ನಾಗಾವಿ ಬಿಕೆ ಗ್ರಾಮದಲ್ಲಿ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ನೂತನ ರಥೋತ್ಸವ

ಉತ್ತರಪ್ರಭ

ವರದಿ: ಇಸ್ಲಾಯಿಲ್ ಎಮ್ ಶೇಖ.   

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ನಾಗಾವಿ ಬಿಕೆ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಈ ವರ್ಷ ನೂತನ ರಥೋತ್ಸವ ಜರುಗಲಿದ್ದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಂತಸವನ್ನುಂಟು ಮಾಡಿದೆ. ಜಾತ್ರಾ ವಿಶೇಷವಾಗಿ ಜರುಗಲಿರುವ ಕಾರ್ಯಕ್ರಮಗಳು ದಿ! 19/03/22 ಶ್ರೀಶೈಲ ಕಲ್ಪ ಮಹಾದಾಸೋಹಿ ಕಲಬುರಗಿಯ ಶ್ರೀ ಶರಣ ಬಸವೇಶ್ವರ ಮಹಾ ಪುರಾಣ ಪ್ರಾರಂಭ ಪುರಾಣದ ಪ್ರಾರಂಭದಿಂದಲೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದಾಸೋಗ ನಡೆಯುತ್ತಲೇ ಇರುತ್ತದೆ ಪುರಾಣ ಪ್ರವಚನಕಾರರು :ಪ್ರರವಚನ ರತ್ನ ಶ್ರೀ ವೇ. ಮೂ. ಮಡಿವಾಳಯ್ಯ ಶಾಸ್ತ್ರಿಗಳು ಜೇರಟಗಿ ಸಂಗೀತ ಗಾನಚತುರ ಶ್ರೀ ಯಶವಂತ್ ಬಡಿಗೇರ್ ಸಿಂದಗಿ ಖ್ಯಾತ ತಬಲಾ ವಾದಕರು ಶ್ರೀ ರಾಜಶೇಖರ್ ಕಟ್ಟಿಸಂಗವಿ ಅದೇ ರೀತಿ ದಿ/01/04/22 ಶುಕ್ರವಾರ ಮಹಾ ರುದ್ರಾಭಿಷೇಕ ಹೋಮ ಹವನ ಗ್ರಾಮದ ಗ್ರಾಮ ದೇವತೆಗೆ ಉಡಿ ತುಂಬುವ ಕಾರ್ಯಕ್ರಮ ದಿ/02/04/22 ಶನಿವಾರ ದಂದು 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ದಿ/ 03/04/22 ರವಿವಾರ ಗೊರವಗುಂ‌ಡಗಿ ಗ್ರಾಮದಿಂದ ಶ್ರೀ ಶರಣಬಸವೇಶ್ವರ ಅಡ್ಡಪಲ್ಲಕ್ಕಿ ಆಗಮನ ದಾಸೋಹ ಕಾರ್ಯಕ್ರಮ ದಿ/04/04/22 ಸೋಮವಾರ ಬೆಳಿಗ್ಗೆ 6:00 ಗಂಟೆಗೆ ವೀರ ಪುರವಂತರ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಸಾಯಂಕಾಲ 4:00 ಗಂಟೆಗೆ ನಾಗಾವಿ ಕೆ ಡಿ ಗ್ರಾಮದಿಂದ ರಥದ ಕಳಸದ ಆಗಮನ 5:00 ಗಂಟೆಗೆ ಭವ್ಯ ರಥೋತ್ಸವ ಸುಮಾರು ನಾಲ್ಕು ಗ್ರಾಮಗಳ ಮಧ್ಯದಲ್ಲಿರುವ ನಾಗಾವಿ ಬಿಕೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಐದುನೂರು  ವರ್ಷಗಳ ಇತಿಹಾಸವಿದ್ದು ಪುರಾತನ ಕಾಲದ ಶಿಲ್ಪ ಕಲೆಗಳ ಕಂಡುಬರುತ್ತವೆ ನಾಗಾವಿ ಕೆಡಿ ನಾಗಾವಿ ಬಿಕೆ ಬದನಿಹಾಳ ನಾಗಾವಿ ತಾಂಡಾ ಹಾಗೂ ಗೊರಗುಂಡಗಿ ಆರಾಧ್ಯ ದೇವರಾದ ಶ್ರೀ ಮಲ್ಲಿಕಾರ್ಜುನ ಈ ವರ್ಷದ ನೂತನ ಭವ್ಯ ರಥೋತ್ಸವ ಒಂದು ವರ್ಷದಿಂದ ಸಿದ್ಧತೆ ನಡೆದಿದ್ದು  ರಥ ಶಿಲ್ಪಿಗಳಾದ ಪಾಂಡುರಂಗ ಶಂಕ್ರಪ್ಪ ಬಡಿಗೇರ ಸಾ// ಹೊಳೆ ಆಲೂರು ಇವರ ನೇತೃತ್ವದಲ್ಲಿ ಸುಮಾರು ಆರು ತಿಂಗಳಿಂದ ಸತತವಾಗಿ ಸುಮಾರು ಶಿಲ್ಪಿಗಳಿಂದ ಕೆತ್ತಲ್ಪಟ್ಟಿದ್ದು ಇಂತಹ ಭವ್ಯ ರಥವು ಇಂದು ನಾಗಾವಿ ಬಿಕೆ ಗ್ರಾಮದಲ್ಲಿ ಜರುಗಲಿದ್ದು ಗ್ರಾಮಸ್ಥರಲ್ಲಿ ಸಂತಸವನ್ನುಂಟು ಮಾಡಿದೆ.


“ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ನೂತನ ರಥೋತ್ಸವಕ್ಕೆ ಆಗಮಿಸುವ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸ್ವಾಗತ ಬಯಸುವವರು ಮಲ್ಲಿಕಾರ್ಜುನ್ ದೇವಸ್ಥಾನ ಕಮಿಟಿ ನಾಗಾವಿ ಬಿಕೆ”

             

Exit mobile version