ಉತ್ತರಪ್ರಭ
ಗದಗ: ತಾಲೂಕಿನ ನಭಾಪೂರ ತಾಂಡಾದ ರೈತ ರುಪಣ್ಣ ಸೋಮಪ್ಪ ಲಮಾಣಿಯವರ ಹೋಲದಲ್ಲೊ ಹೊಲದಲ್ಲಿ ಬೆಳೆದಿದ್ದ ಕಬ್ಬು ಆಕಸ್ಮಿಕ ಬೆಂಕಿಗೆ ತಗುಲಿ ಸುಮಾರು 5 ಎಕರೆ ಕಬ್ಬು, ಸುಟ್ಟು ಭಸ್ಮವಾದ ಘಟನೆ ನಭಾಪುರ ತಾಂಡಾದಲ್ಲಿ ನಡೆದಿದೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ವಿಷಯ ತಿಳಿಯುತ್ತಿದ್ದಂತೆ ದೌಡಾಯಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ 5 ಎಕರೆ ಕಬ್ಬು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಭರ್ಜರಿ ಬೆಳೆಯ ನಿರೀಕ್ಷೆಯಲ್ಲಿದ್ದ ರೈತ ಕಬ್ಬು ಸುಟ್ಟಿದ್ದರಿಂದ ಈಗ ಕಂಗಾಲಾಗಿದ್ದಾನೆ. ಕಷ್ಟ ಪಟ್ಟು ದುಡಿದ ಹೊಲದ ಬೆಳೆ ಸುಟ್ಟು ಹೋಗಿದೆ. ಸರ್ಕಾರ ಈ ರೈತನ ನೆರವಿಗೆ ಬರಬೇಕಾಗಿದೆ. ರೈತನ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಪ್ರಯತ್ನಿಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ವಿಷಕಾರಿ ಹಾವು ಕಚ್ಚಿ ವ್ಯಕ್ತಿ ಸಾವು

ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಚ್ಚಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಕುಡಿಯುವ ನೀರಿಗಾಗಿ ಆಹೋರಾತ್ರಿ ಧರಣಿ : ಕೆರೆಗಳನ್ನು ತುಂಬಿಸಿ ಪುಣ್ಯಕಟ್ಟಿಕೊಳ್ಳಿ- ಸಂಗನಬಸವ ಶ್ರೀ

ಉತ್ತರಪ್ರಭ ಆಲಮಟ್ಟಿ: ರಾಷ್ಟ್ರದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ ಅಖಂಡ ವಿಜಯಪುರ ಜಿಲ್ಲೆಯ ರೈತರಿಗೆ, ಜನ-ಜಾನುವಾರುಗಳ ಕುಡಿಯುವ…

ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊಡುವ ಡ್ಯಾನ್ಸ್ ಮಾಡಿದ ಹರ್ಷಿಕಾ-ಭುವನ್

ಬೆಂಗಳೂರು: ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದರೆ ಮಾಡಿದ ಸಹಾಯಕ್ಕೆ ಹೆಚ್ಚು ಮಹತ್ವ ಬರುತ್ತದೆ. ಜನರ ಸಂಕಷ್ಟ ಅರಿತ ಸ್ಯಾಂಡಲ್ ವುಡ್ ಸ್ಟಾರ್ ಗಳು ಅವರ ಕೈಲಾದಷ್ಟು ಸೇವೆಗೆ ಮುಂದಾಗಿದ್ದಾರೆ.

ಮಕ್ಕಳಲ್ಲಿ ಕಲೆಗಳ ವ್ಯಾಮೋಹ ಮೂಡಿಸಿ: ಉಮೇಶ್ ಶಿರಹಟ್ಟಿಮಠ

ಉತ್ತರಪ್ರಭ ನಿಡಗುಂದಿ: ಪ್ರತಿಯೊಬ್ಬ ಮಗುವಿನಲ್ಲಿ ಒಂದಿಲ್ಲೊಂದು ರೀತಿಯ ಕಲಾ ಪ್ರತಿಭೆ ಹುದುಗಿರುತ್ತದೆ. ಅಂಥ ಪ್ರತಿಭೆಗಳನ್ನು ಗುರುತಿಸಿ…