ಉತ್ತರಪ್ರಭ ಸುದ್ದಿ

ಮುಳಗುಂದ : ಸ್ಥಳೀಯ ಪಟ್ಟಣ ಪಂಚಾಯ್ತಿ 11ನೇ ವಾರ್ಡಿನ ಸದಸ್ಯ ಬಸವಂತಪ್ಪ ಹಾರೋಗೇರಿ ಅವರ ಎಸ್.ಸಿ ಜಾತಿ ಪ್ರಮಾಣ ಪತ್ರ ಖೋಟ್ಟಿ ಇದ್ದು ಸಂಬಂಧಿಸಿದ ಅಧಿಕಾರಿಗಳು ತನಿಖೆ ವರದಿಯನ್ನ ಇತ್ಯರ್ಥಗೊಳಿಸಿ ನಿಜವಾದ ಪರಿಶಿಷ್ಟ ಜಾತಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಎಂದು ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತ ದೊಡ್ಡಮನಿ ಆಗ್ರಹಿಸಿದರು.


ಖೋಟ್ಟಿ ಜಾತಿ ಪ್ರಮಾಣ ಪತ್ರ ರದ್ದುಪಡಿಸುವಂತೆ ಆಗ್ರಹಿಸಿ ಗುರುವಾರ ಇಲ್ಲಿನ ಪಟ್ಟಣ ಪಂಚಾಯ್ತಿ ಮುಂದೆ ಡಾ.ಬಾಬು ಜಗಜೀವನರಾಮ ವಿವಿದೋದ್ದೇಶಗಳ ಅಭಿವೃದ್ದಿ ಸಂಘ ಹಾಗೂ ವಿವಿಧ ಪರಿಶಿಷ್ಟ ಜಾತಿ ಸಂಘಟನೆಗಳ ಸದಸ್ಯರು ಆರಂಭಿಸಿದ ಅಮರಣ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಜಾತಿ ಪ್ರಮಾಣ ಪತ್ರದ ತನಿಖೆ ನಡೆಸುವಂತೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಜಿಲ್ಲಾಧಿಕಾರಿ, ಉಪವಿಭಾಗಧಿಕಾರಿ, ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಕಳೆದ ಒಂದುವರೆ ವರ್ಷದಿಂದ ತನಿಖೆ ಪೂರ್ಣಗೊಂಡಿಲ್ಲ, ಅಧಿಕಾರಿ ವರ್ಗ ವಿಳಂಬಧೋರಣೆ ಮಾಡುತ್ತಿದ್ದು ಪರಿಶಿಷ್ಟರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದರು. ನಾವು ಯಾವುದೆ ಸಮುದಾಯ, ವ್ಯಕ್ತಿಯ ವಿರುದ್ದ ಹೋರಾಟ ಮಾಡುತ್ತಿಲ್ಲ, ಪರಿಶಿಷ್ಟರಿಗೆ ನ್ಯಾಯುತವಾಗಿ ಸಿಗಬೇಕಾದ ಹಕ್ಕಿಗಾಗಿ ಸತ್ಯಾಗ್ರಮ ಮಾಡುತ್ತಿದ್ದು ನ್ಯಾಯ ಸಿಗುವವರಗೂ ಮುಂದು ವರೆಯಲಿದೆ. ಎಂದು ಹೇಳಿದರು.
ಅರ್ಜಿದಾರ ಮರಿಯಪ್ಪ ನಡುಗೇರಿ ಮಾತನಾಡಿ, 2018ರ ಪಟ್ಟಣ ಪಂಚಾಯ್ತಿ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್‍ಸಿಗೆ ಮೀಸಲಿದ್ದ 11ನೇ ವಾರ್ಡಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸವಂತಪ್ಪ ಹಾರೋಗೇರಿ ಅವರು ಸಲ್ಲಿಸಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸುಳ್ಳಾಗಿದೆ. ಈ ಕುರಿತು ಜುಲೈ 31, 2020 ರಲ್ಲಿ ತನಿಖೆಗೆ ಒಳಪಡಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೆವು ಆದರೆ ಇನ್ನೂ ವರೆಗೂ ತನಿಖೆ ಪೂರ್ಣಗೊಂಡಿಲ್ಲ. ಎಂದು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಕ್ಕಾಗಿ ಸತ್ಯಗ್ರಹ ನಡೆಸುತ್ತಿದ್ದೇವೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ನಮಗೆ ನ್ಯಾಯ ಒದಗಿಸಬೇಕು, ಅಲ್ಲಯವರಿಗೂ ಸತ್ಯಗ್ರಹ ನಡೆಸುತ್ತೇವೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಭಾಶ್ ಜಾಲಣ್ಣವರ, ಪ್ರಕಾಶ ಗಡದವರ, ದೇವಪ್ಪ ನಡುಗೇರಿ, ಪರಸುರಾಮ ನಡುಗೇರಿ, ಗಾಳೆಪ್ಪ ನಡುಗೇರಿ, ಉಡಚಪ್ಪ ಪೂಜಾರ, ಸಂತೋಷ ಜಾಲಣ್ಣವರ, ಮಹಾಂತೇಶ ದೊಡ್ಡಮನಿ, ಬಸವರಾಜ ನಡುಗೇರಿ, ಬಸವಣ್ಣೆಪ್ಪ ನಡುಗೇರಿ, ಮಂಜು ಗಡದವರು, ಶರಣಪ್ಪ ಕಾಳೆ, ಕನಕಪ್ಪ ಹಲಗಿಕೆಂಚಣ್ಣವರ, ಫಕ್ಕಿರೇಶ ಚಾಕಲಬ್ಬಿ ಮೊದಲಾದವರು ಇದ್ದರು. ಡಾ.ಬಿ,ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಸಿ, ಕ್ರಾಂತಿ ಗೀತೆ ಹಾಡುವ ಮೂಲಕ ಸತ್ಯಗ್ರಹ ಆರಂಭಿಸಿದರು.

ಮುಳಗುಂದ ಪ.ಪಂ ಸದಸ್ಯನ ಖೋಟಿ ಜಾತಿ ಪ್ರಮಾಣ ಪತ್ರ ರದ್ದುಪಡಿಸುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಸಂಘಟನೆಗಳು ಅಮರಣ ಸತ್ಯಾಗ್ರಹ ನಡೆಸಿದರು.

Leave a Reply

Your email address will not be published. Required fields are marked *

You May Also Like

ಎಚ್.ಎಸ್.ವೆಂಕಟಾಪೂರದ ನೀರಿನ ಬವಣೆ ನೀಗುವುದು ಯಾವಾಗ..?

ಅದು ಆ ತಾಲೂಕಿನ ಕಟ್ಟಕಡೆಯ ಗ್ರಾಮ. ಆ ತಾಲೂಕಿನಲ್ಲಿ ಆ ಗ್ರಾಮ ಇದ್ರೂ ವಿಧಾನ ಸಭಾ ಕ್ಷೇತ್ರ ಮಾತ್ರ ಬೇರೆಯದೆ. ಎಲ್ಲಿಯ ತಾಲೂಕು, ಎಲ್ಲಿಯ ವಿಧಾನಸಭಾ ಕ್ಷೇತ್ರ, ಎಲ್ಲಿಯ ಆ ಗ್ರಾಮ ಎನ್ನುವಂತಾಗಿದೆ.

ಬ್ಲಾಕ್ ಫಂಗಸ್ ಯಾರಲ್ಲಿ ಕಂಡು ಬರುತ್ತದೆ? ಡಾ. ಚಂದ್ರಶೇಖರ್ ಬಳ್ಳಾರಿ ನೀಡಿದ ಮಾಹಿತಿ

ಜಗತ್ತನ್ನೇ ತಲ್ಲೇನಿಸಿ ಲಕ್ಷಾಂತರ ಜನರ ಪ್ರಾಣವನ್ನೇ ಕಸಿದುಕೊಂಡ ಮಹಾಮಾರಿ ಕೊರೊನ ಇದೀಗ ಮತ್ತೊಂದು ಗಂಡಾತರ ತಂದಿದೆ. ಅದುವೇ ‘ಕಪ್ಪು ಫಂಗಸ್’ ಇಂಗ್ಲಿಷ್ ನಲ್ಲಿ ಇದಕ್ಕೆ ” MUCORMYCOSIS ” ಅಂತ ಕರಿಯುತ್ತಾರೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಕಂಡುಹಿಡಿದು ಗುಣಪಡಿಸದಿದ್ದರೆ, ರೋಗಿಗಳ ಪ್ರಾಣಕ್ಕೆ ಹಾನಿಕಾರವಾಗಬಲ್ಲದು. ಇದು ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಫಂಗಸ್’ ಒಂದು ಜೀವ – ಪರಾವಲಂಬಿ, ಪರನ್ನಜೀವಿ ಹಾಗೂ ಕೆಟ್ಟಕಳೆ. ಇದು ಹೆಚ್ಚಾಗಿ ಕೊರೊನದಿಂದ ಗುಣಮುಖವಾಗುತ್ತಿರುವ ಅಥವಾ ಗುಣಮುಖವಾಗಿರುವರಲ್ಲಿ ಕಾಣಬಹುದು.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕರವೇ ಮನವಿ

ಸ್ಥಳೀಯ ಪಪಂ ವ್ಯಾಪ್ತಿಯಲ್ಲಿ ಕೇವಲ 2 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಪಂಚಾಯ್ತಿಯ ಜನಸಂಖ್ಯೆಗನುಗುಣವಾಗಿ 4-5 ಶುದ್ದ ಕುಡಿಯುವ ನೀರಿನ ಘಟಕಗಳು ಅವಶ್ಯಕತೆ ಇದೆ. ಅವುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರವೇ ವತಿಯಿಂದ ಶುಕ್ರವಾರ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಲಕ್ಷ್ಮೇಶ್ವರ ; ರೈತರು ತಂತ್ರಜ್ಞಾನ ಬಳಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಲಿ

ಪಟ್ಟಣ ತೋಟಗಾರಿಕಾ ಇಲಾಖೆಯ ಮಹಾಂತಿನಮಠದಲ್ಲಿ ಬುದವಾರ ತೋಟಗಾರಿಕಾ ಇಲಾಖೆ ವತಿಯಿಂದ ತಾಲೂಕ ಪಂಚಾಯತಿ ಯೋಜನೆಯಡಿ ರೈತ ಮತ್ತು ರೈತ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ ಬುಧವಾರ ಜರುಗಿತು.