ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲಿಸಿ

ಗದಗ:ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಹಾಗೂ ಸೋಂಕಿತ ಚಿಕಿತ್ಸೆ ನೀಡುವಲ್ಲಿ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನ ಅನುಷ್ಟಾನಗೊಳಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗುವAತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು ಅವರು ಸೂಚನೆ ನೀಡಿದರು.
        ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಜರುಗಿದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾದಿಕಾರಿಗಳು ಮಾತನಾಡಿದರು. ಸರ್ಕಾರಿ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸೋಂಕು ನಿಯಂತ್ರಣ ಕ್ರಮಗಳನ್ನು  ಪಾಲಿಸುವಂತೆ ನೋಡಿಕೊಳ್ಳಬೇಕು. ಸರ್ಕಾರಿಕಚೇರಿಗಳಿಗೆ ಸಾರ್ವಜನಿಕರು ಹೆಚ್ಚಾಗಿ ಆಗಮಿಸುವುದರಿಂದ ಕಚೇರಿಗಳನ್ನು ನಿಯಮಿತವಾಗಿ ಸ್ಯಾನಿಟೈಜೇಶನ್ ಮಾಡಿಸಬೇಕು.  ನೌಕರರೆಲ್ಲರೂ ಮಾಸ್ಕ್ ಧರಿಸಿ ವ್ಯವಹರಿಸುವ ಮೂಲಕ ಸೋಂಕಿನಿAದ  ರಕ್ಷಿಸಿಕೊಳ್ಳಬೇಕೆಂದು ಹೇಳಿದರು.    
      ಓಮಿಕ್ರಾನ್ ಸೋಂಕು ಶೀಘ್ರ ಹರಡುವಿಕೆ ಸ್ವರೂಪ ಹೊಂದಿದ್ದು ಜಿಲ್ಲೆಗೆ ಹೊರಗಿನಿಂದ ಆಗಮಿಸುವವರ ಮೇಲೆ ನಿಗಾವಹಿಸಬೇಕು. ಹೋಮ್ ಐಸೋಲೇಷನ್ ಇರುವಂತೆ ಗ್ರಾಮೀಣ  ಪ್ರದೇಶದಲ್ಲಿ ಡಂಗುರ ಸಾರಬೇಕು.  ನಗರ ಪ್ರದೇಶದಲ್ಲಿ ಕಸ ಎತ್ತುವ ಗಾಡಿಗಳಲ್ಲಿರುವ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರು ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಹೇಳಬೇಕೆಂದರು.
      ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರತಿ ದಿನ ತಮ್ಮ ವ್ಯಾಪ್ತಿಯ ಒಂದು ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ವಹಿಸಲಾದ ಕ್ರಮಗಳ ಕುರಿತು ಪರಿಶೀಲನೆ ಸಭೆ ನಡೆಸಬೇಕು ಹಾಗೂ ಅಗತ್ಯದ ನಿಯಂತ್ರಣ ಕ್ರಮಗಳ ಬಗ್ಗೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಷ್ಟಾನಗೊಳಿಸಲು ತಿಳಿಸಬೇಕು. ಸಭೆ ನಡೆಸಿದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಹೇಳಿದರು.   ಅದೇ ರೀತಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ವಾರ್ಡವಾರು ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಲು ತಿಳಿಸಿದರು.  
      ತಹಶೀಲ್ದಾರರು ಪ್ರತಿ ವಾರ ಟಾಸ್ಕ್ಫೋರ್ಸ ಸಮಿತಿ ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು. ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಿ ತಮ್ಮ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಣಕ್ಕೆ ಆದ್ಯತೆ ವಹಿಸುವಂತೆ ಹೇಳಿದರು.  ತಾಲೂಕುಗಳಲ್ಲಿ  ಅಗತ್ಯವಿದ್ದಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯುವ ಬಗ್ಗೆ ಸ್ಥಳ ಗುರುತಿಸಿಟ್ಟುಕೊಳ್ಳಬೇಕು. ಸಾಧ್ಯವಾದಷ್ಟು ವಿಸ್ತಾರವಾದ ಕಟ್ಟಡಗಳನ್ನು ಆಯ್ಕೆ ಮಾಡುವ ಮೂಲಕ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದರು.


        ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮೊದಲು ತಾಲೂಕಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಸವಿಸ್ತಾರವಾಗಿ  ಕೋವಿಡ್ ನಿಯಂತ್ರಣ ಹಾಗೂ ಲಸಿಕಾಕರಣ  ಪ್ರಗತಿ ಬಗ್ಗೆ ಮತ್ತು  ಆಸ್ಪತ್ರೆಗಳ ಮೂಲ ಸೌಕರ್ಯಗಳ ಬಗ್ಗೆ ಸಭೆ ನಡೆಸಿ ವರದಿ ನೀಡುವಂತೆ ಸೂಚಿಸಿದರು ಹಾಗೂ ಈಗಾಗಲೇ ಚಿಕಿತ್ಸೆಗೆ  ಒದಗಿಸಲಾದ ಉಪಕರಣಗಳ ಕಾರ್ಯಕ್ಷಮತೆ ಬಗ್ಗೆ ನಿಗಾ ವಹಿಸುವಂತೆ ತಿಳಿಸಿದರು.


    ಲಸಿಕಾಕರಣ: ಜಿಲ್ಲೆಯಲ್ಲಿ ಪ್ರಸ್ತುತ  ಕೋವಿಶೀಲ್ಡ್  ಹಾಗೂ ಕೋವ್ಯಾಕ್ಸಿನ್ ಸೆರಿದಂತೆ ಒಟ್ಟು 45,000 ಕೋವಿಡ್ ಲಸಿಕೆ ಲಭ್ಯವಿದೆ .  ಲಸಿಕಾಕರಣವನ್ನು ಶೀಘ್ರಗೊಳಿಸಿ ಅರ್ಹ ಎಲ್ಲರಿಗೂ  2 ನೇ ಡೋಸ್ ಲಸಿಕೆ ನೀಡಬೇಕು.  ಜೊತೆಗೆ 15 ರಿಂದ 18 ವಯೋಮಾನದ ಮಕ್ಕಳಿಗೆ ಲಸಿಕಾಕರಣ ಆರಂಭಿಸಲಾಗಿದ್ದು ಶೀಘ್ರ ಪೂರ್ಣಗೊಳಿಸಬೇಕು.  ಈ ಬಗ್ಗೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ ಮತ್ತು  ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದರು.


        ಜನೆವರಿ 10 ರಿಂದ ಜಿಲ್ಲೆಯ ಮುಂಚೂಣಿ ಆರೋಗ್ಯ ಕಾರ್ಯಕರ್ತರು,  ನೌಕರರು , 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥರಿಗೆ  3 ನೇ ಡೋಸ್ ( ಬೂಸ್ಟರ್ ಡೋಸ್ ) ಲಸಿಕೆ ನೀಡಲಾಗುತ್ತಿದೆ.  ಅರ್ಹರೆಲ್ಲರೂ ಲಸಿಕೆ ಪಡೆಯಲು ಇಲಾಖಾ ಮುಖ್ಯಸ್ಥರು ಕ್ರಮ ವಹಿಸಭೇಕು.  ಆರೋಗ್ಯ ಇಲಾಖೆ , ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ,  ಆಶಾ , ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕಂದಾಯ , ಪೊಲೀಸ್ ಇಲಾಖೆ ನೌಕರರು  3 ನೇ ಡೋಸ್ ಲಸಿಕೆ ಪಡೆಯಬೇಕು.  
         ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ ಜಿಲ್ಲೆಯಲ್ಲಿ  ಕೈಗೊಳ್ಳಲಾಗುತ್ತಿರುವ ಸೋಂಕು ತಪಾಸಣಾ ಪರೀಕ್ಷೆಗಳನ್ನು ಅಧಿಕಗೊಳಿಸಬೇಕು. ಸೋಂಕು ಲಕ್ಷಣಗಳಿರುವವರನ್ನು ಗುರುತಿಸಿ ಸೋಂಕು ತಪಾಸಣೆ ಕೈಗೊಳ್ಳಲು ಹೆಚ್ಚುವರಿ ತಂಡಗಳನ್ನು ರಚಿಸಿ ಕಾರ್ಯಾಚರಣೆ ಮಾಡಬೇಕು. ಲಸಿಕಾಕರಣ ಕಾರ್ಯದಲ್ಲಿ ತಾಲೂಕುಗಳಿಗೆ ಹಂಚಿಕೆ ಮಾಡುವ ಲಸಿಕೆಗಳನ್ನು ಸರಿಯಾಗಿ ನಿರ್ವಹಿಸಿ ಸರಿದೂಗಿಸಬೇಕು.  ಸೋಂಕು ನಿಯಂತ್ರಣ ಕಾರ್ಯದಲ್ಲಿ ತಾ.ಪಂ. ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
       ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ ಮಾತನಾಡಿ ಸರ್ಕಾರದ ಸೂಚನೆಯಂತೆ ಕಾಂಟ್ಯಾಕ್ಟ್   ಟ್ರೇಸಿಂಗ್, ಕ್ವಾರಂಟೈನ್ ವಾಚ್ ಕಾರ್ಯನಿರ್ವಹಿಸಲು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ  ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಈ ಅಧಿಕಾರಿಗಳು ಸೋಂಕಿತರ ಸಂಪರ್ಕಿತರನ್ನು ಗುರುತಿಸುವ ಹಾಗೂ ಸೋಂಕಿತರ ಚಲನವಲನ ಪತ್ತೆ ಕಾರ್ಯ  ನಿರ್ವಹಿಸಲಿದ್ದಾರೆ ಎಂದರು.      
           ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ,  ಆರ್.ಸಿ.ಎಸ್. ಅಧಿಕಾರಿ ಡಾ. ಬಿ.ಎಂ.ಗೊಜನೂರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ್ ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ ಸೇರಿದಂತೆ ಆಯಾ ತಾಲೂಕುಗಳ ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು,ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಜರಿದ್ದರು. 

Exit mobile version