ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹ: ಒಂದು ವರ್ಷ ಕಾಲ ಕುಡಿಯುವ ನೀರಿಗೆ ಸಮಸ್ಯೆ ಅಗದು- ಸಚಿವ ಸಿ.ಸಿ.ಪಾಟೀಲ


ಆಲಮಟ್ಟಿ: ಆಲಮಟ್ಟಿ ಜಲಾಶಯದಲ್ಲಿಗ ಕಳೆದ ವರ್ಷಕ್ಕಿಂತಲೂ ಈ ಬಾರಿ ಈ ವೇಳೆ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಮುಂಗಾರು ಬೆಳೆಗಳಿಗೆ ಇನ್ನೂ ಎರಡು ತಿಂಗಳು ತೊಂದರೆ ಇಲ್ಲ. ಒಂದು ವರ್ಷಹಳಕಾಲ ಕುಡಿಯುವ ನೀರಿನ ಸಮಸ್ಯೆವಾಗದು ಎಂಬ ಭರವಸೆ ಇದೆ ಎಂದು ಕೃಷ್ಣಾ ನದಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಸಚಿವ ಸಿ.ಸಿ.ಪಾಟೀಲ ತಮ್ಮ ಇಂಗಿತ ಇಲ್ಲಿ ವ್ಯಕ್ತಪಡಿಸಿದರು. ಆಲಮಟ್ಟಿಯಲ್ಲಿ ಮಂಗಳವಾರ ನೀರಾವರಿ ಸಲಹಾ ಸಮಿತಿ ಸಭೆಗೂ ಮುನ್ನ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಕಳೆದ ವರ್ಷ ಈ ದಿನ ಜಲಾಶಯಕ್ಕೆ 2.ಲಕ್ಷ 90 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಈ ಸಲ ಕೇವಲ 30-34 ಸಾವಿರ ಕ್ಯುಸೆಕ್ ನೀರು ಸದ್ಯ ಹರಿಯುತ್ತಿದೆ. ಒಳ ಹರಿವು ಕ್ಷೀಣಿಸಿದರೂ ಸಹ ಕಳೆದ ಸಲಕ್ಕಿಂತ ಜಲಾಶಯದಲ್ಲಿ 50 ಟಿಎಂಸಿ ನೀರು ಹೆಚ್ಚಿಗೆ ಇದೆ. ಆದರೆ ಪ್ರಸ್ತುತ ಒಳಹರಿವು ಕಡಿಮೆವಾಗಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟçದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಇಲ್ಲಿ ನೀರಿನ ಸಮಸ್ಯೆ ಉದ್ಭವಿಸುವದಿಲ್ಲ ಎಂದರು.
ರೈತರಿಗೆ ನೀರು ಅತ್ಯಂತ ಅವಶ್ಯಕ. ನಿರಂತರ ಅಥವಾ ವಾರಾಬಂದಿ ಮೇಲೆ ನೀರು ಬಿಡಲು ಸಾಧ್ಯವೇ ? ಸದ್ಯದ ನೀರಿನ ಮಟ್ಟ, ಬಿಡಬೇಕಾದ ಕನಿಷ್ಟ ಕ್ಯುಸೆಕ್ ನೀರು? ಎಷ್ಟು ಬಿಡಬಹುದು, ಎಷ್ಟು ದಿನದವರೆಗೆ ನೀರು ಹರಿಸಬಹುದು,ಯಾವ ಬೆಳೆಗೆ ಯಾವ ಸಮಯದಲ್ಲಿ ನೀರು ಹರಿಸಬೇಕೆನ್ನುವ ಎಂಬಿತ್ಯಾದಿ ವಿಷಯಗಳ ಚಚೆ9 ಸಭೆಯಲ್ಲಿ ಮಾಡಲಾಗುವುದು. ಹಿಂದಿನ ಎಲ್ಲ ಸಂಪೂರ್ಣ ಮಾಹಿತಿ ಪಡೆದುಕೊಂಡು ಜೊತೆಗೆ ಎಲ್ಲರ ಅಭಿಪ್ರಾಯ ತಗೆದುಕೊಂಡು ಸಭೆಯಲ್ಲಿ ಚಚಿ9ಸಿದ ಬಳಿಕ ಸೂಕ್ತ ತೀಮಾ9ನ ಕೈಗೊಳ್ಳಲಾಗುವುದು ಎಂದರು.
ಮಹಾರಾಷ್ಟç ರಾಜ್ಯದ ಒತ್ತಡಕ್ಕೆ ಮಣಿದು ಆಲಮಟ್ಟಿ ಜಲಾಶಯ ಭರ್ತಿ ಮಾಡದೇ, ಜಲಾಶಯದ ಮಟ್ಟವನ್ನು ಕಡಿಮೆ ಮಾಡಲಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಸಚಿವ ಸಿ.ಸಿ. ಪಾಟೀಲ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಬೆಂಗಳೂರಿನಿ0ದ ಆಲಮಟ್ಟಿಗೆ ವರ್ಗಾವಣೆಯಾಗಿ ಮೂರು ಬಾರಿ ಸರ್ಕಾರ ಆದೇಶಿಸಿದ್ದರೂ, ಇನ್ನೂ ಸ್ಥಳಾಂತರವಾಗಿಲ್ಲ ಎಂಬ ಪ್ರಶ್ನೆಗೂ ಸಮರ್ಪಕ ಉತ್ತರ ಸಚಿವರಿಂದ ಬರಲಿಲ್ಲ. ನಿಮ್ಮ ಜಿಲ್ಲೆಯವರೇ ಜಲಸಂಪನ್ಮೂಲ ಸಚಿವರಿದ್ದು, ಅವರಿಗೆ ಕೇಳಿ ಎಂದು ಜಾರಿಕೊಂಡರು. ಇನ್ನೂ ಪಂಚಮಸಾಲಿ 2.0 ಮೀಸಲಾತಿ ಪ್ರಶ್ನೆಗೂ ಉತ್ತರಿಸಲಿಲ್ಲ. ಕೃಷಿ, ಜನಪ್ರತಿನಿಧಿ, ಕೆಬಿಜೆಎನ್ ಎಲ್ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ, ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಲು ತೀರ್ಮಾನಿಸಲಾಗುವುದು ಎಂದರು.
ಕಾಂಗ್ರೆಸ್ ಉಡಿಸ್ ಅಗಲಿದೆ ! ಸಚಿವ ಉಮೇಶ್ ಕತ್ತಿ ಭವಿಷ್ಯ
ಇನ್ನೂ ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಗುದ್ದಾಟ ನಡೆದಿದ್ದು, ಇದರಿಂದಾಗಿ ಶೀಘ್ರದಲ್ಲಿಯೇ ಕಾಂಗ್ರೆಸ್ ಚೂರು ಚೂರಾಗಲಿದೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಹೇಳಿದರು. ಆಲಮಟ್ಟಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅವರು ಮಾತನಾಡಿದರು. ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದರೂ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾವ ಹುಚ್ಚು ಹಿಡಿದಿದೆಯೋ ಗೊತ್ತಿಲ್ಲ, ಇದರಿಂದ ಕಾಂಗ್ರೆಸ್ ದಿವಾಳಿಯಾಗಲಿದೆ ಎಂದರು. ಬಿಜೆಪಿಯ ಉತ್ತಮ ಯೋಜನೆಗಳಿಂದಾಗಿ ಬಿಜೆಪಿ ಮುಂದಿನ ಐದೂ ವರ್ಷ ಅಧಿಕಾರದಲ್ಲಿರಲಿದೆ ಎಂದರು.
ನನಗೆ ಇನ್ನೂ 60 ವರ್ಷ, ಬಿಜೆಪಿಯ ನಿಯಮದ ಪ್ರಕಾರ ಇನ್ನೂ ಸಕ್ರಿಯ ರಾಜಕಾರಣದಲ್ಲಿರಲು ಇನ್ನೂ 15 ವರ್ಷ ಅವಕಾಶವಿದೆ, ಅಷ್ಟರೊಳಗೆ ನಮಗೂ ಮುಖ್ಯಮಂತ್ರಿ ಅವಕಾಶ ಬರುತ್ತದೆ, ನಾನೂ 9 ಬಾರಿ ಆರಿಸಿಬಂದಿದ್ದು, ಮುಖ್ಯಮಂತ್ರಿಯಾಗಲೂ ಎಲ್ಲಾ ಅರ್ಹತೆಯಿದೆ ಎಂದರು. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ತಾರತಮ್ಯ ಮುಂದುವರೆದರೇ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ, ಅದಕ್ಕೆ ಉತ್ತರ ಕರ್ನಾಟಕ ದ ಬಹುತೇಕ ಶಾಸಕ, ಸಂಸದರ ಸಹಮತವಿದೆ, ಕೆಲ ಒತ್ತಡದ ಕಾರಣ ಮಾತನಾಡದೇ ಸುಮ್ಮನಿದ್ದಾರೆ ಎಂದರು. ವಿಜಯಪುರದಲ್ಲಿ ಜಿಲ್ಲೆಯ ಕೆಡಿಪಿ ಸಭೆ ನಿನ್ನೆ ನಡೆಸಿದ್ದು, ಜಿಲ್ಲೆಯ ಸಮಗ್ರದ ಅಭಿವೃದ್ಧಿಗೆ ಹಲವು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

Exit mobile version