ಉತ್ತರಪ್ರಭ

ಗದಗ: ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಗದಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶ, ವಿವೇಕ ವೇದಿಕೆ, ಯೂತ್ ಫಾರ್ ಚೇಂಜ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಜಿಲ್ಲಾಮಟ್ಟದ ನೆರೆಹೊರೆಯ ಸಂಸತ್ತನ್ನು ದಿನಾಂಕ 10 ಮಾರ್ಚ್ 2022 ರಂದು ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದಲ್ಲಿ ಆಯೋಜಿಸಲಾಗಿತ್ತು,

ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಎಂ ಸುಂದರೇಶ್ ಬಾಬು ಐಎಎಸ್ ಜಿಲ್ಲಾಧಿಕಾರಿಗಳು ಗದಗ್, ಶ್ರೀ ರವಿ ಗುಂಜೀಕರ್ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ಗದಗ್ ಡಾ. ಬಾಲಾಜಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಯೂತ್ ಅಸೋಸಿಯೇಷನ್ ಫೆಡರೇಶನ್ ರವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎಂ. ಎನ್. ನಟರಾಜ್ ರವರು ನೆರವೇರಿಸಿ ಮಾತನಾಡುತ್ತಾ ನೆರೆಹೊರೆಯ ಸಂಸತ್ತಿನ ರೂಪುರೇಷ ಹಾಗೂ ಅದರ ವಿಶೇಷತೆ ಮತ್ತು ಉದ್ದೇಶಗಳ ಕುರಿತು ಯುವಕ ಮಂಡಳಿಗಳ ಸದಸ್ಯರು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ. ವಿಷ್ಣುಕಾಂತ ಎಸ್ ಚಟಪಲ್ಲಿ ಕುಲಪತಿಗಳು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಕಾರ್ಯಕ್ರಮದ ಯಶಸ್ಸಿಗೆ ಹಾಗೂ ದೇಶದ ಬಲಾಢ್ಯ ಬೆಳವಣಿಗೆಗೆ ಯುವಕರೆಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಜಯಂತ ಕೆ. ಎಸ್. ಪ್ರಾದೇಶಿಕ ಪ್ರಮುಖರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್. ಉತ್ತರ ಕರ್ನಾಟಕ, ಶ್ರೀ ಮಲ್ಲಿಕಾರ್ಜುನ್ ರೆಡ್ಡೇರ ಅಧ್ಯಕ್ಷರು. ವರದಶ್ರೀ ಫೌಂಡೇಶನ್, ಶ್ರೀ ಪ್ರಭಾಕರ್ ದೇಶಪಾಂಡೆ, ಸದಸ್ಯರು ಗ್ರಾಮವಿಕಾಸ ಪ್ರಾಂತ್ ಹಾಗೂ ಡಾ. ರಾಜೇಶ್ ಭದ್ರ ಶೆಟ್ಟಿ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಯುವಜನ ಮತ್ತು ಸಮುದಾಯ ಅಭಿವೃದ್ಧಿ ವಿಷಯದ ಕುರಿತು ಮಾತನಾಡಿದ ಶ್ರೀ ಜಯಂತ್ ಕೆ.ಎಸ್ ರವರು ಸಮುದಾಯದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತಿ ಅವಶ್ಯಕವಾದದ್ದು ಭಾರತವು ಪ್ರಪಂಚದಲ್ಲಿ ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿದ್ದು ಇದು ಸಮುದಾಯದ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಹೇಳಿದರು. ಯುವ ಭಾರತ ಬಲಾಢ್ಯ ಭಾರತ ಎಂಬ ವಿಷಯದ ಕುರಿತು ವಿಷಯವನ್ನು ಮಂಡಿಸಿದ ಶ್ರೀ ಮಲ್ಲಿಕಾರ್ಜುನ ರೆಡ್ಡೇರ ರವರು ದೇಶದ ಸಂಸತ್ತಿನಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನಡೆಯುವ ಚರ್ಚೆ ಗಳಂತೆ ಈ ಕಾರ್ಯಕ್ರಮದಲ್ಲಿ ನಡೆದ ಚರ್ಚೆಗಳು ಕೂಡ ಯುವಜನತೆಯಲ್ಲಿ ಸ್ಫೂರ್ತಿಯನ್ನು ಮೂಡಿಸುವುದರ ಮೂಲಕ ದೇಶದ ಯುವಶಕ್ತಿಯ ಬಳಕೆಯಿಂದಾಗಿ ದೇಶ ವಿಶ್ವ ನಾಯಕ ನಾಗಿಸುವ ಕಾರ್ಯವಾಗಬೇಕು ಎಂದು ಹೇಳಿದರು. ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ವಿಷಯದ ಕುರಿತು ವಿಷಯವನ್ನು ಮಂಡಿಸಿದ ಶ್ರೀ ಪ್ರಭಾಕರ ದೇಶಪಾಂಡೆಯವರು ವಿಶ್ವವಿದ್ಯಾಲಯವು ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದ್ದು ಇಲ್ಲಿನ ಯುವಜನತೆ ಗ್ರಾಮೀಣ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು ಗ್ರಾಮೀಣ ಅಭಿವೃದ್ಧಿಯಲ್ಲಿ ಯುವಜನತೆ ಹಾಗೂ ಯುವಜನ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಡಾ. ರಾಜೇಶ್ ಭದ್ರ ಶೆಟ್ಟಿ ಅವರು ದೇಸಿ ಆಯುರ್ವೇದ ಹಾಗೂ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ವಿಸ್ತೃತವಾಗಿ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರು ಪ್ರೊ ಬಸವರಾಜ್ ಎಲ್. ಲಕ್ಕಣ್ಣವರ್, ಎನ್ಎಸ್ಎಸ್ ಸಂಯೋಜನಾಧಿಕಾರಿ ಶ್ರೀ ಪ್ರಶಾಂತ್ ಮೇರವಾಡೆ, ಕು. ರಂಜಿನಿ ಎನ್ . ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ಗದಗ ಶ್ರೀ ಲಿಂಗರಾಜ ನಿಡುವಣಿ, ವಿವೇಕ ವೇದಿಕೆ ಗದಗ್, ಯೂತ್ ಫಾರ್ ಚೇಂಜ್ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಸದಸ್ಯರು, ವಿಶ್ವವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳು ಕು. ನಮಿತಾ ಎಂ. ವೈ. ಶ್ರೀ ಪ್ರಕಾಶ್ ಮಾಚೇನಹಳ್ಳಿ ಶ್ರೀ ಅಭಿಷೇಕ್ ಎಚ್. ಈ. ನೆಹರೂ ಯುವ ಕೇಂದ್ರದ ಸ್ವಯಂಸೇವಕರು, ಸಿಬ್ಬಂದಿಗಳು, ಗದಗ ಜಿಲ್ಲೆಯ ಹಲವು ಯುವಕ ಸಂಸ್ಥೆಗಳ ಸದಸ್ಯರು ವಿಶ್ವವಿದ್ಯಾಲಯದ ಅಧಿಕಾರಿವರ್ಗ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ಚಂದ್ರಪ್ಪ ಬಾರಂಗಿ, ಕನ್ನಡ ಪ್ರಾಧ್ಯಾಪಕರು ನಿರೂಪಿಸಿದರು.

Leave a Reply

Your email address will not be published. Required fields are marked *

You May Also Like

ನರೆಗಲ್ ಗಾರ್ಡನ್ ಕಥೆ: ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ?

ಗದಗ: ಪಟ್ಟಣ ಪಂಚಾಯತಿ ಕಾಂಪೌಂಡ್ ಪಕ್ಕದಲ್ಲಿಯೇ ಉದ್ಯಾನವನ ಇದ್ದರು. ಸಹ ಇಲ್ಲಿನ ಮುಖ್ಯಾಧಿಕಾರಿ , ಸಿಬ್ಬಂದಿಗಳ…

ಕಂಡಕ್ಟರ್, ಡ್ರೈವರ್ ಗಳನ್ನು ಟಾರ್ಗೇಟ್ ಮಾಡಿದ್ರಾ ಡಿಪೋ ಮ್ಯಾನೇಜರ್..?

ಇದೀಗ ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಅವರ ವರ್ತನೆ ಮತ್ತೊಂದು ಯಡವಟ್ಟಿಗೆ ಕಾರಣವಾಗಿದೆ. ನಿನ್ನೆ ಘಟನೆ ನಂತರ ಇದೀಗ ಸಿಬ್ಬಂಧಿಗಳನ್ನು ಡಿಪೋ ಮ್ಯಾನೇಜರ್ ಟಾರ್ಗೆಟ್ ಮಾಡಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಗದಗ-ಬೆಟಗೆರಿ ನಗರ ಸಭೆ ಕಾಂಗ್ರೆಸ್ ರಿಟ್ ಅರ್ಜಿ ವಜಾ ಉಷಾ ದಾಸರ ಅಧ್ಯಕ್ಷರಾಗಿ ಮುಂದುವರಿಕೆ

ಉತ್ತರಪ್ರಭ ಗದಗ: ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ನ್ಯಾಯಾಲಯದಲ್ಲಿ…