ದೇಶ ಸೇವೆಗೆ ಮುಂದಾದ ಯುವ ಪಡೆಗೆ ತರಬೇತಿ ಅತ್ಯಾವಶ್ಯ :ಜಿ ಎಸ್ ಪಾಟೀಲ


ಉತ್ತರ ಪ್ರಭ ಸುದ್ದಿ
ರೋಣ : ತಾಲೂಕಿನ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಪುರ ಸಭೆ ಉಪಾಧ್ಯಕ್ಷ ಮಿಥುನ್ ಜಿ ಪಾಟೀಲ ಹುಟ್ಟುಹಬ್ಬದ ನಿಮಿತ್ಯ ಹಮ್ಮಿಕೊಂಡಿರುವ ಐದು ದಿನದ ಸೈನಿಕ ತರಬೇತಿಗೆ ಚಾಲನೆ ನೀಡಲಾಯಿತು.
ಸೈನಿಕ ತರಬೇತಿಗಾಗಿ ಬಂದಂತಹ ಅಭ್ಯರ್ಥಿಗಳಿಗೆ ಓಟದ ಸ್ಪರ್ಧೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮಾಜಿ ಶಾಸಕರು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಆದ ಜಿ ಎಸ್ ಪಾಟೀಲರು ದೇಶದ ಸೇವೆಗಾಗಿ ಮುಂದಾದ ಯುವಕರ ದಂಡು ಕಂಡು ತುಂಬಾ ಹರ್ಷವಾಯಿತು.


ಪುತ್ರ ಮಿಥುನ್ ಜಿ ಪಾಟೀಲನ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಬಳಗದವರು ಹಮ್ಮಿಕೊಂಡಿರುವ ಯೋಗ ಶಿಬಿರ, ಸೈನಿಕ ತರಬೇತಿ ಶಿಬಿರ ಹಾಗೂ ರಕ್ತ ದಾನ ಶಿಬಿರಗಳು ಎಲ್ಲವು ಜನರಿಗೆ ಒಳ್ಳೆಯ ಉದ್ಯೋಗದೊಂದಿಗೆ ಆರೋಗ್ಯದ ಹಿತದೃಷ್ಟಿ ಇಟ್ಟುಕೊಂಡು ಆಯೋಜಿಸಿದ ಇಂತಹ ಒಳ್ಳೆಯ ವಿಚಾರಕ್ಕೆ ನಾವು ಹೆಮ್ಮೆ ಪಡಬೇಕಾದದ್ದೇ ಅನೇಕ ಹುಟ್ಟುಹಬ್ಬದ ನಿಮಿತ್ಯ ಹಲವಾರು ಪಾರ್ಟಿ ಮಾಡಿ ವೆಚ್ಚ ಮಾಡಿ ಕಾಲಹರಣ ಮಾಡುವ ಬದಲು ಇಂತಹ ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಮುಂದಾಗಬೇಕು ಎಂದರು.
ಇಲ್ಲಿ ಸೇರಿರುವ ಎಲ್ಲಾ ಯುವಕರು ದೃಢ ಸಂಕಲ್ಪ ಮಾಡಿ ಭಾರತ ಮಾತೆಯ ಸೇವೆಗೆ ನಾವು ಸದಾ ಮುಂದೆ ಇರುತ್ತೇವೆ ಎಂದು ಅಂದಾಗ ಮಾತ್ರ ನೀಡಿ ಸೈನ್ಯ ಸೇರಲು ಎಲ್ಲಾ ರೀತಿಯ ಅರ್ಹತೆ ಹೊಂದುತ್ತೀರಿ ಎಂದರು.


ಈ ಕಾರ್ಯಕ್ರಮದ ಸಾನಿಧ್ಯ ಶ್ರೀ ಮನ್ ನಿರಂಜನ ಪ್ರಣವ ಸ್ವರೊಪಿ ಗುರುಪಾದ ದೇವರು ಗುಲಗಂಜಿಮಠ ರೋಣ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಆರ್ ಎಸ್ ಪಾಟೀಲರು, ಮಿಥುನ್ ಜಿ ಪಾಟೀಲ, ಪ್ರಭು ಮೇಟಿ, ವಿ ಬಿ ಸೋಮನಕಟ್ಟಿಮಠ, ಪುರಸಭೆ ಅಧ್ಯಕ್ಷಣಿ ವಿದ್ಯಾ ಎಸ್ ದೊಡ್ಡಮನಿ, ಹುಚ್ಚಪ್ಪ ನವಲಗುಂದ, ಮಲ್ಲಯ್ಯ ಮಹಾಪುರಷಮಠ ಮಲ್ಲನಗೌಡ ರಾಯಣಗೌಡರ,ಯಲ್ಲಪ್ಪ ಕಿರೇಸೂರ, ಅಸ್ಲಾಂ ಕೊಪ್ಪಳ, ಸಂಗು ನವಲಗುಂದ ಇನ್ನೂ ಅನೇಕ ಮಿಥುನ್ ಜಿ ಪಾಟೀಲರ ಅಭಿಮಾನಿಬಳಗ ಸದಸ್ಯರು, ತರಬೇತಿದಾರರು ಇನ್ನಿತರರು ಉಪಸ್ಥಿತರಿದ್ದರು.

Exit mobile version