ಎಲ್ಲೆಲ್ಲೂ ಮುಸುಕು, ಬಿಸಿಲು ಮಾಯ..!!! “ಮಸಲಧಾರೆಗೆ ಜನಜೀವನ ಥಂಢಾ”

ಉತ್ತರಪ್ರಭ
ಗುಲಾಬಚಂದ ಜಾಧವ
ಆಲಮಟ್ಟಿ:
ಬರೋಬ್ಬರಿ ವಾರಕ್ಕೂ ಹೆಚ್ಚುದಿನಗಳಾದವು. ಅಗಸ ಸಂಪೂರ್ಣ ಮುಸುಕು ಮುಕಟು ಧರಿಸಿಕೊಂಡು ಸೂರ್ಯನನ್ನೇ ಹೈಜಾಕ್ ಮಾಡಿಕೊಂಡಂತಾಗಿದೆ. ಪರಿಣಾಮ ಬಿಸಿಲು ದರ್ಶನ ಹಗಲಹೊತ್ತಿನಲ್ಲಿಯೇ ಇಲ್ಲಿ ಮಾಯ! ಬಿಸಿಲು ನೋಟ ಅಪರೂಪ,ಗಗನ ಕುಸುಮವಾಗಿ ಬಿಸಿಲೂರಿನ ಜನಕ್ಕೆ ಇದೀಗ ಪರಿಣಮಿಸಿದೆ.


ಹೌದು! ವಾರದಿಂದ ಆಕಾಶದಲ್ಲಿ ಸೂರ್ಯದೇವ ಯಾರ ಕಣ್ಣಿಗೂ ಬಿದ್ದಿಲ್ಲ. ಬಿಸಿಲು ಜನ ಕಂಡಿಲ್ಲ. ಅಂಬರ ತುಂಬಾ ಮುಸುಮುಸುಕು. ಮೋಡ ಕವಿದ ವಾತಾವರಣ.ಅಗಾಗ ಮೋಡಗಳ ಸಂಚಲನ. ಈ ಮಧ್ಯೆ ಜಿನುಗು ಮಳೆಹನಿಗಳ ಸಿಂಚನ ಉದುರುವಿಕೆ ! ಒಟ್ಟಿನಲ್ಲಿ ಮಲೆನಾಡಿನ ಸೊಬಗು ಬಿಸಿಲುನಾಡಿನಲ್ಲೂ ಅನಾವರಣ. ಇಲ್ಲಿಗ ಎಲ್ಲವೂ ಥಂಢಾಮಯ !
ಬಿಸಿಲಿಗೆ ಹೆಸರಾದ ವಿಜಯಪುರ ಜಿಲ್ಲೆಯಲ್ಲಿ ಈಗ ಕೂಲ್ ಕೂಲ್ ಸನ್ನಿವೇಶ ! ಅದರಲ್ಲಿ ಕೃಷ್ಟೆಯ ತಟದಲ್ಲಿರುವ ಆಲಮಟ್ಟಿಯಂತೂ ಕೋಲ್ಡ್‌ ಸ್ಟೋರೇಜ್ ಅಗಿ ಪರಿವರ್ತನೆಗೊಂಡಿದೆ ! ಪ್ರವಾಸಿತಾಣ ಖ್ಯಾತಿಯ ಆಲಮಟ್ಟಿ ಗ್ರಾಮ ಕೃಷ್ಣಾ ನದಿಯ ಹಾಗು ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಹಿನ್ನೀರಿನ ದಡದಲ್ಲಿದೆ. ಮೇಲಿನ ಮಳೆಯ ಜೊತೆಗೆ ಜಲಾಶಯದ ಅಪಾರ ನೀರು ಒಂದೆಡೆ ಸುತ್ತಲೂ ಇರುವದು ತಂಪಿಗೆ ಕಾರಣ ! ಮತ್ತೆ ಪ್ರಸ್ತುತ ಮಳೆಗಾಲ ಋತುಮಾನ ಬೇರೆ !
ಜಿಟಿಜಿಟಿಯಾಗಿ ಜರಿಯುತ್ತಿರುವ ಮಳೆಯಿಂದ ರಸ್ತೆಗಳು ಕೋಚ್ಚಿಮಯ ರೂಪ ಪಡೆದಿವೆ. ರಟ್ಟರಾಡಿಗಳಾಗಿ ಗೋಚರಿಸುತ್ತಿವೆ.ಓಣಿ ಬೀದಿಯಲ್ಲಿನ ಕಿಷ್ಕಿಂಧೆ ರಸ್ತೆಗಳು ಸ್ಥಿತಿಯಂತೂ ಹೇಳತೀರದು ! ಕೇಸರ ಗದ್ದೆಗಳಾಗಿ ಗಲೀಜುಧಾರಣೆ ಮಾಡಿವೆ. ಹೊತ್ತು ಗೊತ್ತಿಲ್ಲದೆ ಅಗಾಗ ಜಿಟಿಜಿಟಿಯಾಗಿ ಧರೆಗೆ ಇಳಿಯುವ ಮಳೆಗೆ ಜನಜೀವನ ಅಸ್ತವ್ಯಸ್ತದಡೆಗೆ ಸಾಗಿವೆ. ಮುಂಜಾವಿನ ವೇಳೆ ಶಾಲಾ,ಕಾಲೇಜು ಮಕ್ಕಳು, ನೌಕರರು, ಕೂಲಿ ಕಾಮೀ೯ಕರು ಪರದಾಡುವಂತಾಗಿದೆ. ಮುಸುಕು ಎಲ್ಲರನ್ನೂ ಮಂಕಾಗಿಸಿದೆ. ಗುರುವಾರ ಮಧ್ಯಾಹ್ನ ಸ್ವಲ್ಪ ಮಟ್ಟಿಗೆ ಮೋಡದ ಮರೆಯಲ್ಲಿ ಸೂರ್ಯದೇವ ಇಣುಕಿ ನೋಡಿದಂತೆ ಭಾಸವಾಯಿತು.ಆ ಹೊತ್ತು ಭೂವಿ ಮೇಲೆ ಅಲ್ಪಾವಧಿ ಕಿರಣ ಸೂಸಿ ಮರೆಯಾದ. ಸೂರ್ಯ ಪ್ರಕಾಶನಕ್ಕೆ ಜನ ಕ್ಷಣ ಹೊತ್ತು ನಿಟ್ಟುಸಿರು ಬಿಟ್ಟು ಅಬ್ಬಾ ಬಸಿಲು ಬಂತು ಬಿಸಿಲು ಅಂತಾ ಗೋಣಗುತ್ತಿರುವಾಗಲೇ ಮತ್ತೆ ಮಳೆರಾಯನ ಎಂಟ್ರಿ ಶುರುವಾಯಿತು ! ಜಿನುಗು ಹನಿ ಚದುರಲಾರಂಭಿಸಿತು. ತಂಪಿನ ಬಿಗಿತಕ್ಕೆ ಜನ ಪುನಃ ಒಳಗಾದರು. ಜಡಿ ಮಳೆಯಿಂದು ಬಿಡುವು ಕೊಡಬಹುದು, ನೆತ್ತಿ ಮೇಲಿನ ಮುಸುಕು ಸರಿಯಬಹುದು.ಬಿಸಿಲು ಜರಿಯಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಅಪೇಕ್ಷಿತ ನಿರೀಕ್ಷೆ ಹುಸಿ !
ವಾರದಿಂದ ಜಿಟಿಜಿಟಿಯಾಗಿ ಸುರಿಯುತ್ತಿರುವ ವರ್ಷಧಾರೆಯಿಂದ ಬಹುತೇಕ ಮನೆಗಳೆಲ್ಲ ತಂಪು ಹಿಡಿದಿವೆ. ಬಟ್ಟೆಗಳು ಎರಡು ಮೂರು ದಿನವಾದರು ಒಣಗುತ್ತಿಲ್ಲ. ರೋಗರುಜಿನಗಳಿಗೆ ಅಸ್ಪದ ನೀಡಿದಂತಾಗಿದೆ.ಅಸ್ತಮಾ,ಹೃದಯ ಕಾಯಿಲೆಯಿಂದ ನರಳುತ್ತಿರುವರಿಗೆ ತೊಂದರೆವಾಗುತ್ತಲ್ಲಿದೆ. ಮುಸುಕು ಧಾರೆಯ ತಂಪು ಹವಾಮಾನ,ಜಡಿಮಳೆ ಎಂದು ಸರದಿತೋ ಎಂಬ ಚಿಂತೆಯಲ್ಲಿ ಜನತೆ ದಿನ ಕ್ಷಣ ಕಳೆಯುತ್ತಲ್ಲಿದ್ದಾರೆ.

Exit mobile version