ಉತ್ತರ ಪ್ರಭ ಸುದ್ದಿ
ರೋಣ :
ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ರೋಣ ತಾಲೂಕಾ ಭಾರತೀಯ ಕಿಶಾನ್ ಸಂಘದವತಿಯಿಂದ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ರಿಗೆ ಮನವಿ ಸಲ್ಲಿಸಿದರು.
ರೈತರ ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ನೀಡದೇ ಅನ್ನದಾತರನ್ನು ಸಾಲಗಾರನ್ನಾಗಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿವೆ ಈಗಿನ ಸರ್ಕಾರಗಳು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಎಷ್ಟೋ ಕಂಪನಿಗಳು ತಾವು ತಯಾರಿಸಿದ ಉತ್ಪನ್ನಗಳಿಗೆ ತಾವೇ ದರ ನಿಗಧಿ ಮಾಡಿಕೊಳ್ಳುತ್ತವೆ ಅವುಗಳಂತೆ ನಮ್ಮ ಕೃಷಿ ಉತ್ಪನ್ನಗಳಿಗೆ ಬೆಳೆದ ರೈತರೇ ಬೆಲೆ ನಿಗದಿಮಾಡುವಂತಹ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಮನವಿ ಮಾಡಿದರು.
ಇಲ್ಲವಾದರೆ ಸರ್ಕಾರ ರೈತರ ಖರ್ಚು ವೆಚ್ಚ ಪರಿಶೀಲನೆ ಮಾಡಿ ದುಡಿಮೆಗೆ ತಕ್ಕ ಒಂದು ಒಳ್ಳೆಯ ಲಾಭದಾಯಕ ಬೆಲೆ ಘೋಷಣೆ ಮಾಡಬೇಕು, ಸರ್ಕಾರ ಘೋಷಣೆ ಮಾಡಿದ ಬೆಲೆಗಿಂತ ಕಡಿಮೆ ಬೆಲೆಗೆ ಕಡಿಮೆ ಕೊಂಡುಕೊಳ್ಳದಂತೆ ನಿಯಮ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖ ಮಾಡಿ ಆಗ್ರಹ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿ ಜಿ ಪಾಟೀಲ ಅಧ್ಯಕ್ಷರು ಭಾರತೀಯ ಕಿಶಾನ್ ಸಂಘ ರೋಣ ತಾಲೂಕ, ಬಿ ಎ ಅವಾರಿ, ಎಂ ಎಸ್ ಉದ್ದುರೂ, ಎಸ್ ಕೆ ಕಾಜಗಾರ್, ವಿ ಎಂ ಪಾಟೀಲ, ಎಂ ಸಿ ಅವಾರಿ.

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 18ಕ್ಕೇ ಏರಿಕೆ!

ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ದೃಢವಾಗಿದೆ. ಪಿ-1307 ಕೇಸ್ ಪತ್ತೆಯಾಗಿದ್ದು 49 ವರ್ಷದ ಮಹಿಳೆ ಮುಂಬೈನಿಂದ ಇತ್ತಿಚೆಗಷ್ಟೆ ಬಂದಿದ್ದಳು ಎನ್ನಲಾಗಿದ್ದು

ಖಾಸಗಿ ಅನುದಾನ ರಹಿತ ಶಾಲೆಗಳ ಶುಲ್ಕ ಹೆಚ್ಚಳ ಬೇಡ: ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶಾಲಾ ಶುಲ್ಕಗಳನ್ನು ಪರಿಷ್ಕರಿಸದಂತೆ ರಾಜ್ಯ ಸರ್ಕಾರ…

ಶಿವಾಜಿ ಮಹಾರಾಜರ ಜಯಂತಿ ಆಚರಿಸಲು ಷರತ್ತು ಬದ್ದ ಅನುಮತಿ

ಉತ್ತರಪ್ರಭ ಗದಗ:ದಿನಾಂಕ: 19.02.2022 ರಂದು ಶಿವಾಜಿ ಮಹಾರಾಜರ ಜಯಂತಿಯನ್ನು ಮುನ್ಸಿಪಲ್ ಹೈ-ಸ್ಕೂಲ್ ಮೈದಾನದಲ್ಲಿ ಆಚರಿಸಲು ಷರತ್ತು…