ಉತ್ತರಪ್ರಭ
ಗದಗ: ಒಂದು ತಿಂಗಳಿನಿಂದ ಗದುಗಿಗೆ ಜಿಲ್ಲಾಧಿಕಾರಿಗಳ ನೇಮಕಾತಿಯನ್ನು ಸರ್ಕಾರ ಹೋರಡಿಸಿದ್ದು ಈ ತಿಂಗಳಲ್ಲೇ ಮೂರನೇಯದಾಗಿ ಶಿವಮೊಗ್ಗ ಜಿಲ್ಲೆಯ ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ (ಐ.ಎ.ಎಸ್) ವೈಶಾಲಿ ಎಮ್.ಎಲ್ (KN 2013) ರನ್ನು ಇಂದು ಗದಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಸರ್ಕಾರ ಆದೇಶ ಹೋರಡಿಸಿದೆ.

ಇನ್ನು ಮೂರು ದಿನದಲ್ಲಿ ಕೇಂದ್ರ ಸರಕಾರದ ಆದೇಶದಂತೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರತಿ ಮನೆ ಮನೆಗೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಅದ್ದುರಿಯಾಗಿ ಸಂಭ್ರಮಿಸಲು ತಿಳಿಸಿದ್ದು, ಒಂದೆಡೆ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಚಿತ್ರದುರ್ಗ ಹಾಗೂ ಗದಗ ಇವೆರಡು ಜಿಲ್ಲೆಗೆ ಉಸ್ತುವಾರಿಯ ಜವಾಬ್ದಾರಿ ನೀಡಿದ್ದು. ಆ. 15ರಂದು ಚಿತ್ರದುರ್ಗದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದು, ಅಲ್ಲದೆ ಜಿಲ್ಲಾದ್ಯಂತ ವಿಪರಿತ ಮಳೆಯಿಂದಾಗಿ ರೈತನು ತನ್ನ ಜೀವನೋಪಾಯಕ್ಕೆ ನಂಬಿ ಬೆಳೆದ ಬೆಳೆ ನಾಶವಾಗಿದ್ದು ಮತ್ತು ವಾಸಿಸುವ ಮನೆಗಳು ಮಳೆಗೆ ಹಾನಿಯಾಗಿದ್ದು, ಸಮಯಕ್ಕೆ ಸರಿಯಾಗಿ ಪರಿಶೀಲನೆ ನಡೇಸದ ಅಧಿಕಾರಿಗಳಿಗು ಯಾರು ಕೇಳುವರಿಲ್ಲದಂತಾಗಿದೆ. ಗದಗ ಜಿಲ್ಲೆಯು ಒಂತರಾ ತಾಯಿ ಇಲ್ಲದ ತಬ್ಬಲಿಯಂತಾಗಿದೆ.
👆ಜಿಲ್ಲೆಯ ಹಲವೆಡೆ ಬೆಳೆ ಹಾನಿಯಾಗಿರು ದೃಶ್ಯಗಳು
ನಮ್ಮ ಜಿಲ್ಲೆಗೆ ಏಕೆ ಸರ್ಕಾರ ಬೇಜವಾಬ್ದಾರಿ ತೋರುತ್ತಿದೆ ಎನ್ನುವದು ಜಿಲ್ಲೆಯ ಜನರಲ್ಲಿ ಯಕ್ಷ ಪ್ರಶ್ನೆಯಾಗಿದೆ. ಈಗಲಾದರು ನಮ್ಮ ಜಿಲ್ಲೆಯ ಸ್ಥಿತಿ ಗತಿ ನೋಡಿಕೊಳ್ಳಲು ಅಧಿಕೃತವಾಗಿ ಒಬ್ಬ ಉಸ್ತುವಾರಿ ಸಚಿವರನ್ನು ಹಾಗೂ ಜಿಲ್ಲಾಧಿಕಾರಿಯನ್ನು ಸರ್ಕಾರ ನೇಮಕ ಮಾಡಲೆಂದು ಇಲ್ಲಿಯ ಜನರ ಮಾತಾಗಿದೆ.