ವಿಶ್ವಸಂಸ್ಥೆ: ಭಾರತದಲ್ಲಿ 2020 ಅಕ್ಟೋಬರ್ನಲ್ಲಿ ಕಂಡುಬಂದಂತಹ ಡೆಲ್ಟಾ ವೈರಸ್ ಇದೀಗ ದೇಶದಾದ್ಯಂತ ಹರಡುತ್ತಿದೆ. ಹಾಗೂ ಈಗಾಗಲೇ 104 ದೇಶಗಳಲ್ಲಿ ಕಂಡುಬಂದಿದ್ದು, ಈ ವೈರಸ್ ದೇಶದಾದ್ಯಂತ ಅತಿ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೋವಿಡ್ ವೈರಸ್ ಹರಡುವುದನ್ನು ಕಡಿಮೆ ಮಾಡುವಷ್ಟರಲ್ಲಿ ಇದೊಂದು ರೋಗ ದೇಶದಾದ್ಯಂತ ವಕ್ಕರಿಸಿಕೊಂಡಿದೆ.

ಪ್ರಪಂಚದಾದ್ಯಂತ ಬಹುತೇಕರು ಕೋವಿಡ್ ಲಸಿಕೆ ಪಡೆಯುತ್ತಿಲ್ಲ. ಹೀಗಾಗಿ ನಿಯಮಗಳನ್ನು ಸಡಿಲಗೊಳಿಸಿದೆ.ಜನರ ಪಾಲಿಗೆ ಇದು ಭಯಾನಕವಾಗಿರುತ್ತದೆ. ಎಂದು WHO ನಿರ್ದೇಶಕ ಟೆಡ್ರೊಸ್ ಎಚ್ಚರಿಸಿದ್ದಾರೆ.

ಡೆಲ್ಟಾ ವೈರಸ್ ನಿಂದ ಸಾರ್ವಜನಿಕರ ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದೆ. ಹಾಗಾಗಿ ಕಡಿಮೆ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಆರೋಗ್ಯ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಹಾಗೂ ಯಾವ ದೇಶದಲ್ಲೂ ಕೂಡ ಸಂಪೂರ್ಣವಾಗಿ ಸೊಂಕು ನಿವಾರಣೆಯಾಗಿಲ್ಲ ಎಂದು ಹೇಳಿದ ಟೆಡ್ರೊಸ್,
ಈ ಸೋಂಕನ್ನು ತಡೆದು ಹಾಕಲು ಇಡೀ ಪ್ರಪಂಚವೇ ಒಟ್ಟಾಗಿ ಸೋಂಕಿನ ವಿರುದ್ಧ ಹೋರಾಡಬೇಕಿದೆ‌. ನಾವು ಕೋವಿಡ್ ಮತ್ತು ಡೆಲ್ಟಾ ಇವೆರಡರ ಮಧ್ಯೆ ಸಿಲುಕಿ ಕೊಂಡಿದ್ದೇವೆ ಹಾಗಾಗಿ ಎಚ್ಚರದಿಂದಿರಬೇಕಿದೆ ಎಂದು ಟೆಡ್ರೊಸ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಪೊಲೀಸರಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ!

ಒಡಿಶಾ : ಅಪ್ರಾಪ್ತ ಬಾಲಕಿಯ ಮೇಲೆ ಪೊಲೀಸ್ ಠಾಣೆಯ ಸಿಬ್ಬಂದಿಯೇ ಸಾಮೂಹಿಕ ಅತ್ಯಾಚಾರ ಮಾಡಿರುವ ಅಮಾನವೀಯ…

ಕೊರ್ಲಹಳ್ಳಿಯಲ್ಲಿ ನೀರಿನ ಗೋಳು: ತುಂಗೆಯ ಪಾತ್ರದಲ್ಲೂ ನೀರಿಗೆ ತಾಪತ್ರಯ!

ನದಿ ನೀರಿನ ಪಾತ್ರದ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಇದೆ ಎಂದರೆ ನಿಜಕ್ಕೂ ಆಶ್ಚರ್ಯ. ಹೌದು ನೀರಿನ ಸಮಸ್ಯೆ ಎಂದರೆ ಒಂದೆಡೆ ಆಳುವವರ ನಿರ್ಲಕ್ಷ್ಯ, ಮತ್ತೊಂದೆಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕದ ಹೆಚ್ಚಿನ ಹಣದ ವಸೂಲಿ. ಇದರಿಂದ ಗ್ರಾಮಸ್ಥರು ತತ್ತಿರಿಸುವಂತಾದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಂದನ ಶಾಲೆಯ ಪುಟಾಣಿಗಳ ಕೊರೋನಾ ಜಾಗೃತಿ

ಶಾಲೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಕೊರೋನಾ ಬಗ್ಗೆ ನೀಡಿದ ಜಾಗೃತಿ ಸಂದೇಶ ಅದ್ಭುತವಾದದ್ದು. ಇಂತಹ ಪ್ರಯತ್ನಕ್ಕೆ ಮುಂದಾದ ಚಂದನ್ ಶಾಲೆಯ ಪ್ರಯತ್ನ ಕೂಡ ಸಾಮಾಜಿಕ ಕಾಳಜಿ ತೋರಿಸುವಂತಹದ್ದು.

ಹೆಚ್ಚು ಸಂಭಾವನೆ ಪಡೆಯುವ 100 ಕ್ರಿಕೇಟಿಗರಲ್ಲಿ ಭಾರತೀಯ ಕ್ರೀಕೆಟಿಗ ಯಾರು?

ದೆಹಲಿ: 2020 ರ ಅತೀ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳಲ್ಲಿ ಫೋರ್ಬ್ಸ್ ನ ಏಕೈಕ…