ಉತ್ತರಪ್ರಭ
ಗುಲಾಬಚಂದ ಜಾಧವ
ಆಲಮಟ್ಟಿ:
ಇಲ್ಲಿ ಮಳೆ ಬಂದ್ರೂ ಅಷ್ಟೇ ಬಿಟ್ರೂ ಅಷ್ಟೇ ! ಏನು ಫರಕ್ ಬಿಳಾಂಗಿಲ್ರೀ ! ತುಂಬ ತುಂಬ್ತದ ನಮ್ಮ ಡ್ಯಾಂ ! ಆದರ ಮಹಾದೊಳ ಮಹಾ ಮಳಿ ಆಗಬೇಕಷ್ಟರೀ ! ಇದುವೇ ಮಹಾ ಮ್ಯಾಜಿಕ್ ನೋಡ್ರೀ ಅಂತಾರೆ ಇಲ್ಲಿನ ಜನ!.
ಹೌದು ! ಜನರ ಅಂಬೋಣ ನಿಜ ! ನೇರೆಯ ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ವರುಣ ದೇವ ತನ್ನ ಖದರ್ ಜೊತೆ ಆರ್ಭಟಿಸಿ ಗುಡುಗಿದರೆ ಮುಗಿಯಿತು. ಹಾಗೆಯೇ ರಾಜ್ಯದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸ್ಪಷ್ಟ ದರ್ಶನ ಪ್ರದಶಿ೯ಸಿದರೆ ಸಾಕು ! ಇತ್ತ ಕೃಷ್ಣೆಯಲ್ಲಿ ಜಲಲೀಲೆ ಉದ್ಬವವಾಗುತ್ತೆ. ಮಾಯಾಜಾಲದ ಈ ಜಲನಿಧಿ ಥಳುಕುತ್ತಾ,ಬಳಕುತ್ತಾ, ಮೆಲ್ಲಮೆಲ್ಲನೆ ಕುಣಿಯುತ್ತಾ, ನಲಿಯುತ್ತಾ ,ಸಂಭ್ರಮಿಸುತ್ತಾ, ಹರಿಯುತ್ತಾ ಬಂದು ಆಲಮಟ್ಟಿ ಜಲಾಶಯದಲ್ಲಿ ಸೇರುತ್ತದೆ ! ಇಲ್ಲಿ ಜಲಲಲಲಲರಾಶಿ ಅಪಾರ ಪ್ರಮಾಣದಲ್ಲಿ ಆಶ್ರಯಿಸಿ ಎಲ್ಲೆಲ್ಲೂ ಜೀವ ಕಳೆಯ ಉನ್ಮಾದ ಸೃಷ್ಟಿಸಿ ಸಾರ್ಥಕ ಭಾವ ಮೆರೆಯುತ್ತದೆ. ಈ ಸಂದರ್ಭದಲ್ಲಿ ಕಭೀ ಖುಷಿ ಕಭೀ ಗಮ್ಮ ಎಂಬಂತೆ “ಸಂತಸ-ಸಂಕಟ” ಮೇಳಕ್ಕೂ ಚಾಲನೆ ದೊರೆಯುತ್ತೆ ! ಈ ಭಾಗದಲ್ಲಿ ಸಮರ್ಪಕವಾಗಿ ಮಳೆರಾಯ ಬರದಿದ್ದರೂ ಮಹಾದ ಕೃಪೆಯಿಂದ ಡ್ಯಾಂ ಭತಿ೯ಯತ್ತ ಸಾಗುವುದು ಖುಷಿಗೆ ಕಾರಣವಾಗುತ್ತದೆ.ಹಾಗಾಗಿ ಅಲ್ಲಿ ಮಳೆ ಆಲಮಟ್ಟಿ ಆಣೆಕಟ್ಟೆಯಲ್ಲಿ ಜಲರಸ ಕಳೆ ಎಂದು ಸಹಜವಾಗಿ ಜನ ಮೂದಲಿಸುತ್ತಾರೆ ! ಅಮೃತವೂ ಹೆಚ್ಚಾದರೆ ವಿಷ ! ಎಂಬಂತೆ ಈ ಹೊಲಿಕೆ ಜೀವಜಲಕ್ಕೂ ಇಲ್ಲುಂಟು ! ಜಲಾಶಯಕ್ಕೆ ಅತ್ತಿಂದ ಉತ್ತುಂಗ ಸ್ಥಿತಿಯಲ್ಲಿ ಧಾವಿಸಿ ಬರುವ ಜಲಾಂಮೃತ ಅಧಿಕಗೊಂಡರೆ ಸಮಸ್ಯೆ, ಗಡಿಬಿಡಿ ,ರಾದ್ದಾಂತ, ಮಾರಕವೂ ಸಹ ! ಒಳ ಹರಿವಿನ ತೀಕ್ಷ್ಣತೆ ಅರಿತು ಹೊರ ಹರಿವಿಗೆ ಜಪತಪ ಮಾಡುವುದು ಅಗ ಅನಿವಾರ್ಯ. ಇದಕ್ಕೆ ಮೊರೆಯಿರಿಸಲೇ ಬೇಕಾದ ಪರಸ್ಥಿತಿ ಬಿಟ್ಟರೆ ಬೇರೆ ಮಾರ್ಗ,ಗತಿಯಿಲ್ಲ ! ಹಾಗಾದಾಗ ಡ್ಯಾಂ ನಲ್ಲಿ ನಳನಳಿಸುತ್ತಾ ಅಲೆಗಳಾಟದೊಂದಿಗೆ ವೈಭವದಿಂದ ಆಶ್ರಯ ಪಡೆದಿರುವಂಥ ಭಾಗಶಃ ಹಳೆ ಹಾಗು ಹೊಸ ನೀರಿಗೆ ಬಿಳ್ಕೋಡುವ ಭಾಗ್ಯ ಒದಗುತ್ತದೆ ! ಡ್ಯಾಂ ಗೇಟಗಳಿಂದ ಹೊರ ಚಿಮ್ಮಿ ಜಿಗಿಯುವ ಆತುರದಲ್ಲಿ ಈ ಜಲರಾಶಿ ಮುಂದೆ ಕೃಷ್ಣಾನದಿ ತಳಪಾತ್ರದಿಂದ ಸಾಗುತ್ತ ನಾರಾಯಣಪುರದ ಬಸವ ಸಾಗರ ಜಲಾಶಯಕ್ಕೆ ಸೇರುತ್ತದೆ. ಅಲ್ಲಿಯೂ ಇದೆ ಸ್ಥಿತಿ ಅನುಭವಿಸಿ ನದಿಗುಂಟ ಮತ್ತೆ ಪಯಣಿಸಿ ಕೊನೆಗೆ ಸಮುದ್ರ ಸೇರಿ ಈ ಜೀವ ಜಲ ಲೀನವಾಗಿ ನೆಲೆ ಕಂಡುಕೊಳ್ಳುತ್ತದೆ. ಅದು ಹರಿಯುತ್ತಾ ಅಂತಿಮ ನೆಲೆ ಕಾಣುವರೆಗೆ ನದಿ ತೀರದ ಜನರ ನೆಲೆಗೆ ಕಂಟಕಗಳ ಸರಮಾಲೆಯ ಉಡುಗೊರೆಯನ್ನೆ ನೀಡಿ ಆತಂಕ,ಆವಾಂತರಗಳನ್ನು ಸೃಷ್ಟಿಸಿ ತೆರಳುತ್ತದೆ. ಹೊರಹರಿವು ಹೆಚ್ಚಾದರೆ ಕೃಷ್ಣೆತೀರದ ಜನತೆ ನಲುಗುವುದು ತಪ್ಪಿದಲ್ಲ. ಜಲದಿಗ್ಬಂಧನಕ್ಕೆ ಜನ ಒಳಗಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರ ಹರಿವು ಹೆಚ್ಚಾಗಬಹುದು. ಯಾವುದಕ್ಕೂ ಹುಷಾರು !

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳ-ಹೊರಹರಿವು ಯಥಾಸ್ಥಿತಿ..!

ಉತ್ತರಪ್ರಭಆಲಮಟ್ಟಿ: ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಕೃಷ್ಣಾ ನದಿಯ ಮೂಲಕ ಹರಿದು ಬರುತ್ತಿರುವ ನೀರಿನ…

ಫೆ.10 ರಂದು ರಾಯಚೂರು ಬಂದ್: ಮಧ್ಯ ಮಾರಾಟ ನಿಷೇಧ

ವರದಿ: ವಿಠಲ‌ ಕೆಳೂತ್ ಉತ್ತರಪ್ರಭಮಸ್ಕಿ: ಜಿಲ್ಲೆಯ ಪ್ರಗತಿಪರ, ದಲಿತ ಸಂಘಟನೆ ಒಕ್ಕೂಟ ಫೆ. 10ರಂದು ರಾಯಚೂರು…

ಗಜೇಂದ್ರಗಡ ತಾಂಡಾದಲ್ಲಿ ಡಾ. B.R. ಅಂಬೇಡ್ಕರ್ ರವರ 131 ನೆಯ ಜಯಂತಿ ಆಚರಣೆ

ಉತ್ತರಪ್ರಭ ಗಜೇಂದ್ರಗಡ: 14/4/2022 ರಂದು ಬೆಳಿಗ್ಗೆ 11:೦೦ ಗಂಟೆಗೆ ಸಂವಿದಾನ ಶಿಲ್ಪಿ, ಮಹಾನ ಮೇಧಾವಿ ಮಹನಾಯಕ…