ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ

ಉತ್ತರಪ್ರಭ

ಗದಗ: ಅತಿಥಿ ಉಪನ್ಯಾಸಕರ ಖಾಯಂ ಮತ್ತು ಸೇವಾ  ಭದ್ರತೆಗಾಗಿ  ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮುಂದುವರಿಸಿದ್ದಾರೆ.  ಡಿಸೆಂಬರ್ 10 ರಿಂದ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ  ಬೆಳಗಾವಿ ಸುವರ್ಣ ಸೌಧದ ಮುಂದೆ ಧರಣಿಯನ್ನು ಮಾಡಿದ್ದರು . ಆದರೂ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸದ ಕಾರಣ  ಧರಣಿ ಮುಂದುವರೆಸಿದರು.

ಅತಿಥಿ ಉಪನ್ಯಾಸಕರ  ಧಾರವಾಡ ಜೆಡಿ ಕಾರ್ಯಾಲಯದ  ಮುಂದೆ  ಸತತವಾಗಿ 5 ದಿನಗಳ  ಧರಣಿ ನಡೆಸಿದರು ಯಾವುದೇ ಪ್ರಯೋಜನ ವಾಗಿಲ್ಲ. ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಬದುಕಿನಲ್ಲಿ ಆಟವಾಡುತ್ತಿರುವುದು ಸರಿನಾ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಧಾರವಾಡ ನಂತರ ಗದಗ ಜಿಲ್ಲಾ ಆಡಳಿತ ಭವನದ  ಮುಂದೆ ಕಳೆದ ಮಂಗಳವಾರ ದಿಂದ  ಅತಿಥಿ ಉಪನ್ಯಾಸಕರು  ತಮ್ಮ  ಖಾಯಂ ಮತ್ತು ಸೇವಾ ಭದ್ರತೆಗಾಗಿ  ಧರಣಿ ನಡೆಸುತ್ತಿದ್ದಾರೆ . ಉಪನ್ಯಾಸಕರ ಧರಣಿ 20 ದಿನಗಳ ಪೂರೈಸಿದರು ಅವರಿಗೆ ಸರ್ಕಾರದಿಂದ ಯಾವುದೇ ನ್ಯಾಯಯುತವಾದ ಪರಿಹಾರ ಮತ್ತು ಬೇಡಿಕೆಗಳ ಕುರಿತು ಸ್ಪಷ್ಟವಾದ ಸಂದೇಶ ಸಿಕ್ಕಿರುವುದಿಲ್ಲ. ಸರ್ಕಾರ ನಮ್ಮ  ನ್ಯಾಯಯುತವಾದ ಬೇಡಿಕೆಗಳನ್ನು ಕೂಡಲೇ  ಇಡೇರಿಸಬೇಕು ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆಂದು ಧರಣಿ ನಿರತರು ಸರ್ಕಾರದ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದ್ದಾರೆ.  

 ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ

ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 15000 ಅತಿಥಿ ಉಪನ್ಯಾಸಕರು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಆದರೂ ಅವರಿಗೆ ಯಾವುದೇ ರೀತಿ ಸರ್ಕಾರದಿಂದ ಸೌಲಭ್ಯ, ಸಮಾನ ವೇತನ ವಾಗಲಿ, ಸೇವಾ ಭದ್ರತೆಯ ಕುರಿತು ಯಾವುದೇ ಸ್ಪಷ್ಟವಾದ ನಿಲುವು ಸರ್ಕಾರದಿಂದ ಸಿಗದೇ ಇರುವುದು  ಸರ್ಕಾರ ಶಿಕ್ಷಕರ ಬಗ್ಗೆ ಇರುವ ಕಾಳಜಿ ಎಂತದ್ದು ಎಂದು ಅರ್ಥಮಾಡಿಕೊಳ್ಳಲು ಬಹಳ ಸಮಯ ಬೇಕಾಗಿಲ್ಲ . ಶಿಕ್ಷಕರ ದಿನಾಚರಣೆ ಮಾಡಿ ಆಶ್ವಾಸನೇ ನೀಡಿದರೇ ಸಾಲದು ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕೆಂಬುದು ಉತ್ತರಪ್ರಭದ ಕಳಕಳಿ.

ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಯ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಮಾತನಾಡಿ ಸರ್ಕಾರ  ಆದಷ್ಟು ಬೇಗನೆ ನಮ್ಮ ಹೋರಾಟಕ್ಕೆ ಸ್ಪಂದಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು. ಸರ್ಕಾರಕ್ಕೆ ಆಗ್ರಹಿಸಿದರು

ಧರಣಿಯಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಸರವಿ, ವಾಯ್ ಕೆಗುಂಡಕರ್ಜಿ, ಜಿ ವಿ  ಮೇಟಿ, ಲೀಲಾ ಹರ್ಲಾಪುರ್, ಈರಮ್ಮ ಸುಗ್ಗನಹಳ್ಳಿ,ಎನ್ ಬಿ  ಕದಂಪುರ್, ಎಸ್ ಎ  ಸಂಗನಾಳ, ಬಿ ಎಚ್ ಬಾರ್ಕೆರ್ ಮುಂತಾದವರು ಧರಣಿಯನ್ನು ಮಾಡುತ್ತಿದ್ದಾರೆ.

Exit mobile version