ನಾಳೆಯಿಂದ ಗದಗ ನಗರದಲ್ಲಿ “ಅಪೋಲೋ ಸರ್ಕಸ್”

ಉತ್ತರಪ್ರಭ

ಗದಗ: ಈ ಮೊದಲು ಅನೇಕ ನಗರಗಳಲ್ಲಿ ಸಾವಿರಾರು ಸರ್ಕಸ್ ಶೋ ಗಳನ್ನು ನೀಡಿದ್ದು, ಲಕ್ಷಾಂತರ ಪ್ರೇಕ್ಷಕರನ್ನು ರಂಜಿಸಿದೆ. ಕೊರೋನಾದ ನಂತರ ಈಗ ಗದಗ ನಗರದ ಜನತೆಯ ಮನರಂಜನೆಗಾಗಿ ಅಂಜುಮನ್ ಸ್ಕೂಲ್ ಗ್ರೌಂಡನಲ್ಲಿ ನಾಳೆ ದಿನಾಂಕ 23.07.2022ರಂದು ಶಾಸಕ ಎಚ್.ಕೆ.ಪಾಟೀಲ್ ಉದ್ಘಾಟಿಸುವರು.

ನಿವು ಸರ್ಕಸ್‌ನಲ್ಲಿ ನೋಡುತ್ತಿದ್ದಂತಹ 60 ಅಡಿ ಎತ್ತರದಲ್ಲಿ ತುಂಬಾ ಅಪಾಯಕಾರಿ ಜೋಕಾಲೆ ಆಟ (ಫ್ಲೈಯಿಂಗ್), ರಿಂಗ್ ಡ್ಯಾನ್ಸ್, ಗೋಲಾಕಾರದ ಸಣ್ಣ ಗ್ಲೋಬಿನಲ್ಲ ಬೈಕ ಕಸರತ್ತು, ಫೈಯರ ಡ್ಯಾನ್ಸ, 60 ಅಡಿ ಎತ್ತರದ ವರೆಗೆ ಜೋಡಿಯಿಂದ ನವರಪಟ್ಟಿ, ಜಾಗಲಿಂಗ್, ಸ್ಟಿಕ್ ಜಾಗಲಿಂಗ್, ಲಟ್ಟು ಶೋ, ಸೈಕಲ್ ಬ್ಯಾಲೆನ್ಸ್, ಬೋನ್‌ಲೆಸ್ ಕ್ಯಾಂಡಲ್, ರೂಲಿಂಗ್ ಬ್ಯಾಲೆನ್ಸ್, ರಷ್ಯಾ ರೋಪ್ ಹಾಗೂ ಅನೇಕ ತರಹದ ಮೈನೆರಳಿಸುವಂತಹ ಕಸರತ್ತುಗಳು ನೋಡಲು ಸಿಗುತ್ತವೆ.

ಮಕ್ಕಳ ಮನೋರಂಜನೆಗಾಗಿ ಅತಿ ಗಿಡ್ಡ ಜೋಕರ್ ಗಳಿಂದ ಹಾಸ್ಯ ಚಟಾಕಿ, ವಿದೇಶಿ ನಾಯಿಗಳಿಂದ ಅನೇಕ ತರಹದ ಕಸರತ್ತುಗಳನ್ನು ಈ ಸರ್ಕಸ್‌ನಲ್ಲಿ ನೋಡಬಹುದಾಗಿದೆ.
ಈ ಸರ್ಕಸ್ ಎರಡು ಗಂಟೆ ಅವಧಿಯದ್ದಾಗಿದ್ದು, ಟಿಕೆಟ್ ದರವು 100, 150, 200 ರೂಗಳ ಮುರುಭಾಗದಲ್ಲಿ ವಿಂಗಡಿಸಲಾಗಿದ್ದು, ದಿನಕ್ಕೆ 3 ಆಟಗಳಿದ್ದು ಮದ್ಯಾಹ್ನ 1-00 ಘಂಟೆಗೆ, ಸಾಯಂಕಲಾ 4-00 ಘಂಟೆಗೆ, ರಾತ್ರಿ 7-00 ಘಂಟೆಗೆ, ತಾವುಗಳು ಸಂಪೂರ್ಣ ಪರಿವಾರದೊಂದಿಗೆ ನೋಡಬಹುದಾಗಿದೆ.

ಈ ಸರ್ಕಸ್ ಕಂಪನಿಯಲ್ಲಿ ಸುಮಾರು 40 ಸಿಬ್ಬಂದಿಗಳಿದ್ದಾರೆ. ಕರೋನಾ ನಂತರ ಸರ್ಕಸ್ ನಡೆಸುವುದು ತುಂಬಾ ಕಷ್ಟವಾಗುತ್ತಿದೆ, ಸಿಬ್ಬಂದಿಗಳ ಊಟದ ವ್ಯವಸ್ಥೆ, ಸಂಬಳ ಮತ್ತು ಇತರೆ ಖರ್ಚುಗಳನ್ನು ಸರಿದೂಗಿಸಲು ತುಂಬಾ ಕಷ್ಟವಾಗುತ್ತಿದೆ. ಅದಲ್ಲದೆ ಈಗಿನ ಕಾಲದಲ್ಲಿ ಸರ್ಕಸ್ ನಡೆಸಲು ಯೋಗ್ಯವಾದ ಮೈದಾನಗಳು ಸಿಗುವುದಿಲ್ಲ.

ಪ್ರಾಣಿಗಳನ್ನು ನಿರ್ಬಂಧ ಮಾಡಿದ ಮೇಲೆ ಸರ್ಕಸ್‌ ಮೇಲೆ ತುಂಬಾ ಹೊಡೆತ ಬಿದ್ದಿದೆ. ಈಗ ಕರೋನಾ ಬಂದ ಮೇಲೆ ಸರ್ಕಸ್ ವ್ಯವಸಾಯದ ಮೇಲೆ ತುಂಬಾ ಪೆಟ್ಟು ಬಿದ್ದಿದೆ. ಕೊರೊನಾ ಕಾಲದಲ್ಲಿ ನಾವು ಪಟ್ಟ ಕಷ್ಟ ಹೇಳಲಾಗದು. ಸಿಬ್ಬಂದಿಗಳ, ವಾಸ, ಊಟ, ಸಂಬಳ ಮುಂತಾದ ಖರ್ಚುಗಳಗಾಗಿ ನಾವು ತುಂಬಾ ಪರದಾಡಬೇಕಾಯಿತು. ಆದರೂ ಹೇಗಾದರೂ ಮಾಡಿ ಈ ವ್ಯವಸಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಸರ್ಕಸ್ ಎನ್ನುವುದು ನಮ್ಮ ಸಂಸ್ಕೃತಿಯ ಒಂದು ಭಾಗ ಮತ್ತು ಅಪ್ಪಟ ನೈಜ ಕಲೆ, ಈ ಕಲೆಯನ್ನು ಉಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಸರ್ಕಸ್‌ನ ಶೋ ನೋಡಿ ನಮಗೆ ಸಹಕರಿಸಿ.

-ಸನಿಲ್ ಜಾರ್ಜ (ಸರ್ಕಸ್ ಮಾಲಿಕ)

-ವಿಜಯ್ ಪಿಂಟೋ (ವ್ಯವಸ್ಥಾಪಕರು)

Exit mobile version