ಕೇಲೂರ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ಬೇಟಿ: ಸಮಾಜ ಕಲ್ಯಾಣ ಇಲಾಖೆಯಿಂದ 4ಲಕ್ಷದ ಚೆಕ್ ವಿತರಣೆ

ಉತ್ತರಪ್ರಭ

ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ವಿಷಪ್ರಾಷನಕ್ಕೆ ಪ್ರಯತ್ನಿಸಿದ ಘಟನೆ ಜರುಗಿತ್ತು. ಈ ಘಟನೆಯಲ್ಲಿ ಮೃತರಾದ ನಿರ್ಮಲ ಪಾಟೀಲ ಅವರ ಕುಟುಂಬ ಸದಸ್ಯರನ್ನು ಶುಕ್ರವಾರ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಭೇಟಿ ಮಾಡಿ ವಿಚಾರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮೃತ ಮಹಿಳೆಯ ಮಕ್ಕಳಿಗೆ ಸ್ಥಳೀಯವಾಗಿ ಜಿಲ್ಲಾಡಳಿತದಿಂದ ಶಿಕ್ಷಣ ಕೊಡಿಸುವದು ವ್ಯವಸ್ಥೆ ಸೇರಿದಂತೆ ಕುಟುಂಬಕ್ಕೆ ಸರ್ಕಾರದ ವಿವಿಧ ಯೋಜನೆಗಳ ಸಹಾಯ ದೊರಕಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮೃತರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 4,12,500 ರೂ. ಗಳ‌ ಪರಿಹಾರ ಚೆಕನ್ನು ವಿತರಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ತಹಶೀಲ್ದಾರ್ ಆಶಪ್ಪ ಪೂಜಾರ ಹಾಜರಿದ್ದರು.

Exit mobile version