ಅತಿ ವೇಗವಾಗಿ ಹರಡುತ್ತಿದೆ ಡೆಲ್ಟಾ ವೈರಸ್ : WHO ನಿರ್ದೇಶಕ ಟೆಡ್ರೊಸ್!

ವಿಶ್ವಸಂಸ್ಥೆ: ಭಾರತದಲ್ಲಿ 2020 ಅಕ್ಟೋಬರ್ನಲ್ಲಿ ಕಂಡುಬಂದಂತಹ ಡೆಲ್ಟಾ ವೈರಸ್ ಇದೀಗ ದೇಶದಾದ್ಯಂತ ಹರಡುತ್ತಿದೆ. ಹಾಗೂ ಈಗಾಗಲೇ 104 ದೇಶಗಳಲ್ಲಿ ಕಂಡುಬಂದಿದ್ದು, ಈ ವೈರಸ್ ದೇಶದಾದ್ಯಂತ ಅತಿ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೋವಿಡ್ ವೈರಸ್ ಹರಡುವುದನ್ನು ಕಡಿಮೆ ಮಾಡುವಷ್ಟರಲ್ಲಿ ಇದೊಂದು ರೋಗ ದೇಶದಾದ್ಯಂತ ವಕ್ಕರಿಸಿಕೊಂಡಿದೆ.

ಪ್ರಪಂಚದಾದ್ಯಂತ ಬಹುತೇಕರು ಕೋವಿಡ್ ಲಸಿಕೆ ಪಡೆಯುತ್ತಿಲ್ಲ. ಹೀಗಾಗಿ ನಿಯಮಗಳನ್ನು ಸಡಿಲಗೊಳಿಸಿದೆ.ಜನರ ಪಾಲಿಗೆ ಇದು ಭಯಾನಕವಾಗಿರುತ್ತದೆ. ಎಂದು WHO ನಿರ್ದೇಶಕ ಟೆಡ್ರೊಸ್ ಎಚ್ಚರಿಸಿದ್ದಾರೆ.

ಡೆಲ್ಟಾ ವೈರಸ್ ನಿಂದ ಸಾರ್ವಜನಿಕರ ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದೆ. ಹಾಗಾಗಿ ಕಡಿಮೆ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಆರೋಗ್ಯ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಹಾಗೂ ಯಾವ ದೇಶದಲ್ಲೂ ಕೂಡ ಸಂಪೂರ್ಣವಾಗಿ ಸೊಂಕು ನಿವಾರಣೆಯಾಗಿಲ್ಲ ಎಂದು ಹೇಳಿದ ಟೆಡ್ರೊಸ್,
ಈ ಸೋಂಕನ್ನು ತಡೆದು ಹಾಕಲು ಇಡೀ ಪ್ರಪಂಚವೇ ಒಟ್ಟಾಗಿ ಸೋಂಕಿನ ವಿರುದ್ಧ ಹೋರಾಡಬೇಕಿದೆ‌. ನಾವು ಕೋವಿಡ್ ಮತ್ತು ಡೆಲ್ಟಾ ಇವೆರಡರ ಮಧ್ಯೆ ಸಿಲುಕಿ ಕೊಂಡಿದ್ದೇವೆ ಹಾಗಾಗಿ ಎಚ್ಚರದಿಂದಿರಬೇಕಿದೆ ಎಂದು ಟೆಡ್ರೊಸ್ ಹೇಳಿಕೆ ನೀಡಿದ್ದಾರೆ.

Exit mobile version