ಮದ್ಯಕ್ಕೆ ಕೊಡುವ ಪ್ರೋತ್ಸಾಹ ವಿದ್ಯೆಗೆ ನೀಡಿ- ಗುರುಶಾಂತ ಸ್ವಾಮೀಜಿ

ವರದಿ: ಗುಲಾಬಚಂದ ಜಾಧವ

ಆಲಮಟ್ಟಿ : ಬಹಳಷ್ಟು ಯುವಕರ ಮನಸ್ಥಿತಿಯಿಂದು ಕೆಟ್ಟು ಹೋಗುತ್ತಲ್ಲಿದೆ. ದುಷ್ಚಟಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮದ್ಯಕ್ಕೆ ಕೊಡಮಾಡುವ ಪ್ರೋತ್ಸಾಹ ವಿದ್ಯೆಗೆ ನೀಡಿದ್ದಾದರೆ ಖಂಡಿತ ಸಮಾಜದ ಚಿತ್ರಣ ವಿಭಿನ್ನವಾಗಿ ಬದಲಾಗುತ್ತಿತ್ತು ಎಂದು ಇಟಗಿ,ಹಿರೇಮಠ ಭೂ ಕೈಲಾಸ ಮೇಲುಗದ್ದುಗೆ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಆಲಮಟ್ಟಿಯಲ್ಲಿ ನೂತನವಾಗಿ ಆಸ್ತಿತ್ವಕ್ಕೆ ಬಂದ ಡಾ.ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘದ ಉದ್ಘಾಟನೆ ಸೋಮವಾರ ನೆರವೇರಿತು.


ಸ್ಥಳೀಯ ಮಂಜಪ್ಪ ಹಡೇ೯ಕರ ಸ್ಮಾರಕ ಭವನದಲ್ಲಿ ಸೋಮವಾರ ನಡೆದ ಡಾ.ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘ ಆಲಮಟ್ಟಿ ಶಾಖೆಯ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಮಾಜದ ಯುವಕ ಪಡೆ ಧೂಮಪಾನಕ್ಕೆ ಹೆಚ್ಚಿನ ಒಲವು ನೀಡುತ್ತಿದೆ. ಎಲ್ಲೆಂದರಲ್ಲಿ ಸಿಂಧಿ, ಸರಾಯಿ, ಬೀರ ಬಾಟಲ್,ಮದ್ಯ ಎಗ್ಗಿಲ್ಲದೆ ದೊರೆಯುತ್ತಿದೆ. ಹೀಗಾಗಿ ಯುವಕರು ದಾರಿ ತಪ್ಪಿ ಕುಡುಕರಾಗಿ ಪರಿವರ್ತನೆಗೊಳ್ಳುತ್ತಲ್ಲಿದ್ದಾರೆ. ಮದ್ಯದ ಬದಲು ವಿದ್ಯೆಗೆ ಪ್ರಾಶಸ್ತ್ಯ ಕೊಟ್ಟಿದ್ದರೆ ಬೀರ ಬಾರ್ ಪಾನ ಅಂಗಡಿಗಳಿರುವ ಜಾಗದಲ್ಲಿ ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ಶಿಕ್ಷಣ ಪದಗಳಿರುತ್ತಿದ್ದವು.ಕುಡುಕರು ಇರುವಂಥ ಜಾಗದಲ್ಲಿ ವಿದ್ವಾಂಸರು ಇರುತ್ತಿದ್ದರು. ವಿದ್ಯೆಗೆ ಒಮ್ಮತದ ಪ್ರೋತ್ಸಾಹ ಕೊಟ್ಟು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


ಯಾವುದೇ ಸಂಘ, ಸಂಸ್ಥೆಗಳು ಬೆಳೆಯಬೇಕಾದರೆ ಅಲ್ಲಿ ಮನಸ್ಸುಗಳು ಒಂದಾಗಿರಬೇಕು. ಸ್ವಚ್ಛವಾಗಿರಬೇಕು.ಸಂಘದಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಸಂಘಟನೆಗಳು ಬೆಳೆಯಲಾರವು. ದೇಶಕ್ಕೆ ಉತ್ಕಟ ಸಂವಿಧಾನದ ನೀಡಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಡಾ.ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘ ರಚನೆವಾಗಿದ್ದು ಸ್ತುತಾರ್ಹ. ಒಂದೇ ವಯಸ್ಸಿನ ಯುವಕರು ಸೇರಿ ಮಾಡಿರುವ ಈ ಸಂಘ ಬಹಳಷ್ಟು ಗಟ್ಟಿಯಾಗಿ ಶ್ರೇಷ್ಠ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಶಾಂತಿ, ತಾಳ್ಮೆಯಿಂದ ಶ್ರಮಿಸಲಿ ಎಂದು ಸ್ವಾಮೀಜಿ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಸಂಸ್ಥಾಪಕ ಡಾ.ಎಸ್.ಬಾಲಾಜಿ, ಅಂಬೇಡ್ಕರ್,ಗಾಂಧೀಜಿಯವರ ತತ್ವಾದರ್ಶ,ಭಗತಸಿಂಗರವರ ಭಾವನೆಗಳು ಶಿಸ್ತು ಬದ್ಧ ಜೀವನಕ್ಕೆ ಸಹಕಾರಿವಾಗಿವೆ. ಯುವಕರಲ್ಲಿ ಅಂಥ ಭಾವನೆ ತುಂಬಲು ತಮ್ಮ ಸಂಘಟನೆ ಬದ್ದವಾಗಿದ್ದು ಈ ಭಾಗದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದರು.


ಹಿಂದುಳಿದ ಜನರ ಕಲ್ಯಾಣ ಬಯಸಿ ಅವರನ್ನು ಮುಖ್ಯ ವಾಹಿನಿಗೆ ತರತಕ್ಕಂಥ ಕೆಲಸ ಹಾಗು ರಾಷ್ಟ್ರ ನಿಮಾ೯ಣದ ಚಟುವಟಿಕೆಗಳಲ್ಲಿ ಕೆಲಸ ಮಾಡುವಂಥ ಧ್ಯೇಯ ಸಂಘ ಹೊಂದಿದ್ದು ಸ್ವ ಗ್ರಾಮ ಸ್ವಚ್ಚತೆಯಿಂದಿರಿಸುವಂಥ ಜನೋಪಯೋಗಿ ಕಾಯಕಕ್ಕೆ ಅಣಿಯಾಗಲಿದೆ. ಜೊತೆಗೆ ಯುವಕರಲ್ಲಿ ದೇಶಾಭಿಮಾನದ ಭಾವನೆ ಮೂಡಿಸಲಿದೆ. ಆ ನಿಟ್ಟಿನಲ್ಲಿ ತರಬೇತಿಗೊಳಿಸಲಾಗುವುದು. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ಎರಡು ತಿಂಗಳ ಮುಂಚೆ ಪರೀಕ್ಷೆ ಎದುರಿಸುವ ಕೌಶಲ್ಯ ತರಬೇತಿ ನೀಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲಾಗುವುದು. ಪರಿಸರ ಜಾಗೃತಿ,ಮಾನವ ಹಕಿಕುಗಳ ಅರಿವು ಸೇರಿದಂತೆ ಇತರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟನೆ ಪರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.


ಆಸ್ತಿತ್ವಕ್ಕೆ ಬಂದ ನೂತನ ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘವನ್ನು ಧುರೀಣ ಹಣಮಂತ ಬೆಳ್ಳುಬ್ಬಿ ಉದ್ಘಾಟಿಸಿದರು. ಎಂ.ಎಚ್.ಎಂ.ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ಜಾವೇದ ಜಮಾದಾರ ನೆರವೇರಿಸಿದರು. ‌
ಇದೇ ಸಂದರ್ಭದಲ್ಲಿ ಜಾನಪದ ಕಲಾವಿದರಿಗೆ ಸನ್ಮಾನಿಸಲಾಯಿತು.
ಅತಿಥಿಗಳಾಗಿ ರಾಮನಗರ ಜಿಲ್ಲಾ ಸಂಘದ ಕಾರ್ಯದರ್ಶಿ ಕೆ.ಸಿ.ಕಾಂತಪ್ಪ ,ಗ್ರಾಪಂ ಅಧ್ಯಕ್ಷ ಮಂಜುನಾಥ್ ಹಿರೇಮಠ, ಉಪಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಉಪ್ಪಾರ, ಪತ್ರಕರ್ತ ಪ್ರಕಾಶ ದೊಡಮನಿ, ನಿಡಗುಂದಿ ಕ.ಜಾ.ಪ.ತಾಲೂಕು ಘಟಕದ ಅಧ್ಯಕ್ಷ ವೈ.ಎಸ್.ಗಂಗಶೆಟ್ಟಿ ಇತರರಿದ್ದರು.

Exit mobile version