ಗದಗ ಬೆಟಗೇರಿ ನಗರಸಭೆ ಚುನಾವಣೆ; ಈ ಬಾರಿ ಬಿಜೆಪಿಯತ್ತ ಜನರ ಒಲವು! ಕಾಂಗ್ರೇಸ್ ತಂತ್ರಗಾರಿಕೆಯಲ್ಲಿ ಚಾಣಾಕ್ಷ್ಯ ನಡೆ: ಸಚಿವ ಸಿಸಿ ಪಾಟೀಲ್‌ಗೆ ಹೆಚ್ಚಿದ ಹೋಣೆ!

ಉತ್ತರಪ್ರಭ

ಗದಗ: ನಗರಸಭೆ ಚುನಾವಣೆಯ ದಿನಾಂಕ ಘೋಷಣೆ ಆದ ದಿನದಿಂದ ಇವತ್ತಿನವರೆಗೂ ಬಿಜೆಪಿ ಒಂದಲ್ಲಾ ಒಂದು ರೀತಿಯಿಂದ ಮತದಾರರನ್ನು ಸೆಳೆಯಲು ವಿಭಿನ್ನ ರೀತಿಯಲ್ಲಿ ಮತ ಪ್ರಚಾರ ಮಾಡುತ್ತಿದ್ದು, ಅದರಲ್ಲೂ ವಿಶೇಷವಾಗಿ ಬಿಜೆಪಿ ನಾಯಕ ಗದಗ ವಿಧಾನ ಸಭಾ ಪರಾಜಿತ ಅಭ್ಯರ್ಥಿ ಅನೀಲ ಮೆಣಸಿಕಾಯಿ ಪ್ರತಿ ವಾರ್ಡಗಳಲ್ಲಿ ಅಭ್ಯರ್ಥಿಯೊಂದಿಗೆ ತೆರಳಿ ಮತ ಬೀಕ್ಷೆಯನ್ನು ಮಾಡಿರುವುದು ಮತದಾರರಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೇಸ್ ಸೇರಿದಂತೆ ಇತರೆ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ತಡವಾಗಿ ಬಿಡುಗಡೆಗೊಳಿಸಿದ್ದು ಬಿಜೆಪಿಗೆ ವರವಾಗೋ ಸಾಧ್ಯತೇಯೇ ಹೆಚ್ಚು!. ಬಿಜೆಪಿಯ ಮುಖಂಡ ಸಾರಿಗೆ ಸಚಿವ ರಾಮುಲುರವರು 35 ವಾರ್ಡಗಳಲ್ಲಿ ಕಾಲಿಕೆ ಚಕ್ರಕಟ್ಟಿಕೊಂಡವರoತೆ ಪ್ರಚಾರ ಮಾಡಿರುವುದು ಮತ್ತು ರೋಡ್ ಶೋಗಳ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿ ಅಭಿವೃದ್ಧಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಭರವಸೆಯನ್ನು ನೀಡಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಯಾಗಬಹುದೆಂದು ಮತದಾರರ ಅಭಿಪ್ರಾಯ.

 ಇತ್ತ ಕಾಂಗ್ರೇಸ್ ಹಳೆಯ ನಾಯಕರಿಗೆ ಮತ್ತು ಅವರ ಪತ್ನಿಯರಿಗೆ ಟಕೇಟ್ ನೀಡಿದ್ದು, ಅಲ್ಲದೇ ಕೆಲವು ವಾರ್ಡಗಳಲ್ಲಿ ಯೋಗ್ಯ ಅಭ್ಯರ್ಥಿಗಳಿಗೆ ಟಿಕೇಟ ನೀಡಿಲ್ಲವೆಂದು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ, ಅಷ್ಟೇ ಅಲ್ಲದೇ ಡಿ ಆರ್ ಪಾಟೀಲರ ಪುತ್ರ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ ಪ್ರಚಾರ ಮಾಡಿತ್ತಿರುವುದು ಈ ಬಾರಿ ಕಾಂಗ್ರೇಸ್‌ಗೆ ಮತದಾರರು ಕೈ ಕೊಡುವ ಸಾಧ್ಯತೆಯೇ ಹೆಚ್ಚು ಎಂದು ಮತದಾರರ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವುದು ಭಾರಿ ಕೂತೂಹಲ ಮೂಡಿದೆ. 35 ವಾರ್ಡಗಳಲ್ಲಿ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಮನೆ ಮನೆ ತೆರಳಿ ಪ್ರಚಾರ, ಸಭೆ ಸಮಾರಂಭ ಮತ್ತು ರೋಡ್ ಶೋಗಳನ್ನು ಮಾಡಿದ್ದು ಇದೇ, ಆದರೆ ಮತದಾರ ಪ್ರಭುಗಳ ನಿರ್ಣಯವೇ ಅಂತಿಮ.

 ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಮತ್ತು ಶಾಸಕರಾದ ಶ್ರೀ ಎಚ್ ಕೆ ಪಾಟೀಲ್ ಈ ಭಾರಿ ನಗರಸಭೆಯ ಚುನಾವಣೆಯನ್ನು ಪ್ರತಿಷ್ಠೆಗೆ ತೆಗೆದುಕೊಂಡು ಶತಾಯಗತಾಯ ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂದು ಹಗಲಿರುಳು ಎನ್ನದೇ ತಮ್ಮ ಸಹೋದರಾದ ಮಾಜಿ ಶಾಸಕ ಡಿ ಆರ್ ಪಾಟೀಲ್ ಅವರ ಜೋತೆಗೂಡಿ ಎಲ್ಲಾ ವಾರ್ಡಗಳಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿದ್ದು ವಿಶೇಷ ಮತ್ತು ಪಕ್ಷೇತರ ಅಭ್ಯರ್ಥಿಗಳನ್ನು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ನೀಡಲು ಮನವಿ ಮಾಡಿ ಅದರಲ್ಲೂ ಕೆಲವು ವಾರ್ಡಗಳಲ್ಲಿ ಸಫಲರಾಗಿದ್ದಾರೆ.

 ಈ ಭಾರಿ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಯೋಗ್ಯ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿಲ್ಲ ಎಂಬ ಕಾರಣಕ್ಕೆ ಪಕ್ಷೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಪಕ್ಷೇತರರು ಯಾವ ಪಕ್ಷದ ಮತವನ್ನು ಕಸಿದುಕೊಳ್ಳುತ್ತಾರೆಂಬುದು ಜನರಲ್ಲಿ ಜಿಜ್ಞಾಸೆ ಮೂಡಿದೆ. ಅಷ್ಟೇ ಅಲ್ಲದೇ ಆಡಳಿತ ಚುಕ್ಕಾಣಿ ಹಿಡಿಯಲು ಪಕ್ಷೇತರರು ನಿರ್ಣಾಕರಾಗಬಹುದೆಂಬುದು ರಾಜಕೀಯ ತಜ್ಞರ ಅಭಿಪ್ರಾಯ.

 ಬಿಜೆಪಿಯ ಹಿರಿಯ ನಾಯಕ, ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಸಿ ಪಾಟೀಲ್ ಅವರು ನಗರ ಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿ ಹೈ ಕಮಾಂಡ್ ಆಜ್ಞೆಮಾಡಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಅಲ್ಲಲ್ಲಿ ಮತದಾರರು ಗೂಸು ಗೂಸು ಸುದ್ದಿ ನಗರದಲ್ಲಿ ಹಬ್ಬಿದೆ. ಮೋನ್ನೇ ನಡೆದ ವಿಧಾನ ಪರೀಷತ್ ಚುನಾವಣೆ ಮತ್ತು ಹಾನಗಲ್ ವಿಧಾನ ಸಭಾ ಕ್ಷೇತ್ರದ ಸೋಲು ಬಿಜೆಪಿ ನಾಯಕರಲ್ಲಿ ಕಸಿವಿಸಿ ಉಂಟುಮಾಡಿದೆ, ಹಾಗಾಗಿ ಗದಗ – ಬೇಟಗೇರಿ ನಗರ ಸಭೆ ಬಿಜೆಪಿಗೆ ಪ್ರತಿಷ್ಠೆ ಕಣವಾಗಿದ್ದು, ಸಚಿವ ಸಿ ಸಿ ಪಾಟೀಲರು ಹೆಚ್ಚು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಅನಿವಾರ್ಯತೆ ಎದ್ದು ಕಾಣುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮತದಾರರು ತಮ್ಮ ಮತವನ್ನು ದಿನಾಂಕ: 27.12.2021ರಂದು ಯಾವ ಪಕ್ಷಕ್ಕೆ ನೀಡುತ್ತಾರೆಂಬುದನ್ನು ಕಾದುನೋಡೋಣ.

Exit mobile version