ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ: ರವಿಕಾಂತ ಅಂಗಡಿ

ಉತ್ತರಪ್ರಭ
ಬೆಳ್ಳಟ್ಟಿ: ಶಿರಹಟ್ಟಿ ತಾಲೂಕಿನ ಬೆಳ್ಳಟಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಪರೀಕ್ಷಾ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿ ಮಾತನಾಡುತ್ತಾ. ಇಂದಿನ ಯುವಪಿಳಿಗೆ ಈ ದೇಶದ ಆಸ್ತಿ ಅವರಿಗೆ ಉತ್ತಮ ಶಿಕ್ಷಣ ದೊರೆತರೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಶಿಕ್ಷಣವೇ ಶಕ್ತಿ ಶಿಕ್ಷಣದಿಂದ ನಮ್ಮ ಊರು, ನಮ್ಮ ತಾಲೂಕು ಅಭಿವೃದ್ಧಿಯನ್ನು ಮಾಡಬಹುದು ಹಾಗಾಗಿ ನಾವೇಲ್ಲ ಉತ್ತಮವಾದ ಶಿಕ್ಷಣವನ್ನು ಪಡೆದು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಬಹುದು.
ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಲು ಕೂಲಿ ನಾಲಿ ಮಾಡಿ ಮಕ್ಕಳಿಗೆ ಕಲಿಸಲು ಮುಂದಾಗಿದ್ದಾರೆ, ಅದರ ಸದುಪಯೋಗ ಪಡೆದು ತಾವೇಲ್ಲ ಮೊರಾರ್ಜಿ ದೆಸಾಯಿ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸುಗಳಿಸಿ ನೀಮ್ಮ ತಂದೆ ತಾಯಿಗಳ ಕೀರ್ತಿಯನ್ನು ತರಬೇಕೆಂದು ಸಲಹೆ ನೀಡಿದರು.


ಮುಂದುವರಿದು ಮಾತನಾಡುತ್ತಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶ್ರಮವಹಿಸಿ ಓದುತ್ತಾರೆ ಅವರಿಗೆ ಮಾರ್ಗದರ್ಶನದ ಕೊರತೆ ಇರುವುದರಿಂದ ಯಶಸ್ಸುಗಳಿಸಲು ಸಾಧ್ಯವಾಗಿರಲಿಕ್ಕಿಲ್ಲ ಆದರೆ ಇಂತಹ ಕಾರ್ಯಗಾರಗಳಿಂದ ಉತ್ತಮ ಮಾರ್ಗದರ್ಶನ ಮತ್ತು ಪರೀಕ್ಷೆ ತಯಾರು ಮಾಡಲು ಸಲಹೆಗಳು ಸಿಗುವುದರಿಂದ ಈ ಬಾರಿ ಪರೀಕ್ಷೆ ಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಯಶಸ್ಸು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುನಿತ ರಾಜಕುಮಾರ ಅವರ ಹುಟ್ಟುಹಬ್ಬವನ್ನು ಕೆಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಎನ್ ಟಿ ಪೂಜಾರ, ನೀಲು ರಾಠೋಡ, ತರಬೇತಿದಾರರಾದ ಪ್ರಕಾಶ ವಡ್ಡರ, ಪುಲಿಕೇಶಿ ಗೌಡ ಪಾಟೀಲ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು

Exit mobile version