ಮಕ್ಕಳಲ್ಲಿ ಕಲಿಕಾಸಕ್ತಿ ಕ್ಷೀಣ – ರಮಣ ಚೌಧರಿ



ಚಿತ್ರ ವರದಿ: ಗುಲಾಬಚಂದ ಜಾಧವ
ಆಲಮಟ್ಟಿ :
ಜನ್ಮತಾಳುತ್ತಲೇ ಯಾರು ಪ್ರಬುದ್ಧ ಬುದ್ದಿವಂತರಾಗಿರುವದಿಲ್ಲ. ಹಂತಹಂತವಾಗಿ ಅದು ಮೊಳಕೆಯೊಡೆಯುತ್ತದೆ. ಕಲಿಕೆ ಮತ್ತು ಜ್ಞಾನದಿಂದ ಜೀವನೋತ್ಸಾಹ ಪ್ರಾಪ್ತಿಯಾಗುತ್ತದೆ. ಸಮೃದ್ಧಿ ಬೆಳವಣಿಗೆಗೆ ನಾಂದಿ ಹೇಳುತ್ತದೆ.ಈ ಅಂಶಗಳೇ ಮನುಷ್ಯನ ಸಾಧನೆಗೆ ಪ್ರೇರಕವಾಗಿ ನಿಲ್ಲುತ್ತವೆ ಎಂದು ಬಿ.ಎಂ.ಎನ್.ಪಬ್ಲಿಕ್ ಶಾಲೆ ಚೇರಮನ್ನ ವ್ಹಿ.ವ್ಹಿ.ರಮಣ ಚೌಧರಿ ಅಭಿಪ್ರಾಯಿಸಿದರು.

ಬಿ.ಎಂ.ಎನ್.ಪಿ.ಶಾಲೆ ವಾಷಿ೯ಕ ಸ್ನೇಹ ಸಮ್ಮೇಳನ- ಎಸ್ಸೆಸ್ಸೆಲ್ಸಿಯಲ್ಲಿ ಔಟಾಪ್ ಔಟ್ ಅಂಕಗಳಿಸುವ ಮಕ್ಕಳಿಗೆ 10 ಗ್ರಾಂ.ಬಂಗಾರ

ಇಲ್ಲಿನ ಬಿ.ಎಂ.ಎನ್.ಪಬ್ಲಿಕ್ ಆಂಗ್ಲ ಮಾದ್ಯಮ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2021-22ನೇ ಸಾಲಿನ ವಾಷಿ೯ಕ ಸ್ನೇಹ ಸಮ್ಮೇಳನ ಹಾಗು ಎಸ್ಸೆಸ್ಸೆಲ್ಸಿ ಮಕ್ಕಳ ಬೀಳ್ಕೊಡುಗೆ ಮತ್ತು ಪ್ರತಿ ಪುರಸ್ಕಾರ ಸಮಾರಂಭ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ ದಿಸೆಯಲ್ಲಿ ವಿದ್ಯಾರ್ಥಿ ಯುವಸಮೂಹ ಗುಣ ಮಟ್ಟದ ವಿದ್ಯಾ ಜ್ಞಾನಾರ್ಜನೆಯ ಕಲಿಕೆಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ಸುಂದರ ಭವಿಷ್ಯ ಕಂಡುಕೊಳ್ಳಬೇಕು ಎಂದರು.


ಮಕ್ಕಳಲ್ಲಿ ಕಲಿಕಾಸಕ್ತಿ ಕ್ಷೀಣಿಸುತ್ತಿದೆ. ಅದನ್ನು ಉತ್ತೇಜಿಸುವ ನಿಟ್ಟಿನಲ್ಲಿ ತಾವು ಪ್ರಸ್ತುತ ಎಸ್ಸೆಸ್ಸೆಲ್ಸಿ ವಾಷಿ೯ಕ ಪರೀಕ್ಷೆಯಲ್ಲಿ ಎಲ್ಲ ವಿಷಯದಲ್ಲೂ ನೂರಕ್ಕೆ ನೂರು ಪ್ರತಿಶತ ಪಡೆಯುವ ಮಕ್ಕಳಿಗೆ 10 ಗ್ರಾಂ ಬಂಗಾರ ಪ್ರೋತ್ಸಾಹದ ರೂಪದಲ್ಲಿ ನೀಡುತ್ತೆನೆ.ಅಲ್ಲದೇ 96 ಕ್ಕಿಂತ ಹೆಚ್ಚು ಎಲ್ಲ ಆರು ವಿಷಯದಲ್ಲಿ ಪ್ರತಿಶತ ಅಂಕದೊಂದಿಗೆ ಉತ್ತೀರ್ಣರಾಗುವ ಮಕ್ಕಳಿಗೂ 5 ಗ್ರಾಂ.ಬಂಗಾರ ಕೊಡಮಾಡುವೆ ಎಂದು ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ ಚೇರಮನ್ನ ರಮಣ ಚೌಧರಿ ವಾಗ್ದಾನ ಮಾಡಿದರು. ಆಳವಾದ ಜ್ಞಾನ ಸಂಪಾದನೆಗೆ ಮಕ್ಕಳು ಪರಿತಪ್ಪಿಸಬೇಕು.ಆಸಕ್ತಿದಾಯಕ ಮನೋಬಲ ಹೆಚ್ಚಿಸಿಕೊಂಡು ಯಶಸ್ವಿ ಕಾಣಬೇಕು. ನ್ಯೂನತೆಗಳನ್ನೇ ಸಾಧನೆಗಳ ಮೆಟ್ಚಿಲಗಳನ್ನಾಗಿಸಿ ಪರಿವತಿ೯ಸಿಕೊಳ್ಳಬೇಕು. ಆಧುನಿಕತೆಯ ವ್ಯಾಮೋಹದಲ್ಲಿ ಸಿಲುಕದೇ ತಮ್ಮತನ ಕಾಯ್ದುಕೊಳ್ಳಲು ಮನಸ್ಸು ಮಾಡಬೇಕು. ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗದೆ ಮೈ ಮನ ಶುದ್ಧತೆಯಿಂದಿರಿಸಿಕೊಳ್ಳಬೇಕು. ಮೊಬೈಲ್ ಜಾಲ,ದುಷ್ಟ ಚಟಗಳಿಂದ ದೂರ ಇರಬೇಕು. ಮೈ ಮರೆಯದೇ ಯಾವುದಕ್ಕೂ ಹೆಜ್ಜೆ ಇರಿಸಿ ಒಳ್ಳೆಯ ವ್ಯಕ್ತಿತ್ವ ಚಹರೆಗಳು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.


ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ವಿಮರ್ಶೆಗಳೊಂದಿಗೆ ಬೋಧಿಸುವ ಮೂಲಕ ವೃತ್ತಿ ಗೌರವ ಹೆಚ್ಚಿಸಿಕೊಳ್ಳಬೇಕು.‌ ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ದಿಂದ ಮಕ್ಕಳ,ಪಾಲಕ ವೃಂದದವರ ಮನ ಗೆಲ್ಲಬೇಕು. ಮಕ್ಕಳ ಉತ್ತಮ ಭವಿಷ್ಯ ಅನುವರಣಕ್ಕೆ ಕ್ರಿಯಾಶೀಲರಾಗಿ ವಿವಿಧ ಚಟುವಟಿಕೆಗಳ ಕೌಶಲ್ಯತೆಯಿಂದ ಕಾಯಕಕ್ಕೆ ಇಳಿಯಬೇಕು. ಸಮಾಜದ ಪ್ರೀತಿ,ಗೌರವಕ್ಕೆ ಪಾತ್ರರಾಗಬೇಕು. ಮಕ್ಕಳ ಉಜ್ವಲ್ ಭವಿಷ್ಯ ರೂಪಿಸುವ ಸಾಮಥ್ರ್ಯ ಕೇವಲ ಗುರುಬಳಗದ ಮೇಲಿದೆ. ಹೀಗಾಗಿ ಶಿಕ್ಷಕ ವೃತ್ತಿಯನ್ನು ಸಮಾಜ ಅತ್ಯಂತ ಗೌರವಯುತ ನಂಬಿಕೆ ಅಚಲವಾಗಿರಿಸಿ ಮಕ್ಕಳನ್ನು ಶಾಲೆಗಳೆಂಬ ವಿದ್ಯಾಜ್ಞಾನ ದೇಗುಲಗಳಿಗೆ ಕಳಿಸುತ್ತಿದೆ. ಇದನ್ನು ಅರಿತು ಪಾವಿತ್ರತೆಯಿಂದ ಮಕ್ಕಳಿಗೆ ಶಿಕ್ಷಣ ನೀಡಬೇಕು. ಭವಿಷ್ಯದಲ್ಲಿ ಉತ್ತಮ ಸಮಾಜ ನಿಮಾ೯ಣಕ್ಕೆ ನಾವೆಲ್ಲರೂ ಸಂಕಲ್ಪ ತೋರಬೇಕು.ಸಮಾಜಮುಖಿ ಕಾರ್ಯವೇ ಶ್ರೇಷ್ಠ. ಶೈಕ್ಷಣಿಕ ಪ್ರಗತಿ ಹಾಗು ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶ ಆಧಾರಿತದಿಂದ ಶಾಲೆ,ಶಿಕ್ಷಣ ಸಂಸ್ಥೆ, ಮಕ್ಕಳ, ಪಾಲಕ,ಪೋಷಕರ ಕೀರ್ತಿ ಬೆಳಗಿಸಿ ಎಂದು ರಮಣ ಚೌಧರಿ ಹೇಳಿದರು.


ಶಾಲೆಯ ಆಡಳಿತಾಧಿಕಾರಿ ಕೃಷ್ಣಕುಮಾರ, ಗುರುವಿನ ಶ್ರೇಷ್ಠ ಸ್ಥಾನದಲ್ಲಿರುವ ಶಿಕ್ಷಕ ಸಮೂಹ ಭವಿಷ್ಯತ್ತಿನ ಉತ್ತಮ ಶಿಲ್ಪಗಳ ರೂಪಿಸುವ ಗುರುತರ ಹೊಣೆಗಾರಿಕೆ ಹೊತ್ತಿದ್ದಾರೆ. ಪಾವಿತ್ರ್ಯತೆಯಿಂದ ಆ ಕಾರ್ಯ ಸಾಗಲಿ ಎಂದರು.
ಹಿರಿಯ ಶಿಕ್ಷಕ ಆರ್.ಪಿ.ಲಮಾಣಿ, ಎಸ್ಸೆಸ್ಸೆಲ್ಸಿ ಮಕ್ಕಳು ಪರೀಕ್ಷೆಯಲ್ಲಿ ಸಾಧನೆ ಗೈದು ಕೀತಿ೯ ತರಲಿ ಎಂದು ಶುಭ ಹಾರೈಸಿದರು.


ಮುಖ್ಯ ಶಿಕ್ಷಕ ರವಿ ಕರಿಯನ್ನವರ, ಮಕ್ಕಳೇ ಶ್ರೇಷ್ಠ ಸಂಪತ್ತು. ಅವರಿಗೆ ಸರಿಯಾಗಿ ಶಿಕ್ಷಣ ನೀಡಿ ಪ್ರೋತ್ಸಾಹಿಸದರೆ ಸಾಕು. ಕಲಿಕಾ ಪ್ರಕ್ರಿಯೆ ಚುರುಕುಗೊಳ್ಳಲು ಸಾಧ್ಯ. ವಿದ್ಯೆಯಿಂದಲೇ ಬಾಳಿಗೆ ಬೆಳುಕು ಎಂದರು.
ಗುರುಮಾತೆ ಸಾವಿತ್ರಿ ದೇಸಾಯಿ, ಕಠಿಣ ಪರಿಶ್ರಮ, ಸತತ ಪ್ರಯತ್ನ, ಆತ್ಮವಿಶ್ವಾಸ, ಸಾಧಿಸುವ ಛಲದಂಥ ವಿನಯ ಶೀಲತೆಯ ಗುಣಗಳು ಇಂದಿನ ಮಕ್ಕಳಿಗೆ ಅತ್ಯಗತ್ಯ ಎಂದರು.


ಮಕ್ಕಳು ಶಾಲೆಗೆ, ಗುರು ಬಳಗಕ್ಕೆ ನೆನಪಿನ ಕಾಣಿಕೆಗಳನ್ನು ನೀಡಿ ಸಾರ್ಥಕತೆ ಮೆರೆದರು. ಇನ್ನೊಂದೆಡೆ ಶಾಲೆ ಮುಖ್ಯಸ್ಥರು, ಕಾಡು ಬೆಳೆಸಿ ನಾಡು ಉಳಿಸಿ ಎಂಬ ಧೈಯ ವಾಕ್ಯದಡಿಯಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ವಾಷಿ೯ಕ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ಮಕ್ಕಳಿಗೆ ಒಂದೊಂದು ಪೆನ್ ಮತ್ತು ಹಸಿರೆಲೆಗಳ ಸಸ್ಯಗಳನ್ನು ನೀಡಿ ಪ್ರಕೃತಿ ಪ್ರೇಮ ಬೀತ್ತಿದರಲ್ಲದೇ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ ಆತ್ಮಸ್ಥೈರ್ಯ ತುಂಬಿಸಿದರು.
ಅಂಬಿಕಾ ಮತ್ತು ಪ್ರಜ್ಞಾ ವಿಧ್ಯಾಥಿ೯ನಿಯರು ಪ್ರಾಥಿ೯ಸಿದರು. ಫಾತಿಮಾ ವಾಲಿಕಾರ ಸ್ವಾಗತಿಸಿದರು. ಮಕ್ಕಳ ಪರವಾಗಿ ಚಿನ್ಮಯಿ ಅನಿಸಿಕೆ ಹಂಚಿಕೊಂಡಳು.
ಮಹೆಬೂಬ್ ಮುಲ್ಲಾ, ಅಶೋಕ,ಭಜಂತ್ರಿ,ಭುವನೇಶ್ವರಿ ಬಿರಾದಾರ, ರೇಷ್ಮಾ ಇತರರಿದ್ದರು.
ರಾಘವೇಂದ್ರ ಸಿಂಧೆ, ದಾನೇಶ ರೆಡ್ಡಿ ನಿರೂಪಿಸಿದರು. ಶ್ರವಣ ಬಿರಾದಾರ ವಂದಿಸಿದರು. ಶಾಲಾ ಮಕ್ಕಳೇ ವಿವಿಧ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ವಿಶೇಷವಾಗಿತ್ತು.

Exit mobile version