ಅಳಲು ತೊಡಿಕೊಂಡ 9ನೇ ವಾರ್ಡಿನ ನಿವಾಸಿ:ಕುಸಿದ ಬಿದ್ದ ಮನೆಗೆ ತಪ್ಪಿದ ಪರಿಹಾರ

ವರದಿ: ವಿಠಲ ಕೆಳೂತ್
ಮಸ್ಕಿ
: ಮಳೆಗೆ ಮನೆ ಕಳೆದುಕೊಂಡ ಅರ್ಹ ಪಲಾನುಭವಿಗಳಿಗೆ ಕೊಟ್ಯಾಂತರ ರೂಪಾಯಿ ಪರಿಹಾರ ನೀಡಿದೆ. ಆದರೆ ಪಟ್ಟಣದ ನಾನಾ ಬಡಾವಣೆಯಲ್ಲಿ ಕುಸಿದು ಬಿದ್ದಿರುವ ಪಲಾನುಭವಿಗಳ ಖಾತೆಗೆ ಇನ್ನೂ ಪರಿಹಾರ ಬಂದಿಲ್ಲ ಎಂದು ಕೆಲ ವಾರ್ಡಿನ ಜನ ಅಳಲು ತೊಡಿಕೊಂಡಿದ್ದಾರೆ.
ಪಟ್ಟಣದ ಕಳೆದ ನಾಲ್ಕೈದು ತಿಂಗಳು ಹಿಂದೆ ಸುರಿದ ಮಳೆಗೆ ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ.‌ಮನೆ ಬಿದ್ದಿದನ್ನು ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮನೆಗೆ ಸಂಬಂಧಪಟ್ಟ ದಾಖಲೆಗಳನ್ನು ಪುರಸಭೆಗೆ ಸಲ್ಲಿಸಲಾಗಿದೆ. ಆದರೆ 9ನೇ ವಾರ್ಡಿನ ಮಲ್ಲಮ್ಮ ಕಾಸ್ಲಿ ಅವರ ಕುಸಿದ ಬಿದ್ದ ಮನೆಗೆ ಇನ್ನೂ ಪರಿಹಾರ ಬಂದಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.


ಈ ಕುರಿತು ಪುರಸಭೆ ಸಿಬ್ಬಂದಿಗಳಿಗೆ ವಿಚಾರಿಸಿದರೆ ಕಂದಾಯ ಇಲಾಖೆಯವರು ಸರ್ಕಾರಕ್ಕೆ ಸಲ್ಲಿಸಬೇಕೆಂದು ಹೇಳುತ್ತಾರೆ. ತಹಶೀಲ್ದಾರ ಸಿಬ್ಬಂದಿಗಳಿಗೆ ವಿಚಾರಿಸಿದರೆ ಇದು ಸ್ಥಳೀಯ ಪುರಸಭೆಗೆ ಮಾಹಿತಿ ನೀಡಬೇಕೆಂದು ಹಾರಿಕೆ ಉತ್ತರ ನೀಡುತ್ತಾರೆ.
ಸರ್ಕಾರ ಈಚೆಗೆ ತಾಲೂಕಿನಲ್ಲಿ ವಿವಿದೆಡೆ ಮಳೆಗೆ ಮನೆ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ 43.81ಲಕ್ಷ ರೂಪಾಯಿ ಆರ್ ಟಿ ಜಿ ಎಸ್ ಮೂಲಕ ಪಾವತಿ ಮಾಡಿದೆ.


ಪಟ್ಟಣದ ಕೆಲ ವಾರ್ಡಿನಲ್ಲಿ ಕುಸಿದು ಬಿದ್ದಿರುವ ಮನೆಗಳಿಗೆ ಇನ್ನೂ ಪರಿಹಾರ ಬಂದಿಲ್ಲ ಎಂದರೆ ಇದಕ್ಕೆ‌ಯಾರು ಹೊಣೆ ಎಂಬುದು ಜನರ ಪ್ರಶ್ನೆಯಾಗಿದೆ.
ಈ ಕುರಿತು ಮೇಲಾಧಿಕಾರಿಗಳು ಪರಿಶೀಲಿಸಿ ಕುಸಿದು ಬಿದ್ದಿರುವ ಮನೆ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.


ಕಳೆದು ವರ್ಷ ಮಳೆಗೆ ಕುಸಿದು ಬಿದ್ದಿರುವ ಮನೆಗಳಿಗೆ ಪರಿಹಾರ ಬಂದಿಲ್ಲ, ಈ ವರ್ಷ ದಲ್ಲಿ ಕುಸಿದು ಬಿದ್ದಿರುವ ಸಂತ್ರಸ್ತ ಪ್ರತಿ ಕುಟುಂಬಕ್ಕೆ ಪರಿಹಾರ ಪಾವತಿಯಾಗಿದೆ.
ಕವಿತಾ ಕೆ.ಆರ್. ತಹಶೀಲ್ದಾರ ಮಸ್ಕಿ


ಜೂನ್ ತಿಂಗಳಗಳಲ್ಲಿ ಸುರಿದ ಮಳೆಗೆ ಅರ್ಧ ಗೊಡೆ ಕುಸಿದು ಬಿದ್ದಾಗ ಪುರಸಭೆ ಅರ್ಜಿ ಸಲ್ಲಿಸಲಾಗಿದೆ.‌ ನವೆಂಬರ್ ನಲ್ಲಿ ಸುರಿದ ಮಳೆಗೆ ಮನೆ ಛಾವಣಿ ಪೂರ್ಣ ಬಿತ್ತು ಈ ಕುರಿತು ಪುರಸಭೆ ಮಾಹಿತಿ ನೀಡಲಾಗಿದೆ. ಇನ್ನೂವರೆಗೆ ಮನೆಗೆ ಪರಿಹಾರ ಬಂದಿಲ್ಲ.
ವೆಂಕಟೇಶ ಕಾಸ್ಲಿ.‌ಮಸ್ಕಿ ನಿವಾಸಿ

Exit mobile version