ಉತ್ತರಪ್ರಭ
ಗದಗ: ಗದಗ ಬೆಟಗೇರಿ ನಗರ ಸಭೆಯ 35 ವಾರ್ಡಗಳಲ್ಲಿ 18 ವಾರ್ಡಗಳಲ್ಲಿ ಬಿಜೆಪಿ, 15 ವಾರ್ಡಗಳಲ್ಲಿ ಕಾಂಗ್ರೇಸ್ ಮತ್ತು ಇಬ್ಬರು ಪಕ್ಷೇತರರ ಸಂಖ್ಯಾ ಬಲವನ್ನು ನಗರಸಭೆ ಹೊಂದಿದ್ದು ಅಧ್ಯಕ್ಷ ಗದ್ದುಗೆಗಾಗಿ ತಿವ್ರ ಪೈಪೊಟಿ ನಡೆಯುತ್ತಿದ್ದು ಇಂದು ನಡೆಯುವ ಅಧ್ಯಕ್ಷ ಉಪಾದ್ಯಕ್ಷ ಚುನಾವಣೆ ತಿವ್ರ ಕೂತೂಹಲ ಕೆರಳಿಸಿದೆ. ಜನರು ಒಂದು ಕಡೆ ತಮ್ಮ ತೀರ್ಪನ್ನು ಇಗಾಗಲೇ ಪ್ರಕಟಿಸಿ ತಮ್ಮ ಕರ್ತವ್ಯ ಪ್ರಜ್ಞೆ ಇಲ್ಲಿ ಮತದಾರರು ಮೆರೆದಿದ್ದರು ಇತ್ತ ಕಡೆ ಜನಪ್ರತಿನಿದಿಗಳ ಮತ ಎಲ್ಲರಲ್ಲೂ ಗೊಂದಲ ಉಂಟುಮಾಡಿದಂತು ನಿಜ .

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಿಗದಿಯಂತೆ ನಡೆಯುತ್ತದೆ. ಯಾವುದೇ ರೀತಿಯ ಗೊಂದಲಗಳಿಲ್ಲ 4 ಮಂದಿ ವಿಧಾನ ಪರಿಷತ್ ಸದಸ್ಯರು ಮತ್ತು ಒರ್ವ ರಾಜ್ಯ ಸಭಾ ಸದಸ್ಯರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ. ಆ ಅರ್ಜಿಗಳ ಪ್ರಕ್ರಿಯೆ ಬೇರೆ ನಡೆಯುತ್ತದೆ ಹಾಗಾಗಿ ಗದಗ ಶಾಸಕರು ಮತ್ತು ಸಂಸದರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು-ರಾಯಪ್ಪ ಹುಣಸಗಿ ಸಹಾಯಕ ಆಯುಕ್ತರು ಗದಗ


ನಗರಸಭೆ ಚುನಾವಣೆಯ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಅಧಿಸೂಚನೆ ಹೊರಡಿಸಿದ ನಂತರ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಗಳಲ್ಲಿ ಸಭೆ ಮೇಲೆ ಸಭೆ ಅಭ್ಯರ್ಥಿಗಳನ್ನು ಹಿಡದಿಡುವ ಸಾಹಸ ಪ್ರಕ್ರೀಯೆಯಲ್ಲಿ ಎರಡು ಪಕ್ಷಗಳು ತಮ್ಮ ತಂತ್ರಗಾರಿಕೆಯನ್ನು ಇಂದಿನ ವರೆಗೆ ಮುಂದುವರೆಸಿವೆ.18 ವಾರ್ಡಗಳಲ್ಲಿ ಬಿಜೆಪಿ, 15 ವಾರ್ಡಗಳಲ್ಲಿ ಕಾಂಗ್ರೇಸ್ ಮತ್ತು ಇಬ್ಬರು ಪಕ್ಷೇತರರ ಇಲ್ಲಿ ಇಬ್ಬರೂ ಪಕ್ಷೇತರರು ಕಾಂಗ್ರೆಸ್ ಪಕ್ಷಕ್ಕೆ ಬೆಂಲಿಸಿದರು ಕಾಂಗ್ರೆಸ್ ನ ಸಂಖ್ಯೆ 17 ಆಗಲಿದೆ ಈಗಾಗಲೇ ಒರ್ವ ಪಕ್ಷೇತರ ಅಭ್ಯರ್ಥಿ ಶಾಸಕರಾದ ಎಚ್ ಕೆ ಪಾಟೀಲ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದಾರೆ ಇರುವ ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಪಕ್ಷ ಸೇರಿದರು ಅವರ ಸಂಖ್ಯಾಬಲ 17 ಕ್ಕೆ ಬಂದು ನಿಲ್ಲುತ್ತದೆ. ಇತ್ತ ಬಿಜೆಪಿ ತನ್ನ 18 ಅಭ್ಯರ್ಥಿ ಗಳನ್ನು ಅತ್ತ ಇತ್ತ ಸರಿಯದಂತೆ ನೋಡುಕೊಂಡು ಈ ಭಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸವನ್ನು ಹೊಂದಿದ್ದು ಕಾಂಗ್ರೆಸ್ ಏನಾದರೂ ತಂತ್ರಗಾರಿಕೆಯನ್ನು ಮಾಡಿ ಬಿಜೆಪಿಯ ಆಶೆ ಇಡೆರದೇ ಮತ್ತೆ ಅಧಿಕಾರ ಗದ್ದುಗೆ ಎರಲು ಪ್ರಯತ್ನಿಸುತ್ತಿದೆ.

ಗೊಂದಲಗಳಿಗೆ ಕಾರಣ: ಬಿಜೆಪಿಗೆ ಗದ್ದುಗೆ ಎರಲು ಜನಾದೇಶ ನೀಡಿದೆ ಎಂದುಕೊಂಡ ಬಿಜೆಪಿ ಖುಷಿಯಲ್ಲಿರುವಾಗಲೇ ಇತ್ತ ಕಾಂಗ್ರೆಸ್ ಪಕ್ಷ ಜನಪ್ರತಿನಿದಿಗಳ ಮತದಾನದಿಂದ ಕಾಂಗ್ರೇಸ ಅಧ್ಯಕ್ಷ ಗದ್ದುಗೆ ಭದ್ರ ಪಡಿಸಲು ಪ್ರಯತ್ನಿಸಿದ್ದು ಜನರಲ್ಲಿ ಗೊಂದಲ ಉಂಟುಮಾಡಲು ಕಾರಣವಾಗಿದೆ.

ನಗರಸಭೆ ಗದ್ದುಗೆ ಎರಲು ಕಾಂಗ್ರೆಸ್ ಅನ್ಯ ಮಾರ್ಗವನ್ನು ಹೂಡುಕುತ್ತಿದೆ. ಎನೇ ಪ್ರಯತ್ನ ಮಾಡಿದರು ಕಾಂಗ್ರೆಸ್ ಸಫಲವಾಗಲ್ಲ ಈ ಭಾರೀ ಬಿಜೆಪಿಯ ಉಷಾ ಮಹೇಶ ದಾಸರ ಅಧ್ಯಕ್ಷ ಗದ್ದುಗೆ ಪಕ್ಕಾ ಅದರಲ್ಲಿ ಯಾವುದೆ ಅನುಮಾನವಿಲ್ಲ . ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯರ ವಾಸ ಗದಗ ನಲ್ಲಿ ಇದೆ ಎಂದು ಹೇಳುತ್ತಿದ್ದಾರೆ‌ .ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ ರವರು ತಮ್ಮ ಚುನಾವಣೆಯಲ್ಲಿ ಹಾವೇರಿ ಯನ್ನು ತೋರಿಸಿದ್ದಾರೆ ಯಾವುದೇ ರೀತಿಯ ಅವರ ಕುತಂತ್ರ ಈ ಭಾರಿ ಫಲಿಸಲ್ಲ -ಅನೀಲ ಮೆಣಸಿನಕಾಯಿ ಬಿಜೆಪಿ ಮುಖಂಡರು

ಜನಪ್ರತಿನಿದಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ನಿಂದ ಶಾಸಕರಾದ ಎಚ್ ಕೆ ಪಾಟೀಲ ಮತ್ತು ಬಿಜೆಪಿಯಿಂದ ಸಂಸದ ಶಿವಕುಮಾರ ಉದಾಸಿಯವರ ಮತಗಳು ಪ್ರಮುಖವೆಂದು ಎಲ್ಲರ ಲೇಕ್ಕಾಚಾರದಲ್ಲಿ ಇರುವಾಗಲೇ ದಿಡೀರ ಬೆಳವಣಿಗೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.ಇತ್ತ ಬಿಜೆಪಿ ಎಂಎಲ್ ಸಿ ಎಸ್ ವ್ಹಿ ಸಂಕನೂರ ಅವರು ಹುಬ್ಬಳ್ಳಿ ಯಲ್ಲಿ ವಾಸ ಎಂದು ತೋರಿಸಿಕೊಂಡರೆ ಇತ್ತ ಕಾಂಗ್ರೆಸ್ ವಿಧಾನ ಪರಿಷತ್ ಸದ್ಯಸ್ಯರಾದ ಸಲೀಂ ಅಹ್ಮದ ,ಪ್ರಕಾಶ ರಾಠೋಡ ಮತ್ತು ಕೊಂಡಜ್ಜಿ ಮತ್ತು ರಾಜ್ಯಸಭಾ ಸದಸ್ಯರಾದ ಎಲ್ ಹನಮಂತಯ್ಯ ನವರ ಕೂಡಾ ಗದಗನಲ್ಲಿ ವಾಸವೆಂದು ತೋರಿಸಲಾಗಿದ್ದು ಹೀಗಾಗಿ ಜನರಲ್ಲಿ ಗೊಂದಲ ಮೂಡಿದೆ.

ವಿಧಾನ ಪರಿಷತ್ ಸದಸ್ಯರ ಮತದಾನ ದ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಪಕ್ಷದಲ್ಲಿ ಇದರ ಬಗ್ಗೆ ಚರ್ಚೆಯಾಗಿಲ್ಲ . ಇನ್ನೂ ಅಧ್ಯಕ್ಷ ಆಕಾಂಕ್ಷಿಯ ಬಗ್ಗೆಯೂ ಚರ್ಚೆಯೇ ನಡೆದಿಲ್ಲ ವರಿಷ್ಠರು ಇಂದು ಸಭೆ ಸೇರಿ ಈ ಎಲ್ಲಾ ಬೆಳವಣಿಗೆ ಬಗ್ಗೆ ತಿರ್ಮಾನ ತೆಗೆದುಕೊಳ್ಳ ಬಹುದು

– ಗುರಣ್ಣ ಬಳಗಾನೂರ ಶಹರ ಘಟಕದ ಅಧ್ಯಕ್ಷ

ಬಿಜೆಪಿ ಎಂಎಲ್ ಸಿ ಎಸ್ ವ್ಹಿ ಸಂಕನೂರ ಕಾಂಗ್ರೆಸ್ ನ ವಿಧಾನ ಪರಿಷತ್ ಸದ್ಯಸ್ಯರಾದ ಸಲೀಂ ಅಹ್ಮದ ,ಪ್ರಕಾಶ ರಾಠೋಡ ಮತ್ತು ಕೊಂಡಜ್ಜಿ ಮತ್ತು ರಾಜ್ಯಸಭಾ ಸದಸ್ಯರಾದ ಎಲ್ ಹನಮಂತಯ್ಯ ನವರ ಕೂಡಾ ಗದಗನಲ್ಲಿ ವಾಸ ವಿದ್ದೆವೆ ಎಂದು ಜಿಲ್ಲಾಡಳಿತ ಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಇನ್ನೂ ಅವರ ಮನವಿಯನ್ನು ಪರೀಶಿಲಿಸಿ ಅಂತಮವಾಗಿ ಮತದಾನದ ಹಕ್ಕನ್ನು ಇನ್ನೂವರೆಗೆ ನೀಡದ ಕಾರಣ ಕಾಂಗ್ರೆಸ್ ಎನೇ ಪ್ರಯತ್ನಿಸಿದರು ಈ ಭಾರಿ ನಗರಸಭೆ ಗದ್ದುಗೆ ಎರಲು ಸಾಧ್ಯವಿಲ್ಲ ಎಂಬ ಲೆಕ್ಕಾಚಾರ ಬಿಜೆಪಿಯದ್ದು ಸಂಖ್ಯಾ ಬಲದಲ್ಲಿ ಬಿಜೆಪಿ 18 ಒರ್ವ ಸಂಸದ ಸೇರಿ 19 ಆಗುತ್ತದೆ ಆದರೆ ಕಾಂಗ್ರೆಸ್ ಸಂಖ್ಯಾಬಲ 15ಇಬ್ಬರು ಪಕ್ಷೇತರರು ಮತ್ತು ಶಾಸಕರಾದ ಎಚ್ ಕೆ ಪಾಟೀಲ ಅವರ ಮತವನ್ನು ಸೇರಿಸಿ 18 ಕ್ಕೆ ಎರಲಿದೆ ಹೀಗಾಗಿ ಬಿಜೆಪಿಯು ಈ ಭಾರಿ ಗದ್ದುಗೆ ಎರುವ ಎಲ್ಲಾ ಸಾಧ್ಯತೆ ಗಳು ಇವೇ ಎಂದು ರಾಜಕೀಯ ತಜ್ಞರ ಅಭಿಪ್ರಾಯ. ಬಿಜೆಪಿಯ 35ನೇ ವಾರ್ಡನಿಂದ ಉಷಾ ಮಹೇಶ ದಾಸರ ಸ್ಪರ್ಧಿಸಿ ಗೆಲುವನ್ನು ಸಾಧಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅದರಂತೆ ಕಾಂಗ್ರೆಸ್ ಪಕ್ಷದಿಂದ ಕೃಷ್ಣಾ ಪರಪೂರ ಸೇರಿದಂತೆ ಅನೇಕರಿಗೆ ಅಧ್ಯಕ್ಷ ಸ್ಥಾನದ ಬಗ್ಗೆ ಸಿದ್ಧಗೊಳ್ಳಲು ಪಕ್ಷ ಈಗಾಗಲೇ ಸೂಚನೆ ನೀಡಿದ್ದು ಭಾರಿ ಕೂತೂಹಲ ಕೆರಳಿಸಿದ್ದಂತೂ ನೀಜ.

ವಿಧಾನ ಪರಿಷತ್ ಸದ್ಯಸ್ಯರಾದ ಸಲೀಂ ಅಹ್ಮದ , ಎಸ್ ವ್ಹಿ ಸಂಕನೂರ, ಮತ್ತು ಕೊಂಡಜ್ಜಿ ಮತ್ತು ರಾಜ್ಯಸಭಾ ಸದಸ್ಯರಾದ ಎಲ್ ಹನಮಂತಯ್ಯ , ವಿಧಾನ ಪರಿಷತ್ ಸದ್ಯಸ್ಯರಾದ ಪ್ರಕಾಶ ರಾಠೋಡ


ನಗರ ಸಭೆ ಗದ್ದುಗೆ ಎರಡು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.
ಚುನಾವಣೆಯಲ್ಲಿ ಯಾವುದು ನಿಶ್ಚಿತವಿಲ್ಲ ಇಲ್ಲಿ ಕುದುರೆ ವ್ಯಾಪಾರ ನಡೆದರೇ ಯಾರೂ ಬೇಕಾದರು ಗದ್ದುಗೆ ಎರಬಹುದು.
ಇಲ್ಲಿ ಎರಡು ಪಕ್ಷಗಳಿಂದ ವಿಪ್ ಜಾರಿಯಾಗುತ್ತೆ ಪಕ್ಷದ ಚಿಹ್ನೆಯಿಂದ ಗೆದ್ದು ಬಂದಿರುವ ಎಲ್ಲರಿಗೂ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಬೇಕಾಗುತ್ತದೆ.

Leave a Reply

Your email address will not be published. Required fields are marked *

You May Also Like

ತನ್ನ ದಾಖಲೆ ತಾನೇ ಮುರಿದು ಆತಂಕ ಸೃಷ್ಟಿಸುತ್ತಿರುವ ಮಹಾಮಾರಿ

ಬೆಂಗಳೂರು : ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ದಾಖಲೆಯನ್ನೇ ಮುರಿದು ಸಾಗುತ್ತಿದೆ. ನಿನ್ನೆ ಒಂದೇ…

ವಿಶ್ವ ಜಾನಪದ ದಿನ ಆಚರಣೆ: ಜಾನಪದ ಸಂರಕ್ಷಣೆ ಹಾಗೂ ಸಂವರ್ಧನೆ ಅಗತ್ಯ.

ಬೀದರ: ಜಾನಪದ ಜನ ಕೇಂದ್ರಿತ ಮೌಲ್ಯಗಳ ನಿದಿಯಾಗಿದ್ದು ಇದನ್ನು ಬಗೆದಷ್ಟು ದೇಶಿಯತೆ ಅನಾವರಣಗೊಳ್ಳುವುದು ಎಂದು ಕರ್ನಾಟಕ…

ರಾಜ್ಯದಲ್ಲಿಂದು 442 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 442 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 10,560 ಕ್ಕೆ ಏರಿಕೆಯಾದಂತಾಗಿದೆ.

ದೇಶದ ಪ್ರಗತಿಗೆ ವಿಪಕ್ಷಗಳು ಅಡ್ಡಗಾಲು ಹಾಕುತ್ತಿವೆ – ಮೋದಿ!

ಭಗಲ್ ಪುರ : ರಾಷ್ಟ್ರದ ಹಿತಾಸಕ್ತಿ ಮನದಲ್ಲಿಟ್ಟು ಎನ್ ಡಿಎ ಕೆಲಸ ಮಾಡುತ್ತಿದ್ದರೆ ವಿಪಕ್ಷಗಳು ವಿರೋಧಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.