ಯಶಶ್ವಿನಿ ಯೋಜನೆ ರೈತರಿಗೆ ಮಾಸಿಕ ವೇತನ ಜಾರಿಗೊಳಿಸಿ

ಲಕ್ಷ್ಮೇಶ್ವರ:

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಉಪ ತಹಸೀಲ್ದಾರ್ ಮಂಜುನಾಥ ದಾಸಪ್ಪನವರಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಅಧ್ಯಕ್ಷ ರವಿ ಲಿಂಗಶೆಟ್ಟಿ ಹಾಗೂ ಗೌರವಾಧ್ಯಕ್ಷ ಪುಲಿಕೆಶಿ ಬಟ್ಟೂರ ರಾಜ್ಯದಲ್ಲಿ ರೈತರಿಗೆ ಅನುಕೂಲವಾಗುವಂತ ಯೋಜನೆಯನ್ನು ಜಾರಿಗೆ ತರಬೇಕು ರೈತರಿಗೆ ಯಾವುದೇ ವೇತನವಿರುವುದಿಲ್ಲ ನಿಸರ್ಗದ ಮೇಲೆ ರೈತರ ಬದುಕು ಇದೆ ಹಾಗಾದರೆ ರೈತರಿಗೆ ಜೀವನ ನಿರ್ವಹಣೆಗೆ ಮಾಸಿಕ ವೇತನ ವನ್ನು ಜಾರಿಗೆ ತರಬೇಕು ಮಾಸಿಕ ವೇತನ ಅದು ಅವರ ಕುಟುಂಬದ ಖರ್ಚನ್ನು ನಿಗಿಸುವಂತ ವೇತನವಾಗಬೇಕು ರೈತರ ಆರೋಗ್ಯಕ್ಕೆ ಮತ್ತು ಅವರ ಕುಟುಂಬಕ್ಕೆ ಪ್ರಿಯಾಗಿ ವೈದ್ಯಕಿಯ ವೆಚ್ಚವನ್ನು ಸರಕಾರ ಬರಿಸಬೇಕು ಬರಿ ಮಾತಲ್ಲಿ ರೈತರು ದೇಶದ ಬೆನ್ನೆಲುಬು ಅದು ಅಲ್ಲದೆ ಒಕ್ಕಲಿಗ ಒಕ್ಕಿದರೆ ಉಕ್ಕುವುದು ಜಗವೇ ಒಕ್ಕಲಿಗನೋಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂದು ಹೇಳುತ್ತೀರಿ ಇದು ಧ್ಯಯವಾಕ್ಯವಾಗಿದೆ ಹೊರತು ರೈತರ ಬೆನ್ನುಲಬು ಮುರಿಯುವಂತ ಪರಸ್ಥಿತಿ ರೈತರದಾಗಿದೆ ಮುಂದೆ ಎಲ್ಲರೂ ರೈತರಾಗದಿದ್ದರೆ ಹಸಿದ ಹೊಟ್ಟೆಗೆ ತಣ್ಣೀರ ಗತಿಯಾದಿತು ಎಂದು ಹೇಳುತ್ತಾ ರೈತರ ಬಾಳು ದಿನದಿಂದ ದಿನದಿಂದ ಹಾಳಾಗುತ್ತಿದ್ದು ರೈತರ ಕೈಯಲ್ಲಿ ಹಣವಿಲ್ಲದೆ ಪರದಾಡುವ ಪರಸ್ಥಿತಿ ಬಂದಿದೆ ರೈತರ ಆರೋಗ್ಯದಲ್ಲಿ ಏರುಪೆರುಗಳಾದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಆಗದಂತಹ ಸನ್ನಿವೇಶವಿದ್ದು ಹಿಂದೆ ರೈತರಿಗೆ ಅನುಕೂಲವಾಗಲು ಅವರಿಗೆ ಯಶಶ್ವಿನಿ ಯೋಜನೆಯು ಇತ್ತು ಅದನ್ನು ರದ್ದು ಪಡಿಸಿದ್ದರಿಂದ ರೈತರ ಕುಟುಂಬಗಳಿಗೆ ಅನ್ಯಾಯವಾಗಿದೆ ಯಶಶ್ವಿನಿ ಯೋಜನೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಹಾಗೂ ದೊಡ್ಡ ಕಾಯಿಲೆಗಳಿಗೆ ವಿಮಾ ದೊರೆಯತಿತ್ತು ಇದರಿಂದ ರೈತರ ಹಣ ಉಳಿಯುತ್ತಿತ್ತು ಯೋಜನೆ ಪುನಃ ಜಾರಿಗೊಳಿಸಿ ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಹೇಳಿದರು
. ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷ ಲಂಕೇಪ್ಪ ಶೇರಸೂರಿ, ಯುವಘಟಕ ಅಧ್ಯಕ್ಷ ಪ್ರದೀಪ ಜನಿವಾರದ, ಶಿವಣ್ಣ ಗಿಡಿಬಿಡಿ, ಭೀಮಣ್ಣ ಶಿಗ್ಲೆಪ್ಪನವರ, ಸಿ ಆರ್, ಚಾವಡಿ, ಮಹಾಂತೇಶ ಕಂಡೊಜಿ,ಬೀರಪ್ಪ ಪೂಜಾರ ಮಂಜು ಕಡ್ಡಿಪೂಜಾರ,ತಾಲೂಕ ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಬಡಿಗೇರ, ಪುಷ್ಪ ಅಣ್ಣಿಗೇರಿ, ಸಾವಿತ್ರಿ ಕುರಿ, ಸವಿತಾ ಬಾಲೆಹೊಸೂರ,ರಾಜೇಶ್ವರಿ ಮುಂಗೋಡಿ ಕಾರ್ಯಕರ್ತರು ಉಪಸ್ಥಿತರಿದ್ದರು

Exit mobile version