ಉತ್ತರ ಪ್ರಭ ಸುದ್ದಿ
ರೋಣ : ತಾಲೂಕಿನ ಜಿಗಳೂರ ಗ್ರಾಮದಲ್ಲಿ ಸುಮಾರು 20 ಲಕ್ಷ ವೆಚ್ಚದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ರೋಣ ಶಾಸಕ ಕೆ ಜಿ ಬಂಡಿಯವರು ಭೂಮಿ ಪೂಜೆ ಮಾಡಿದರು.
ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಜಿಗಳೂರ ಗ್ರಾಮಸ್ಥರು ಒಗ್ಗಟ್ಟಾಗಿರುವುದು ಒಳ್ಳೇದು ಆದರೆ ಚುನಾವಣೆ ಬಹಿಸ್ಕಾರ ಹಾಕುತ್ತಿರುವುದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಅವಮಾನ ಮಾಡಿದಂತಾಗುವದು, ಮತದಾನ ಪ್ರತಿಯೊಬ್ಬರ ಹಕ್ಕು ಆ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಲೇಬೇಕು, ಅದನ್ನು ಬಿಟ್ಟು ನೀವೆಲ್ಲಾ ಸುಮ್ಮನೆ ಕುಳಿತುಕೊಂಡರೆ ಹೇಗೆ ಎಂದರು. ನಿಮ್ಮ ಗ್ರಾಮಕ್ಕೆ 20 ಲಕ್ಷ ಅನುದಾನ ಅಂಬೇಡ್ಕರ್ ಸಮುದಾಯ ಭವನವಷ್ಟೇ ಮಾಡಿದರೆ ಅಭಿವೃದ್ಧಿ ಕಾರ್ಯ ಮುಗಿಯುವದಿಲ್ಲ ಇನ್ನೂ ಸಿಕ್ಕಾಪಟ್ಟೆ ಅಭಿವೃದ್ಧಿ ಕಾಮಗಾರಿಗಳು ಆಗಬೇಕು ಎಲ್ಲದನ್ನು ಆ ಭಾಗದ ಶಾಸಕ ಮಾತ್ರ ಮಾಡುವದಕ್ಕೆ ಬರುವದಿಲ್ಲ ಗ್ರಾಮ ಪಂಚಾಯತ್ ಸದಸ್ಯರ ಪಾತ್ರ ಹೆಚ್ಚಿನದು ಆದ್ದರಿಂದ ತಾವೆಲ್ಲರೂ ಸೇರಿ ಮುಂದಿನ ದಿನಮಾನಗಳಲ್ಲಿ ಎಲ್ಲರೂ ಸೇರಿ ಚುನಾವಣೆಗೆ ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಿ ನಿಮ್ಮ ಗ್ರಾಮದ ಅಭಿವೃದ್ಧಿಗೆ ಮುಂದಾಗಿರಿ ಎಂದು ಬುದ್ದಿವಾದ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಾಬುಗೌಡ ಪಾಟೀಲ. ನೆರೆ ಗ್ರಾಮದ ಮಲ್ಲು ಮಾದರ,y ದುರ್ಗಪ್ಪ,ಬಸವರಾಜ, ಪರಸು ಮಾದರ ಇನ್ನೂ ಅನೇಕರು ಉಪಸ್ಥಿತರಿದ್ದರು..
ಮತದಾನ ಬಹಿಸ್ಕಾರ ಮಾಡಿದರೆ ಸಂವಿಧಾನಕ್ಕೆ ಅವಮಾನ ಮಾಡಿದಂತೆ : ಕಳಕಪ್ಪ ಬಂಡಿ
