ಮೌಲಾನಾ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

ಉತ್ತರಪ್ರಭ
ಗದಗ: ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರತಿಷ್ಠಿತ ಮೌಲಾನಾ ಅಜಾದ್ ಆಂಗ್ಲ ಮಾಧ್ಯಮ ಶಾಲೆಯ ಮೊಟ್ಟ ಮೊದಲನೆಯ ಬ್ಯಾಚಿನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಳ್ಕೊಡುವ ಸಮಾರಂಭ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಶ್ರೀ ಎಫ್ ಯು ಪೂಜೇರ, (ಜಿಲ್ಲಾಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ), ಶ್ರೀ ಶರಣಪ್ಪ ಗೋರೆಬಾಳ (ತಾಲೂಕಾ ವಿಸ್ತರಣಾಧಿಕಾರಿಗಳು ಅಲ್ಪಸಂಖ್ಯಾತ ರ ಕಲ್ಯಾಣ ಇಲಾಖೆ), ಶ್ರೀ ಮಲ್ಲಪ್ಪ ಜೋಗಿನ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂಬರ್ 6), ಶ್ರೀಮತಿ ವಿದ್ಯಾವತಿ ಗಡಗಿ (ನಗರಸಭೆ ಸದಸ್ಯರು), ಪದ್ಮಾವತಿ ಕಟಗಿ (ನಗರಸಭೆ ಸದಸ್ಯರು), ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಜಾಹಿರಾತು


ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀಮತಿ ಫಾರಿದಾ ಸೌದತ್ತಿ, ಶ್ರೀಮತಿ ರೇಣುಕಾ ದೊಡಮನಿ, ಕುಮಾರಿ ಹಸೀನಾ ನದಫ, ಸಂಜೀವ ಬಳಿಗೇರ,ಹಾಗೂ ವಿಜಯ ಕುಮಾರ ಇಟಗಿ ಈ ಎಲ್ಲ ಶಿಕ್ಷಕರು ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಬಹಳ ಶ್ರಮವಹಿಸಿದ್ದಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯ ರಾದ ದೊಡ್ಡಪ್ಪ ವಾಲ್ಮೀಕಿ ಹಾಗೂ ಶಿಕ್ಷಕರಾದ ಅಶೋಕ ಲಮಾಣಿಯವರು ಇವರ ಈ ಶ್ರಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದ್ದರಿಂದ ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ದೊಡ್ಡಪ್ಪ ವಾಲ್ಮೀಕಿಯವರು ಹಾಗೂ ವಿದ್ಯಾರ್ಥಿಗಳ ಪರವಾಗಿ ಈ ಎಲ್ಲ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹಿರಾತು

Exit mobile version