ಉತ್ತರಪ್ರಭ ಸುದ್ದಿ
ಗದಗ: 110/33/11 ಕೆವ್ಹಿ ರೋಣ, ವಿದ್ಯುತ್ ವಿತರಣಾ ಉಪ-ಕೇಂದ್ರದ 10 MVA ಪರಿವರ್ತಕದ ನಿರ್ವಹಣಾ ಕೆಲಸವನ್ನು ಕೈಗೊಳ್ಳುವುದರಿಂದ ದಿನಾಂಕ: 24.12.2021 ರಂದು (ಬೆಳಿಗ್ಗೆ 11 ಘಂಟೆಯಿಂದ ಸಂಜೆ 5 ಘಂಟೆಯವರೆಗೆ) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಮೇಲ್ಕಂಡ ವಿದ್ಯುತ್ ವಿತರಣಾ ಉಪ-ಕೇಂದ್ರದ 10MVA ಪರಿವರ್ತಕದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಮಾರ್ಗಗಳಾದ ಎಫ್-6 ರೋಣ ವಾಟರ್‌ಸಪ್ಲೈ, ಎಫ್-7 ಬೇವಿನಕಟ್ಟಿ, ಎಫ್-8 ಜಿಗಳೂರ, ಎಫ್-9 ಸೋಮನಕಟ್ಟಿ, ಎಫ್-10 ಕೃಷ್ಣಾಪೂರ ಮತ್ತು ಎಫ್-11 ಐ.ಬಿ.ಪಿ.ಎಸ್ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಹಾಗೂ ಸದರಿ ವಿದ್ಯುತ್ ಮಾರ್ಗಗಳಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ರೋಣ ಪಟ್ಟಣ ಹಾಗೂ ಗ್ರಾಮಗಳಾದ ಇಟಗಿ, ಸೂಡಿ, ಬೇವಿನಕಟ್ಟಿ, ಜಿಗಳೂರ, ಹೊಸಳ್ಳಿ, ಹುಲ್ಲೂರು, ಕುರಹಟ್ಟಿ, ಮುದೇನಗುಡಿ, ಸೋಮನಕಟ್ಟಿ, ಕೃಷ್ಣಾಪೂರ, ಮತ್ತು ಎಫ್-11 ಐ.ಬಿ.ಪಿ.ಎಸ್ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಮಲ್ಟಿ ವಿಲೇಜ್ ವಾಟರ್‌ಸಪ್ಲೈ ಸ್ಥಾವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.