ಉತ್ತರಪ್ರಭ ಸುದ್ದಿ
ಶಿರಹಟ್ಟಿ:
ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ಹೋಗಲು ಬಸ್ ಸರಿಯಾದ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದು, ಸಮಪರ್ಕಕ ಸಾರಿಗೆ ಕಲ್ಪಿಸುವಂತೆ‌ ಒತ್ತಾಯಿಸಿ ಸ್ಥಳೀಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಮುಂಜಾನೆ ಬಸ್ ಗಳನ್ನು ತಡೆದು ದಿಢೀರ್ ಪ್ರತಿಭಟನೆ ಕೈಗೊಂಡ ಘಟನೆ ನಡೆಯಿತು.

ಗದಗ ಮತ್ತು ಶಿರಹಟ್ಟಿಯ ಶಾಲಾ ಕಾಲೇಜುಗಳಿಗೆ ಬರಲು‌ ಮುಂಜಾನೆ ಸಮಯಕ್ಕೆ ಸರಿಯಾದ ಬಸ್ ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ಧೇವೆ. ತಾಲೂಕಿನ ಬಹುತೇಕ ಗ್ರಾಮದ ರಸ್ತೆಗಳು ದುರಸ್ಥಿ ಹಂತದಲ್ಲಿದ್ದು, ದೊಡ್ಡ ದೊಡ್ಡ ತೆಗ್ಗುಳಿಂದ ಆವೃತವಾಗಿವೆ. ಅದರಿಂದ ಸಮಯಕ್ಕೆ ಸರಿಯಾಗಿ ಬಸ್ ಗಳು ಬರುತ್ತಿಲ್ಲ. ಬಂದರೂ ಬ್ರೇಕ್ ಇಲ್ಲದೆ, ಟಾಯರ್ ಬ್ಲಾಸ್ಟ್ ನಂತಹ ಹಲವಾರು ರೋಗಗಳನ್ನು ಹೊಂದಿದ ಡಕೋಟಾ ಬಸ್ ಗಳು ಮಾರ್ಗ ಮಧ್ಯದಲ್ಲಿ ಕೆಟ್ಟುನಿಂತರೆ ನಮ್ಮ ಅಂದಿನ ಕಲಿಕೆ ಮುಕ್ತಾಯವಾದ ಹಾಗೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ‌ ಎನ್ನುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ಉತ್ತರಪ್ರಭದೊಂದಿಗೆ ತೊಡಿಕೊಂಡರು.

ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಥ್‌ ನೀಡಿದ ಪಪಂ ಸದಸ್ಯ ಮಂಜುನಾಥ ಘಂಟಿ ಮಾತನಾಡಿ, ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳು ಬಸ್ ಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಹೊಸಳ್ಳಿ, ಕಡಕೋಳ, ಬನ್ನಿಕೊಪ್ಪ, ಮಾಚೇನಹಳ್ಳಿ, ಹೊಳೆಇಟಗಿ, ತಂಗೊಡ ಸೇರಿದಂತೆ ವಿವಿಧ ಗ್ರಾಮಗಳಿಂದ ಶಿರಹಟ್ಟಿ ಹಾಗೂ ಗದಗ ನಗರಕ್ಕೆ ತೆರಳುವ ಪ್ರೌಢಶಾಲಾ, ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಬಸ್ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಮನ್ನಣೆ ದೊರೆಯದೆ ಇರುವುದು ವಿದ್ಯಾರ್ಥಿಗಳ ದೌರ್ಬಾಗ್ಯವೇ ಸರಿ. ಸರಿಯಾದ ಶಿಕ್ಷಣ ಪಡೆದು ಉನ್ನತ ಹುದ್ದಗೇರಬೇಕೆಂಬ ಹಲವಾರು ಹಳ್ಳಿಗಳ ಪ್ರತಿಭಾವಂತ ವಿದ್ಯಾರ್ಥಿಗಳ ಆಸಕ್ತಿ ಸರ್ಕಾರದ ಅಸಮರ್ಪಕ ಬಸ್ ಸೌಲಭ್ಯದಿಂದ ಕಮರುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಸಿಎಸ್ಐ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ನವೀನ ಜಕ್ಕಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಸರಿಯಾದ ಬಸ್ ಸೌಲಭ್ಯ ಕೇಳುವುದು ತಪ್ಪಲ್ಲ. ಆದರೆ ಹೀಗೆ ದಿಢೀರ್ ಪ್ರತಿಭಟನೆ ಕೈಗೊಂಡರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನಾನು ಬಸ್ ಸಂಚಾರ ಮಾಡಿ ವಿದ್ಯಾಭ್ಯಾಸ ಮುಗಿಸಿದ ಕಾರಣ ನಿಮ್ಮ ಸಮಸ್ಯೆ ಅರ್ಥವಾಗುತ್ತದೆ. ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇರುವ ಪ್ರತಿಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ ಎಂಬ ಭರವಸೆ ನೀಡಿದರು.

ಸರ್ ನಿಮ್ಮ ಮಾತಿಗೆ ನಾವು ಬೆಲೆ ಕೊಡುತ್ತೇವೆ. ಒಂದುವೇಳೆ ಇದೇ ಸಮಸ್ಯೆ ಮರುಕಳಿಸಿದರೆ ವ್ಯವಸ್ಥಿತವಾಗಿ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಒಕ್ಕೊರಲಿನ ಧ್ವನಿಯಲ್ಲಿ ಎಚ್ಚರಿಕೆ ನೀಡಿದರು.

ಪಪಂ ಉಪಾಧ್ಯಕ್ಷ ಇಸಾಕ ಆದ್ರಳ್ಳಿ, ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಮಸ್ಕಿ: ಕಾರ್ಮಿಕ ಕಾಯ್ದೆ ಹಿಂಪಡೆಯುವಂತೆ ಒತ್ತಾಯ

ಕಾರ್ಮಿಕ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಇಲ್ಲಿನ ಕರ್ನಾಟಕ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.

ಅಶ್ಲೀಲ ಪೋಟೋ ನೋಡು, ವರದಕ್ಷಿಣೆ ತರುವಂತೆ ಪತಿಯಿಂದ ವೈದ್ಯೆಗೆ ಕಿರುಕುಳ!

ಬೆಂಗಳೂರು : ಪತಿಯು ಅಶ್ಲೀಲ ವಿಡಿಯೋ ನೋಡುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ ಪತ್ನಿ ದೂರು ದಾಖಲಿಸಿರುವ ಘಟನೆ ನಡೆದಿದೆ.

ಗೇಮ್ಸ್ – ಗ್ರೌಂಡ್ ನಾಲೆಡ್ಜ್ ಮಕ್ಕಳಿಗೆ ಕೊಡಿ- ಎಂ.ವಿ.ಹಿರೇಮಠ

ಉತ್ತರಪ್ರಭ ಸುದ್ದಿ ಬಸವನ ಬಾಗೇವಾಡಿ: ಇಂದಿನ ಸ್ಪಧಾ೯ತ್ಮಕ ಯುಗದ ಆಟೋಟಗಳ್ಲಿ ಶಾಲಾ ಮಕ್ಕಳನ್ನು ಸಕ್ರಿಯವಾಗಿ ಭಾಗವಹಿಸುವಂತೆ…

ಸಾಲೋಣಿ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಲು ಒತ್ತಾಯ

ಕನಕಗಿರಿ ಕ್ಷೇತ್ರದ ಕುರುಬ ಸಮಾಜದ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ನಾಗಪ್ಪ ಸಾಲೋಣಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಬೇಕೆಂದು ಇಲ್ಲಿನ ಕುರುಬ ಸಮಾಜದ ಯುವ ಮುಖಂಡ ಬೀರಪ್ಪ ವೆಂಕಟಾಪೂರ ಒತ್ತಾಯಿಸಿದ್ದಾರೆ.