ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಅಗತ್ಯ ಪ್ರೋ. P. S. ಅಣ್ಣಿಗೇರಿ

ನರಗುಂದ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಶ್ರೀ ಸಿದ್ದೇಶ್ವರ ಪ್ರಥಮ ದರ್ಜೆ ಕಾಲೇಜು ನರಗುಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ಕಾಲೇಜ್ ಕಬಡ್ಡಿ ಲೀಗ್’ ಎಂಬ ಹೆಸರಿನಡಿ ಕಬಡ್ಡಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು. ಕಬಡ್ಡಿ ರಾಷ್ಟೀಯ ಕ್ರೀಡೆಯಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯವಾಗಿದೆ. ಕಬಡ್ಡಿ ಒಂದು ಆಕರ್ಷಣೀಯ ಮತ್ತು ಮಹತ್ವದ ಕ್ರೀಡೆಯಾಗಿದೆ. ನಮ್ಮ ಕಾಲೇಜಿನಲ್ಲಿ ಕಬಡ್ಡಿ ಕ್ರೀಡೆಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿ ಮೊದಲಿನಿಂದಲೂ ಆಯ್ಕೆ ಆಗಿದ್ದಾರೆ ಆದರೆ ಮೊದಲ ಬಾರಿಗೆ 10 ಜನ ವಿದ್ಯಾರ್ಥಿನಿಯರು ಒಂದೇ ಕಾಲೇಜಿನಿಂದ ಆಯ್ಕೆ ಆಗಿದ್ದು ನಮ್ಮ ಕಾಲೇಜಿನ ವಿಶೇಷ ಎಂದು ಪ್ರೊ ಸೌದಾಗರ್ ಅವರು ಹೇಳಿದರು. ನಂತರ ಮಾತನಾಡಿದ ಪ್ರೊ p s ಅಣ್ಣಿಗೇರಿ ಅವರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು, ಕ್ರೀಡೆಯಲ್ಲಿ ಸೋಲು ಗೆಲವು ಇದ್ದಿದ್ದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.

ಕಬಡ್ಡಿ ಪಂದ್ಯಾವಳಿಯಲ್ಲಿ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳ ರಾಯಲ್ ಬಾಯ್ಸ್ ಜಯಶಾಲಿ ಆದರೆ, ವಿದ್ಯಾರ್ಥಿನಿಯರ ಪಂದ್ಯಾವಳಿಗಳಲ್ಲಿ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿನಿಯರು ಜಯಶಾಲಿಗಳಾದರು. ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಗಮಿಸಿದ್ದ ಪುರಸಭೆ ಸದಸ್ಯ ರಚನಾಗೌಡ ಪಾಟೀಲ ಮಾತನಾಡಿ ಪ್ರತಿ ವರ್ಷ ಇದೇ ರೀತಿ ಕಾಲೇಜು ಮಟ್ಟದಲ್ಲಿ ಕ್ರೀಡಾ ಕೂಟಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯರಾದ m.d. ಕಮತಗಿ, ಪ್ರೊ p.s.ಅಣ್ಣಿಗೇರಿ, ಪ್ರೊ ಸೌದಾಗಾರ್ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.

Exit mobile version