ್ನ ಶಿರ್ಘವೇ ಈಡೇರಿಸಲು ತಾವೆ ಜವಾಬ್ದಾರಿ ತಗೆದುಕೊಂಡು ಜಮೀನುಗಳಿಗೆ ಆದ ನಷ್ಟ ಪರಿಹಾರ ಒದಿಸಿಕೊಡುತ್ತೇವೆ, ಅಂತಾ ಭರವಸೆ ನೀಡಿದರು. ಅವರ ಭರವಸೆಗೆ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದ ರೈತರು ಉಪವಾಸ ಸತ್ಯಾಗ್ರಹವನ್ನ ಹಿಂಬಪಡೆಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಸೇನಾ ಕರ್ನಾಟಕ ಗದಗ ಜಿಲ್ಲಾ ಸಂಚಾಲಕರಾದ ಮಂಜಯ್ಯಸ್ವಾಮಿ ಅರವಟಗಿಮಠ ರೈತ ಮುಖಂಡರುಗಳಾದ ಶಂಕರಗೌಡ ಹೊಸಮನಿ, ನಾಗಲಿಂಗಯ್ಯ ಮುತ್ತಾಳಮಠ

Exit mobile version