ಮಹಾಯೋಗಿ ವೇಮನ ಜಯಂತಿ ಆಚರಣೆ

ಮುಳಗುಂದ : ಪಟ್ಟಣದಲ್ಲಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೇವಾ ಸಂಘದ ವತಿಯಿಂದ ಬುಧವಾರ ಮಹಾಯೋಗಿ ವೇಮನರ 610 ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸರಳವಾಗಿ ಜಯಂತಿ ಆಚರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಡಿ.ಬಟ್ಟೂರ ಮಾತನಾಡಿ, ಮಹಾಯೋಗಿ ವೇಮನರು ತಮ್ಮ ತ್ಯಾಗಜೀವನದ ಮೂಲಕ ಮನುಕುಲ ಉದ್ದಾರಕ್ಕೆ ಹಲವು ಸಂದೇಶಗಳನ್ನ ನೀಡಿದ್ದಾರೆ. ಅವರ ತತ್ವ ಆದರ್ಶಗಳನ್ನ ನಾವು ಪಾಲಿಸಬೇಕು ಎಂದರು.

ಮಹಾಯೋಗಿ ವೇಮನ ಜಯಂತಿ ಆಚರಣೆ

ಈ ಸಂದರ್ಭದಲ್ಲಿ ಕಾಶೀನಾಥ ಮರಿದೆವರಮಠ, ಮುಖಂಡರಾದ ವಿಜಯ ನೀಲಗುಂದ, ರಾಮಣ್ಣ ಕಮಾಜಿ, ಬಸವರಾಜ ಸುಂಕಾಪೂರ, ಅಶೋಕ ಹುಣಸಿಮರದ, ಅಶೋಕ ಸೋನಗೋಜಿ, ಬಸವರಾಜ ವಾಲಿ, ಎಸ್.ಸಿ.ಬಡ್ನಿ, ಶಿವಪ್ಪ ಕೋಳಿವಾಡ, ಕಭೇರಪ್ಪ ಬಂಗಾರಿ, ಡಾ.ಸಂಜೀವ ಮಲ್ಲರಡ್ಡಿ, ಸಂಜೀವ ಹಳ್ಯಾಳ ಹಾಗೂ ಚಿಂಚಲಿ, ನೀಲಗುಂದ, ಯಳವತ್ತಿ, ಕಲ್ಲೂರ ಗ್ರಾಮಗಳ ರಡ್ಡಿ ಸಮುದಾಯದ ಪ್ರಮುಖರು ಭಾಗವಹಿಸಿದ್ದರು.

Exit mobile version