ಕ್ಯಾಶ್ ಲೆಸ್ಸ್ ಹೆಲ್ತ್ ಟ್ರೀಟ್ಮೆಂಟ್ ಸೇವೆ ಶೀಘ್ರ ಜಾರಿಗೆ – ಷಡಕ್ಷರಿ

ಉತ್ತರಪ್ರಭ
ಆಲಮಟ್ಟಿ : ರಾಜ್ಯದ ಸರಕಾರಿ ನೌಕರರಿಗೆ ಹಾಗು ಅವರ ಅವಲಂಬಿತ ಕುಟುಂಬಕ್ಕೆ ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ಕ್ಯಾಶ್ ಲೆಸ್ಸ್ ಟ್ರೇಟ್ಮೆಂಟ್ ನೂತನ ಯೋಜನೆಯೊಂದನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.


ಇಲ್ಲಿನ ಸಮುದಾಯ ಭವನದಲ್ಲಿ ಕನಾ೯ಟಕ ರಾಜ್ಯ. ಸರಕಾರಿ ನೌಕರರ ಸಂಘ ಆಲಮಟ್ಟಿ ಯೋಜನಾ ಶಾಖೆ ಆಶ್ರಯದಲ್ಲಿ ಸಂಯೋಜಿಸಿದ್ದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗದು ರಹಿತ ಈ ಚಿಕಿತ್ಸೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ಈಗಾಗಲೆ ಶೇ 95 ರಷ್ಟು ಪೂರ್ವಭಾವಿ ಸಿದ್ದತೆ ಸರಕಾರ ಮಾಡಿಕೊಂಡಿದೆ ಎಂದರು.
ಕಳೆದ 40 ವರ್ಷದಿಂದ ಯಾರು ಮಾಡದಂಥ ಹಾಗು ಕಲ್ಪನೆ ಮಾಡಲಿಕ್ಕೆ ಸಾಧ್ಯವಾಗದಂಥ ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆ ಅತಿ ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ.ಇಂಥ ವಿಶೇಷ, ಅಭೂತಪೂರ್ವ ಯೋಜನೆ ಯಾವ ದೇಶದಲ್ಲಿಲ್ಲ. ನಮ್ಮ ದೇಶದ ಕನಾ೯ಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯ ಸರಕಾರಿ ನೌಕರರಿಗಾಗಿ ಸರಕಾರ ಜಾರಿಗೆ ತರುತ್ತಿರುವುದು ಹೆಮ್ಮೆಯ ಸಂಗತಿ. ಇದರಿಂದ ನೌಕರರ ಹಾಗು ಅವರ ಅವಲಂಬಿತ ಕುಟುಂಬ ವರ್ಗದಲ್ಲಿ ನೆಮ್ಮದಿ ಮೂಡಲಿದೆ ಎಂದರು.
ರಾಜ್ಯದ ಕಾಪೋ೯ರೇಟ್ ಸೇರಿದಂತೆ ಯಾವುದೇ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ 6 ಲಕ್ಷಕ್ಕೂ ಹೆಚ್ಚು ನೌಕರರ ಕುಟುಂಬದ ಸುಮಾರು 32 ಲಕ್ಷ ಸದಸ್ಯರಿಗೆ ಅನುಕೂಲವಾಗಲಿದೆ. ಹೊಸ ಕಾಯಿಲೆಗಳು ಸೇರಿ 1226 ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರದ ಕಾಡ್೯ ತೋರಿಸಿ ಕ್ಯಾಸ್ ಲೇಸ್ ಟ್ರೇಟ್ಮೆಂಟ್ ತಗೆದುಕೊಂಡು ಆಸ್ಪತ್ರೆಯಿಂದ ಹೊರಗೆ ಬರುವಂಥ ನೆಮ್ಮದಿಯ ಈ ಯೋಜನೆ ಒಂದೆರಡು ತಿಂಗಳಾವಧಿಯಲ್ಲಿ ಜಾರಿಗೊಳ್ಳಲ್ಲಿದೆ. ಈ ಯೋಜನೆ ಜಾರಿಗೆ ತಮ್ಮ ನೌಕರರ ಸಂಘಟನೆ ಒತ್ತಾಯಿಸಿತ್ತು. ಪ್ರಾಮಾಣಿಕ ಪ್ರಯತ್ನಕ್ಕೆ ಫಲ ದೊರೆತಿದೆ ಎಂದರು.
ಇನ್ನು ಮುಂದೆ ಎಸ್.ಆರ್. ಬುಕ್ ಇರದು..! ಇನ್ಮುಂದೆ ನೌಕರರ ಸೇವಾ ಸವಿ೯ಸ್ ಬುಕ್ ನಿರ್ವಹಣೆ ಇರುವುದಿಲ್ಲ. ಪ್ರತಿಯೊಬ್ಬ ನೌಕರರ ಮಾಹಿತಿಗಳೆಲ್ಲ ಆನ್ ಲೈನ್ ವ್ಯವಸ್ಥೆಯ ಎಚ್.ಆರ್.ಎಂ.ಎಸ್ ನಲ್ಲಿ ಸಂಪೂರ್ಣ ಒಳಗೊಂಡಿರುತ್ತದೆ. ಈ ವ್ಯವಸ್ಥೆಯಿಂದ ನಿವೃತ್ತಿ ಹೊಂದುವ ಮುನ್ನ 3 ತಿಂಗಳ ಮೊದಲೇ ನೌಕರರ ಪೆನಷ್ಯನ್ ಮಾಹಿತಿ ಸಿದ್ದವಾಗಲಿದೆ. ನಿವೃತ್ತಿ ಹೊಂದಿದ ತಿಂಗಳಿಂದ ಪಿಂಚಣಿ ಲಭಿಸಲಿದೆ. ಹೆಚ್ಚು ಕಡಿಮೆ ಈ ವ್ಯವಸ್ಥೆ ಬರುವ ವರ್ಷದಿಂದ ಅನುಷ್ಠಾನಕ್ಕೆ ಬರಲಿದೆ. ಇ.ಸೇವಾ ಪುಸ್ತಕ ಜಾರಿಗಾಗಿ ಸಂಘ ಮನವಿ ಮಾಡಿತ್ತು. 8 ತಿಂಗಳಲ್ಲಿ ಅದು ಪೂರ್ಣವಾಗಿ ಜಾರಿಯಾಗಲಿದೆ ಎಂದರು.
ಕೆಜಿಐಡಿ ಆನ್‌ಲೈನ್ ವ್ಯವಸ್ಥೆಗೆ ಒಳಪಡುತ್ತಿದ್ದು 6 ಜಿಲ್ಲೆಗಳಲ್ಲಿ ಇದನ್ನು ಪೈಲೆಟ್ ಸ್ಕೀಮ್ ರೂಪದಲ್ಲಿ ಆರಂಭಿಸಲಾಗಿದೆ. ಕೇಂದ್ರ ಮಾದರಿ ವೇತನ ಬರುವ ಜನವರಿಯಲ್ಲಿ ರಾಜ್ಯದ ನೌಕರರಿಗೆ ಸಿಗಲಿದೆ.‌ ಏಳನೇ ವೇತನ ಆಯೋಗದ ವರದಿಯಿಂದ ವೇತನ ಪರಿಷ್ಕರಣೆ ಸೌಲಭ್ಯ ದೊರೆಯಲಿದೆ.ಆ ದಿಸೆಯಲ್ಲಿ ಯಡಿಯೂರಪ್ಪನವರು ತೋರಿದ ಕಾಳಜಿ ಮರೆಯಲಾಗದು ಎಂದು ಷಡಕ್ಷರಿ ನುಡಿದರು.
ವೃತ್ತಿ ಬದುಕಿನ ಜೊತೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿ..! ವೃತ್ತಿ ವ್ಯವಸ್ಥೆಗೆ ಹೊಂದಿಕೊಂಡು ಸಮಾಜಕ್ಕೆ ನೌಕರರು ಉತ್ತಮ ಕೊಡುಗೆ ನೀಡಬೇಕು. ವೃತ್ತಿ ಬದುಕಿನ ಸೇವಾ ಅವಧಿಯಲ್ಲಿ ನಮ್ಮ ಸಾಧನೆಗಳೇ ಮಾತನಾಡುವಂತಿರಬೇಕು. ಅಂಥ ರಚನಾತ್ಮಕ ಕೆಲಸ,ಕಾರ್ಯಗಳಲ್ಲಿ ತಮ್ಮನ್ನು ತಾವು ತೋಡಗಿಸಿಕೊಳ್ಳಬೇಕು. ಅವಕಾಶಗಳು ದೊರೆತಾಗ ಒಂದಿಷ್ಟು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು.ಅವು ಸದಾಕಾಲ ಸ್ಮರಿಸಿ ಮಾತನಾಡುವಂತಿರಬೇಕು ಎಂದು ಸಿ.ಎಸ್.ಷಡಕ್ಷರಿ ಹೇಳಿದರು.
ಆಲಮಟ್ಟಿ ಪರಿಸರ ಬಹಳಷ್ಟು ಅದ್ಭುತವಾಗಿದೆ. ಸ್ವಚ್ಚತೆ ಸುಂದರವಾಗಿದೆ.ನಿರ್ವಹಣೆ ಅಚ್ಚುಕಟ್ಟಾಗಿದೆ. ಹಸಿರುಸಿರಿ ಉದ್ಯಾನವನಗಳು ಕಣ್ಮನ ತಣಿಸುತ್ತಿವೆ. ಇವೆಲ್ಲವೂ ಕಂಡಾಗ ಯಾವುದೋ ಒಂದು ಸ್ಮಾಟ್೯ಸಿಟಿಗೆ ಬಂದಂತೆ ಸ್ಮರಣೀಯ ಅನುಭವವಾಗುತ್ತದೆ. ನಿಜಕ್ಕೂ ಇಲ್ಲಿನ ಎಲ್ಲ ನಿರ್ವಹಣೆ ಬಹು ಆಕರ್ಷಣೀಯ ಎಂದರು.
ರಾಜ್ಯ ಸಂಘದೊಂದಿಗೆ ನಿಕಟ ಸಂಬಂಧವನ್ನೀರಿಸಿಕೊಂಡಿರುವ ಆಲಮಟ್ಟಿ ಯೋಜನಾ ಶಾಖೆ ಕ್ರಿಯಾಶೀಲ, ಪಾರದರ್ಶಕ, ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಂಘಟನೆಯಲ್ಲಿ ಉತ್ತಮ ನಾಯಕತ್ವದ ಲಕ್ಷಣಗಳಿರಬೇಕು. ಅಂಥ ನಾಯಕತ್ವ ಇಲ್ಲಿನ ನೌಕರರ ಸಂಘ ಹೊಂದಿದೆ. ಈ ಭಾಗದ ನೌಕರರ ಹಿತ ಕಾಪಾಡಲು,ನೌಕರರ ಸಮಸ್ಯೆ, ಕುಂದು ಕೊರತೆಗಳಿಗೆ ಸಂಘ ಸ್ಪಂದಿಸಿ ಕೆಲಸ ಮಾಡಲಿದೆ. ಸರಕಾರಿ ನೌಕರರು ಕೇವಲ ಕುಟುಂಬಕ್ಕೆ ಸಿಮೀತವಾಗದೆ ಸಮಾಜಮುಖಿ ಪರ ವಿಭಿನ್ನ ಕೆಲಸ ಕಾರ್ಯ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಮುಖ್ಯ ಎಂಜಿನಿಯರ್ ಎಚ್.ಸುರೇಶ ಸಮಾರಂಭ ಉದ್ಘಾಟಿಸಿದರು.‌ ಅಧ್ಯಕ್ಷತೆ ಯೋಜನಾ ಶಾಖೆ ಅಧ್ಯಕ್ಷ ಸದಾಶಿವ ದಳವಾಯಿ ವಹಿಸಿದ್ದರು. ಸೂಪರಿಂಟೆಂಡೆಂಟ್ ಎಂಜನಿಯರ್ ಡಿ.ಬಸವರಾಜ, ಪ್ರಧಾನ ಲೆಕ್ಕಾಧಿಕಾರಿ ಲಕ್ಷ್ಮೀ ಟಿ.ಕೆ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಕಾಯಾ೯ಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಬಿ.ಟಿ.ಗೌಡರ ಇತರರಿದ್ದರು.
ನೂರಾರು ಸಂಖ್ಯೆಯಲ್ಲಿ ನೌಕರರು ಸ್ವಚ್ಚತಾ ಆಂದೋಲನದಲ್ಲಿ ಭಾಗಿಯಾಗಿ ಸ್ವಚ್ಚತಾ ಸೇವೆ ಸಲ್ಲಿಸಿದರು. ಇದೇ ವೇಳೆ ರಕ್ತದಾನ ಶಿಬಿರ ಏಪಾ೯ಟಾಗಿತ್ತು.
ಪೋಟೋ : ಆಲಮಟ್ಟಿಯಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡುತ್ತಿರುವ ದೃಶ್ಯ.

Exit mobile version