ನಗರದ ಸ್ಥಳೀಯ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಷರತ್ತುಗಳನ್ನು ವಿಧಿಸಿ ಪ್ರತಿಬಂಧಕಾಜ್ಞೆ ಜಾರಿ

ಉತ್ತರಪ್ರಭ ಸುದ್ದಿ
ಗದಗ:
ಗದಗ ಬೆಟಗೇರಿ ನಗರಸಭೆ ಚುನಾವಣೆ ಸೇರಿದಂತೆ ಸ್ಥಳೀಯ ಸಾರ್ವತ್ರಿಕ ಚುನಾವಣೆಯು ದಿನಾಂಕ:27.12.2021 ರಂದು ನಡೆಯಲಿದ್ದು, ಅದರ ಪ್ರಯುಕ್ತ ಗದಗ ಬೆಟಗೇರಿ ನಗರ ಸಭೆ ವ್ಯಾಪ್ತಿಯಲ್ಲಿ ದಿನಾಂಕ:25.12.2021 ರ ಬೆಳಿಗ್ಗೆ 07.00 ಗಂಟೆಯಿOದ ದಿನಾಂಕ:27.12.2021 ರ ಮಧ್ಯರಾತ್ರಿಯವರೆಗೆ ದಂಡ ಪ್ರಕ್ರಿಯಾ ಸಂಹಿತೆ, 1973ರ ಕಲಂ 144 ಮತ್ತು ಕರ್ನಾಟಕ ಪೋಲೀಸ್ ಕಾಯ್ದೆ, 1963 ಕಲಂ 53ರ ಅಡಿ ಕೆಲವು ಷರತ್ತುಗಳನ್ನು ವಿಧಿಸಿ ಪ್ರತಿಬಂಧಕಾಜ್ಞೆಯನ್ನು ಗದಗ ಜಿಲ್ಲಾಧಿಕಾರಿ ಎಂ ಸುಂದರೇಶ ಬಾಬು ಅವರು ಆದೇಶ ಹೊರಡಿಸಿದ್ದಾರೆ.

Exit mobile version