ರಾಜ್ಯದಲ್ಲಿ PFI SDPI ಸಂಘಟನೆಗಳನ್ನ ಬ್ಯಾನ್ ಮಾಡಬೇಕು: ಬಾಬು ಬಾಕಳೆ ಆಗ್ರಹ

ಉತ್ತರಪ್ರಭ

ಗದಗ: ರಾಜ್ಯದಲ್ಲಿ ಪಿ ಎಫ್ ಐ. ಎಸ್ ಡಿ ಪಿ ಐ. ಸಂಘಟನೆಗಳನ್ನ ರಾಜ್ಯ ಸರ್ಕಾರ ಕೂಡಲೇ ಬ್ಯಾನ್ ಮಾಡಬೇಕೆಂದು ಕ್ರಾಂತಿ ಸೇನಾ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಗೃಹ ಸಚಿವರಿಗೆ ಒತ್ತಾಯಿಸಿ ಹಿಂದೂ ಕಾರ್ಯಕರ್ತನ ಗುರಿಯಾಗಿಸಿಕೊಂಡು ಹತ್ಯೆ ನಡೆಸುತ್ತಿರುವ ದೇಶದ್ರೋಹಿ ಸಂಘಟನೆಗಳನ್ನ ಬ್ಯಾನ್ ಮಾಡುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಹಿಂದುಗಳ ರಕ್ಷಣೆಗಾಗಿ ಪರ್ಯಾಯ ರಾಜಕೀಯ ಶಕ್ತಿ ಬೇಕಾಗಿದೆ ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಕೂಡ ಹಿಂದುಗಳ ರಕ್ಷಣೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಸರ್ಕಾರ ಉಗ್ರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಡೆಮುರು ಕಟ್ಟುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಒಬ್ಬ ಕೊಲೆಗಡಕರ ವ್ಯಕ್ತಿಗೂ ಶಿಕ್ಷೆ ಆಗಿಲ್ಲ ಎಲ್ಲರೂ ಬೇಲ್ ಮೂಲಕ ಹೊರಗೆ ಬಂದು ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಬಜರಂಗದಳ ಕಾರ್ಯಕರ್ತ ಹರ್ಷನ ಕೊಂದ ಕೊಲೆ ಗಡುಕರಿಗೆ ಜೈಲಿನಲ್ಲಿ ಮೊಬೈಲ್ ನೀಡುವ ಮುಖಾಂತರ ಎಲ್ಲ ರೀತಿಯ ಸೌಲತ್ತನ ಕೊಲೆ ಗಡುಕರಿಗೆ ನೀಡಿರುವುದು ಇದನ್ನ ರಾಜ್ಯದ ಜನತೆ ಮಾಧ್ಯಮದಲ್ಲಿ ಕಣ್ಣಾರೆ ನೋಡಿದ್ದಾರೆ ಹೀಗಾಗಿ ಹಿಂದುಗಳಿಗೆ ಸರ್ಕಾರದ ಮೇಲೆ ಭರವಸೆ ಕಡಿಮೆಯಾಗುತ್ತಿದೆ. ರಾಜ್ಯ ಸರ್ಕಾರ ವಿಶ್ವಾಸ ಕಳೆದುಕೊಳ್ಳುತ್ತಿದೆ.

ಈ ಕೂಡಲೇ ಸರ್ಕಾರ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ರೀತಿಯಲ್ಲಿ ಕಠಿಣ ಕಾನೂನು ಕ್ರಮ ಕರ್ನಾಟಕ ಸರ್ಕಾರಕ್ಕೆ ಅವಶ್ಯವಾಗಿ ಕೈಗೊಳ್ಳಬೇಕಾಗಿದೆ, ಎಂದರು ಸುಳ್ಳಾದ ಬಿಜೆಪಿ ಕಾರ್ಯಕರ್ತ ಪ್ರವೀಣ ಇವರಿಗೆ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಎನ್ಕೌಂಟರ್ ಮಾಡಬೇಕು. ಹಾಗೂ ಪ್ರವೀಣ ಅವರ ಮನೆಗೆ ತೆರಳಿ ಅವರ ತಂದೆ ತಾಯಿ ಹೆಂಡತಿಗೆ ಹಾಗೂ ಕುಟುಂಬದವರಿಗೆ ಸ್ವಂತನ ಹೇಳುವ ಕೆಲಸ ಮಾಡಲಿ ಹಾಗೂ ಅವರ ಹೆಂಡತಿಗೆ ಸರ್ಕಾರಿ ನೌಕರಿ ನೀಡಿಲಿ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಿ ಕುಟುಂಬಕ್ಕೆ ನೆರವಾಗಲಿ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ಕ್ರಾಂತಿ ಸೇನಾ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಪ್ರಕಟಣೆಯ ಮುಖಾಂತರ ಹೇಳಿದರು.

Exit mobile version