ಸಿಡಿಲು ಬಡಿದು ಇಬ್ಬರು ಸಾವು

ಶಿರಹಟ್ಟಿಯ ಹೊರವಲಯದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ತಹಶೀಲ್ದಾರ ಕಲಗೌಡ ಪಾಟೀಲ ಹಾಗೂ ಪಿಎಸ್ಐ ಪ್ರವೀಣ ಗಂಗೋಳ ಭೇಟಿ ನೀಡಿದರು.

ಉತ್ತರಪ್ರಭ
ಶಿರಹಟ್ಟಿ:
ಪಟ್ಟಣದ ಹೊರವಲಯದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ಸಂಭವಿಸಿದೆ.

ಮಧ್ಯಾನ್ಹ ಗಾಳಿ ಗುಡುಗು ಸಹಿತವಾಗಿ ಸುರಿದ ಭಾರಿ ಮಳೆಯಿಂದ ಹರಿಪುರ ಹೊರವಲಯದಲ್ಲಿನ ಮಾವಿನ ತೋಟ ಕಾಯಲಿಕ್ಕೆ ಹೋದ ಮಾಬುಸಾಬ ದೊಡ್ಡಮನಿ(55) ಹಾಗೂ ದನ ಮೇಯಿಸಲು ಹೋಗಿದ್ದ ಹರಿಪುರದ ನಿವಾಸಿ ಮುರಗೇಶ (40)ಹೊಸಮನಿ ಸಿಡಿಲು ಬಡಿದು ಸಾವನ್ನಪ್ಪಿದ ದುರ್ದೈವಿಗಳು.

ಘಟನಾ ಸ್ಥಳಕ್ಕೆ ತಹಶೀಲ್ದಾರ ಕಲಗೌಡ ಪಾಟೀಲ, ಕಂದಾಯ ನಿರೀಕ್ಷಕ ಮಾಂತೇಶ ಮುಗುದುಂ, ಗ್ರಾಮಲೆಕ್ಕಾಧಿಕಾರಿ ಪ್ರವೀಣ, ಪಿಎಸ್ಐ ಪ್ರವೀಣ ಗಂಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version