ಆಲಮಟ್ಟಿ : ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇನ್ನಷ್ಟು ಉತ್ತಮ ರೀತಿಯಲ್ಲಿ ಸಾಗಲು ಜಲ ಜೀವನ ಮಿಷನ್ ಯೋಜನೆ ಅನುಷ್ಟಾನಗೊಳಿಸಲಾಗಿದೆ.ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆಯ ಕೆಲಸ ಕಾರ್ಯಗಳು ವೇಗದಿಂದ ನಡೆಯುತ್ತಿವೆ. ಅದರಲ್ಲೂ ತಮ್ಮ ಬಸವನ ಬಾಗೇವಾಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸಮರೋಪಾದಿಯಲ್ಲಿ ಸಾಗುತ್ತಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 2021-22 ನೇ ಸಾಲಿನ ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಸಮೀಪದ ಬೇನಾಳ ಆರ್.ಸಿ, ಮರಿಮಟ್ಟಿ ಆರ್.ಸಿ ಗ್ರಾಮದಲ್ಲಿ ಕಾಯಾ೯ತ್ಮಕ ನಳಗಳ ಜೋಡಣೆ ಕಾಮಗಾರಿಯ ಭೂಮಿ ಪೂಜೆ ಹಾಗು ಆಲಮಟ್ಟಿ ಗ್ರಾಮ ಪಂಚಾಯತಿಯಲ್ಲಿ ಕಸ ವಿಲೇವಾರಿ ಘಟಕ ಹಾಗು ಜಲ ಜೀವನ ಮಿಷನ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಆಲಮಟ್ಟಿ ಸನಿಹದ ಮರಿಮಟ್ಟಿ ಆರ್.ಸಿ.ಗ್ರಾಮದಲ್ಲಿ ಕಾಯಾ೯ತ್ಮಕ ನಳಗಳ ಜೋಡಣೆ ಕಾಮಗಾರಿ ಭೂಮಿ ಪೂಜೆ ಶಾಸಕ ಶಿವಾನಂದ ಪಾಟೀಲ ನೆರವೇರಿಸಿದರು.


ಜಲ ಜೀವನ ಯೋಜನೆಗೆ ಹಣ ಕಡಿಮೆ ಇದ್ದಾಗ್ಯೂ ಜಿಲ್ಲೆಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಒಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಜಲಧಾರೆ ಎಂಬ ಯೋಜನೆ ಜಾರಿಗೆ ಬರಲಿದೆ. ಈ ಹಿಂದೆ ನಮ್ಮ ಕಾಂಗ್ರೆಸ್ ಸರಕಾರ ಇದ್ದಾಗಲೇ ಇದಕ್ಕೆ ಟಿಪಿಆರ್ ಅಗಿತ್ತು. ಈಗಿನ ಸರಕಾರ ಈ ಯೋಜನೆಗೆ ಪ್ರೋತ್ಸಾಹಿಸಿ ಟೆಂಡರ್ ಕರೆದಿದೆ. 2400 ಕೋಟಿ ಹಣವನ್ನು ವಿಜಯಪುರ ಜಿಲ್ಲೆಗೆ ಖಚು೯ ಮಾಡಲಾಗುತ್ತಿದೆ.ಅದರಲ್ಲೂ ವಿಶೇಷವಾಗಿ ಬಸವನ ಬಾಗೇವಾಡಿ, ಮುದ್ದೇಬಿಹಾಳ, ವಿಜಯಪುರಕ್ಕೆ ಆದ್ಯತೆ ನೀಡಲಾಗಿದೆ. ಸಿಂದಗಿ,ಇಂಡಿ, ತಾಲೂಕಕ್ಕೆ 1500 ಕೋಟಿ ಹಣ ಖಚು೯ ಮಾಡಲಾಗುತ್ತಿದೆ.

ಇಷ್ಟೆಲ್ಲ ಹಣ ಕುಡಿಯುವ ನೀರಿಗಾಗಿ ಬರತಕ್ಕಂಥ ದಿನಮಾನಗಳಲ್ಲಿ ಖಚು೯ ವೆಚ್ಚ ಮಾಡಲಾಗುತ್ತದೆ, ಆಲಮಟ್ಟಿ ಅಣೆಕಟ್ಟಿನಿಂದ ಎಡಿಷನಲ್ ಪೈಪ್ ಲೈನ್ ಗಳಿಗಾಗಿ ಇಂಡಿ,ಸಿಂದಗಿ,ಮುದ್ದೇಬಿಹಾಳ ವರೆಗೆ ನೀರು ಹರಿಸಿಕಳಿಸುವ ಮಹತ್ತರ ಯೋಜನೆ ಹಮ್ಮಿಕೊಂಡಿದ್ದು ಇದರಿಂದ ವಿಜಯಪುರ ನಗರ ಸಹಿತ ಈ ಎಲ್ಲ ತಾಲೂಕುಗಳಿಗೆ ಹೆಚ್ಚಿನ ನೀರು ಪಂಪ್ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದು ಶಾಸಕರು ತಿಳಿಸಿದರು.


ಅರಣ್ಯ ಇಲಾಖೆ, ಗ್ರಾ ಪಂ, ಪಪಂ, ಕೆಬಿಜೆಎನ್ ಎಲ್ ಪರಸ್ಪರ ಹೊಂದಾಣಿಕೆ ಇಲ್ಲದರಿಂದ ಆಲಮಟ್ಟಿ ಗ್ರಾ.ಪಂ‌ ಹಿಂದುಳಿದಿದೆ. ಇದರಿಂದ ಇಲ್ಲಿನ ಜನರು ಕಷ್ಟ ಅನುಭವಿಸುವಂತಾಗಿದೆ.ಇಂಥ ಸಮಸ್ಯೆಗಳು ನಿಲ್ಲಬೇಕು. ಎಲ್ಲವನ್ನು ಹೊಂದಾಣಿಕೆ ಮಾಡಿಕೊಂಡು ಈ ಗ್ರಾ ಪಂ.ವನ್ನು ಜಿಲ್ಲೆಯಲ್ಲಿಯೇ ಒಂದು ಮಾದರಿ ಗ್ರಾ.ಪಂ. ಮಾಡಲು ಮುಂದಾಗಬೇಕು ಎಂದರು.


ತಮ್ಮ ಅಧಿಕಾರಾವಧಿಯಲ್ಲಿ ವಿಶೇಷ ಸಾಧನೆ ಮಾಡಲಾಗಿದೆ. ಇಡೀ ರಾಜ್ಯದಲ್ಲೇ ಹೆಚ್ಚಿನ ಅನುದಾನವನ್ನು ಹೊಂದಿರುವ ದೇವನಹಳ್ಳಿ ಗ್ರಾ.ಪಂ. ಬಳಿಕ ಎರಡನೇ ಸ್ಥಾನದಲ್ಲಿ ನನ್ನ ಮತಕ್ಷೇತ್ರದ ಕೂಡಗಿ ಗ್ರಾ.ಪಂ. ಎಂಬುದು ಹೆಮ್ಮೆಯ ಗಮನಾರ್ಹ ವಿಷಯ. ಕೂಡಗಿ ಗ್ರಾಪಂ‌ಗೆ ವರ್ಷಕ್ಕೆ 3 ಕೋಟಿ ಆದಾಯ ಸಂಗ್ರಹವಾಗುತ್ತದೆ.ಅದೇ ಮಾದರಿಯಲ್ಲಿ ಆಲಮಟ್ಟಿಯಲ್ಲೂ ಅಗಬೇಕು. ತಮ್ಮ ಅವಧಿಯಲ್ಲಿ ಇಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡ, ತೆರೆದ ಚರಂಡಿಗಾಗಿ ಒಂದು ಕೋಟಿ ಹಣ ಮಂಜೂರು ಮಾಡಿಸಿ ಕೆಲಸ ಆರಂಭಿಸಿದ್ದೆವೆ. ಶುದ್ಧ ಕುಡಿಯುವ ನೀರಿನ ಘಟಕಗಳು, ಸರಕಾರಿ ಪ್ರಾಥಮಿಕ ಶಾಲೆಗಳು, ಸಿಸಿ ರಸ್ತೆಗಳು, ಗ್ರಾಪಂ ವತಿಯಿಂದ ಶಾಲಾ ಮತ್ತು ಇತರೆ ಕಾಂಪೌಂಡ್ ಗಳ ನಿಮಾ೯ಣಕ್ಕೆ 3 ಕೋಟಿ ಹಣ ಖಚು೯ ಮಾಡಲಾಗುತ್ತಿದೆ.ಕ್ರಿಯಾಶೀಲರಾಗಿ ಕೆಲಸ ಮಾಡುವ ಅವಕಾಶ ಲಭಿಸಿದೆ. ಅಮೃತ ಗ್ರಾಪಂ.ಯೋಜನೆಯಡಿಯಲ್ಲಿ ಇನ್ನೂ ವಿಶೇಷ ಅನುದಾನಗಳು ಬರುತ್ತವೆ ಎಂದರು.


ಮೀನುಗಾರಿಕೆ ವಿವಿ ಸ್ಥಾಪನೆ- ಸರಕಾರಕ್ಕೆ ವರದಿ ಸಲ್ಲಿಕೆ ಆಲಮಟ್ಟಿಯಲ್ಲಿ ಮೀನುಗಾರಿಕೆ ವಿಶ್ವ ವಿದ್ಯಾಲಯ ನಿಮಾ೯ಣಕ್ಕೆ ಸಮೀಕ್ಷೆ ನಡಿಸಿ ಸರಕಾರಕ್ಕೆ ವರದಿ ನೀಡಲಾಗಿದೆ. ಆ ದಿಸೆಯಲ್ಲಿ ಸವೆ೯ ಮಾಡಲು ಸರಕಾರಕ್ಕೆ ತಾವು ಪತ್ರ ಬರೆದು ಒತ್ತಾಯಿಸಿರುವೆ ಎಂದು ತಿಳಿದ ಶಾಸಕ ಶಿವಾನಂದ ಪಾಟೀಲ, ಆಲಮಟ್ಟಿ ಗ್ರಾಪಂ. ಮೇಲ್ದರ್ಜೆಗೆ ಏರಿಸುವಂತೆ, ಸಂತೆ ಮಾರುಕಟ್ಟೆ ಅಭಿವೃದ್ಧಿ ಪಡಿಸುವಂತೆ, ದೇವಸ್ಥಾನಗಳ ಆವರಣದಲ್ಲಿ ಹಾಗು ಆಲಮಟ್ಟಿ ಆರ್.ಸಿ ಯಿಂದ ಪಂಪಿನವರೆಗೆ ಡಾಂಬರ ರಸ್ತೆ ,ಯಾತ್ರಿ ನಿವಾಸ ನಿಮಾ೯ಣ ಸೇರಿದಂತೆ ಇತರೆ ಅಭಿವೃದ್ಧಿ ಪರ ನಾನಾ ಬೇಡಿಕೆಗಳು ಜನತೆ ತಮ್ಮೆದುರಿಗೆ ಇರಿಸಿದ್ದು ಅವುಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ಶಾಸಕರು ನೀಡಿದರು.
ಆಲಮಟ್ಟಿ ಗ್ರಾಮದಲ್ಲಿ ನಾನಾ ತರಹದ ಅನೇಕ ಸಮಸ್ಯೆಗಳಿವೆ. ವಲಸಿ ಬಂದವರ,ಮೂಲಭೂತವಾಗಿ ವಾಸಸ್ಥಾನ ಮಾಡಿಕೊಂಡವರ ಸಮಸ್ಯೆಗಳಿವೆ. ಬಹು ವರ್ಷಗಳ ಹಿಂದಿನಿಂದ ಬಂದಿರುವ ಈ ಸಮಸ್ಯೆಗಳಿಗೆ ಮುಕ್ತಿಗಾಣಿಸಬೇಕಾಗಿದೆ. ಅಪಾರ ಅಭಿವೃದ್ಧಿ ಅಗಬೇಕ್ಕೆನ್ನುವ ಇಚ್ತಾಶಕ್ತಿಗಳನ್ನಿರಿಸಿಕೊಂಡವರ ಸಮಸ್ಯೆಗಳು ಬೇರೆ ಇವೆ ಎಂದ ಅವರು, ಇವೆಲ್ಲದರ ಮಧ್ಯೆ ಆಲಮಟ್ಟಿ ಗ್ರಾಪಂ ವನ್ನು ಅಮೃತ ಗ್ರಾಪಂ.ಯೋಜನೆಯಲ್ಲಿ ಸೇರಿಸಿರುವುದು ಸಂತಸದ ವಿಚಾರ. ವಿಶ್ವಾಸ ಮನೋಭಾವದಿಂದ ಜನರ ಸೇವೆಗೆ ಗ್ರಾಪಂ. ಸದಸ್ಯರು ಅಣಿಯಾಗಬೇಕು. ಜನರ ಬೇಡಿಕೆಗಳು ತರಾತುರಿಯ ಒತ್ತಡದಲ್ಲಿ ಈಡೇರಿಸಲು ಆಗದು. ಶಾಸಕಾಂಗ,ಕಾಯಾ೯ಂಗದೊಂದಿಗೆ ಎಲ್ಲರು ಸಹಕರಿಸಿದರೆ ಅಭಿವೃದ್ಧಿ ಸಾಧ್ಯ ಎಂದರು.
ಹಿಂದೆಯೂ ಅನೇಕ ಜನ ಶಾಸಕರು ಇಲ್ಲಿ ಕೆಲಸ ಮಾಡಿ ಹೋಗಿದ್ದಾರೆ. ಅವರೆಲ್ಲರು ಕೆಲಸ ಮಾಡಿದ್ದರೆ ನನಗೆ ಕೆಲಸ ಮಾಡುವ ಅವಕಾಶವೇ ಇರುತ್ತಿರಲಿಲ್ಲ. ಜಾದೂ ಮಾಡುವ ಅವಕಾಶ ಇದ್ದರೆ ಮಾಡಬಹುದಿತ್ತು ಎಂದು ಮಾಮಿ೯ಕವಾಗಿ ಹೇಳಿದ ಶಾಸಕ ಶಿವಾನಂದ ಪಾಟೀಲ, ಸರಕಾರದಲ್ಲಿ ಕೆಲಸಗಳು ನಿರಂತರವಾಗಿ ನಡೆಯಬೇಕು.ಒಂದು ಅಗಿರುತ್ತೆ ಇನ್ನೊಂದು ಅಗಿರಲ್ಲ. ಒಮ್ಮೊಮ್ಮೆ ಬಹಳಷ್ಟು ಕೆಲಸಗಳು ಅಗಿರುತ್ತವೆ ಎಂದರು. ತಮ್ಮ ಅಧಿಕಾರಾವಧಿಯಲ್ಲಿ ವಿಶೇಷವಾದಂಥ ಅನುದಾನವನ್ನು ಆಲಮಟ್ಟಿ ಗ್ರಾ.ಪಂ.ಗೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆದಾಯಕ ಇಂಗಿತ ಶಾಸಕರು ವ್ಯಕ್ತಪಡಿಸಿದರು.
ಗ್ರಾಪಂ.ಅಧ್ಯಕ್ಷ ಮಂಜುನಾಥ್ ಹಿರೇಮಠ, ಗ್ರಾಮದ ಮುಖಂಡರಾದ ಗೋಪಾಲ ವಡ್ಡರ, ಸಿ.ಎ.ಪಾಟೀಲ, ವಿ.ಎಸ್.ಹಿರೇಮಠ, ಉಪಾಧ್ಯಕ್ಷೆ ಮೀನಾಕ್ಷಿ ಉಪ್ಪಾರ,ಶೋಭಾ ಲಮಾಣಿ, ಎಚ್.ಎಫ್.ಕಟ್ಟಿಮನಿ, ಎಂ.ಡಿ.ಬಾಗಲಕೋಟ, ಎಇಇ ಪಾಟೀಲ ಮೊದಲಾದವರು ಇದ್ದರು. ಇದೇ ಸಂದರ್ಭದಲ್ಲಿ ಆಲಮಟ್ಟಿ ಗ್ರಾಮ ವಿಕಾಸ ಕಿರು ಸಂಚಿಕೆ ಶಾಸಕರು ಬಿಡುಗಡೆಗೊಳಿಸಿದರು.
ಪೋಟೋ ಫೈಲ್ : ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಆಲಮಟ್ಟಿ ಸನಿಹದ ಮರಿಮಟ್ಟಿ ಆರ್.ಸಿ.ಗ್ರಾಮದಲ್ಲಿ ಕಾಯಾ೯ತ್ಮಕ ನಳಗಳ ಜೋಡಣೆ ಕಾಮಗಾರಿ ಭೂಮಿ ಪೂಜೆ ಶಾಸಕ ಶಿವಾನಂದ ಪಾಟೀಲ ನೆರವೇರಿಸಿದರು.

Leave a Reply

Your email address will not be published. Required fields are marked *

You May Also Like

ಹೆಚ್ಚು ಮದ್ಯ ಕುಡಿದಿದ್ದಾನೆ ಎಂಬ ಕಾರಣಕ್ಕೆ ಕೊಲೆ!

ತಮಗಿಂತ ಹೆಚ್ಚು ಮದ್ಯ ಸೇವನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಇಲ್ಲಿಯ ಆರ್.ಟಿ. ನಗರದಲ್ಲಿ ನಡೆದಿದೆ.

ಪ್ರವಾಸಿಗರಿಗೆ ಮಡಿಕೇರಿ ಮುಕ್ತ

ಮಡಿಕೇರಿ : ಕೊರೊನಾ ಸೋಂಕಿನ ಮಧ್ಯೆಯೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.…

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಕಳಪೆ ಕಾಮಗಾರಿಗೆ ತಡೆ

ಉತ್ತರ ಪ್ರಭ ಸುದ್ದಿರೋಣ : ಪಟ್ಟಣದ ಸಿದ್ದಾರೊಡ ಮಠದ ಮುಂದಿನ ರಸ್ತೆ ದುರಸ್ಥಿಯನ್ನು ಅತ್ಯಂತ ಕಳಪೆ…

ಜಕ್ಕಲಿಯಲ್ಲಿ ಹೀಗೊಂದು ವಿಶಿಷ್ಟ ಹೋಳಿ ಹುಣ್ಣಿಮೆ ಆಚರಣೆ

ವಸಂತ ಋತುವಿನ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣುಮೆ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ಹಿಂದೂ ಧರ್ಮದ ಪ್ರಕಾರ ಹೋಳಿ ಒಂದು ಮಹತ್ವಪೂರ್ಣ ಮಹಾಪರ್ವ ಎಂದು ಭಾವಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮಾ.29 ಸೋಮವಾರ ಹೋಳಿ ಹಬ್ಬವನ್ನು ಹಾಗೂ ಕಾಮ ದಹನವನ್ನು ಮಾ.28 ಆಚರಿಸಲಾಗುತ್ತದೆ.