ಬೆಂಗಳೂರು: ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ಗುಂಪು ಗುಂಪು ಸೇರದಂತೆ ಮಾಲ್, ಹೋಟೆಲ್, ಇನ್ನಿತರ ಆರ್ಥಿಕ ಚಟುವಟಿಗಳನ್ನು ಆರಂಭಿಸಬಹುದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಸಲಹೆ ನೀಡಿದೆ.

ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳನ್ನು ಜೂ.21 ರಿಂದ ಪುನರಾರಂಭಿಸಬಹುದು ಎಂದು ಸಲಹಾ ಸಮಿತಿ ಹೇಳಿದೆ.

ಲಾಕ್‌ಡೌನ್ ತೆರವು 3.0ಗೆ ಮೊದಲೂ ಆಕ್ಸಿಜನ್ ಹಾಸಿಗೆಗಳು ಶೇ.60ಕ್ಕಿಂತಲೂ ಕಡಿಮೆ ಇರುವ ಜಿಲ್ಲೆಗಳನ್ನು ಪರಿಶೀಲನೆ ನಡೆಸಬೇಕು. ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಅನ್‌ಲಾಕ್ 2ನೇ ಹಂತದಲ್ಲಿ ಶೇ.50ರಷ್ಟು ಜನರೊಂದಿಗೆ ರೆಸ್ಟೋರೆಂಟ್, ಮಾಲ್, ಸಲೂನ್, ಸ್ಪಾ, ಮದುವೆ ಮಂಟಪಗಳನ್ನು ತೆರೆಯಬಹುದು ಎಂದು ಸೂಚಿಸಿದೆ.

ಈ ಪ್ರದೇಶಗಳಲ್ಲಿ ಹೆಚ್ಚೆಚ್ಚು ಜನರು ಸೇರುವುದರಿಂದ ಸೋಂಕು ಹೆಚ್ಚಾಗಿ ಹರಡಲಿದ್ದು, ಅಲ್ಲದೆ, ಲಾಕ್‌ಡೌನ್ ತೆರವು 2.0 ಮತ್ತು 3.0 ರ ನಡುವೆ ಎರಡು ವಾರಗಳ ಅಂತರ ಇರುವಂತೆಯೂ ಸೂಚಿಸಿದೆ.

ರಾಜ್ಯದಲ್ಲಿ 1.5 ಲಕ್ಷಕ್ಕಿಂತ ಕೆಳಗಿಳಿದ ಸಕ್ರಿಯ ಪ್ರಕರಣ, ಮೈಸೂರಿನಲ್ಲಿ ಮುಂದುವರಿದ ಸಾವಿನ ಸರಣಿ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸದೇ ಹೋದಲ್ಲಿ ಮತ್ತೆ ಹಿಂದಿನ ಪರಿಸ್ಥಿತಿ ಮರುಕಳಿಸಲಿದೆ. ಆಗ ಮಾಲ್, ಶಾಪಿಂಗ್ ಮಾಲ್ ಹಾಗೂ ಮಾರುಕಟ್ಟೆಗಳನ್ನು ತೆರೆಯುವ ಕುರಿತು ಮರುಚಿಂತನೆ ನಡೆಸಬೇಕು. ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಇಳಿಕೆಯಾಗುತ್ತಿರುವುದು ಕಂಡು ಬರುತ್ತಿದ್ದರೆ ಮಾತ್ರ ಇವುಗಳಿಗೆ ಅವಕಾಶ ನೀಡಬೇಕು ಎಂದು ತಾಂತ್ರಿಕ ಸಮಿತಿಯ ಸದಸ್ಯ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

ಪ್ರಮುಖ ಸಲಹೆಗಳು

ಜೂನ್ ಅಂತ್ಯದವರೆಗೂ ರಾತ್ರಿ ಕರ್ಫ್ಯೂ ಮುಂದುವರಿಸಿ

ಸಾರ್ವಜನಿಕ ಸಭೆ, ಧರಣಿ, ಜಾತ್ರೆ ಹಾಗೂ ಹಬ್ಬಗಳ ಮೇಲೆ ನಿರ್ಬಂಧ ಹೇರಿ

ಜೂ.21 ರಿಂದ 2ನೇ ಹಂತದ ಲಾಕ್‌ಡೌನ್ ತೆರವು ಆರಂಭವಾಗಲಿ

ಜು.5 ರಿಂದ ಮೂರನೇ ಹಂತದ ಲಾಕ್‌ಡೌನ್ ತೆರವು ಆರಂಭವಾಗಲಿ

ಪರಿಸ್ಥಿತಿ ಅನುಸರಿಸಿ ಜನರ ಓಡಾಟಕ್ಕೆ ಅವಕಾಶ ನೀಡಿ

3ನೇ ಹಂತದ ಲಾಕ್‌ಡೌನ್ ತೆರವಿನಲ್ಲಿ ಜಿಮ್ (ವ್ಯಾಯಾಮ ಶಾಲೆ), ಯೋಗ, ಧಾರ್ಮಿಕ ಕೇಂದ್ರಗಳು, ಚಿತ್ರಮಂದಿರ, ಕ್ರೀಡಾ ಕ್ಲಬ್, ಕ್ಲಬ್ ಹೌಸ್, ಸಾರ್ವಜನಿಕ ಶೌಚಾಲಯ ಆರಂಭಿಸಿ

Leave a Reply

Your email address will not be published. Required fields are marked *

You May Also Like

ಆಹಾರ ಸಾಮಾಗ್ರಿಗಾಗಿ ಶೀಲ್ ಡೌನ್ ಪ್ರದೇಶದ ಜನರ ಧರಣಿ

ಹಾವೇರಿ: ಆಹಾರ ಸಾಮಗ್ರಿ ನೀಡುತ್ತಿಲ್ಲವೆಂದು ಸೀಲ್ ಡೌನ್ ಪ್ರದೇಶ ಜನರು ಧರಣಿ ನಡೆಸಿದ ಘಟನೆ ಹಾವೇರಿ…

ಗದಗ ಹೆರಿಗೆ ಆಸ್ಪತ್ರೆಗೆ ಕೊರೊನಾ ಭಯ..!:ಗರ್ಭಿಣಿಗೆ ಸೋಕಿನ ಶಂಕೆ!

ಗದಗ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಗದಗ ಜಿಲ್ಲೆ ಜನರನ್ನು ಆತಂಕಕ್ಕೀಡು ಮಾಡಿದೆ.…

ಅಟೋ, ಟ್ಯಾಕ್ಸಿ ಚಾಲಕರಿಗೆ ಸರ್ಕಾರದ 5000 ಸಿಗುವುದು ಯಾವಾಗ..?

ರಾಜ್ಯ ಸರ್ಕಾರ ಅಟೋ,ಟ್ಯಾಕ್ಸಿ ಚಾಲಕರಿಗೆ 5000 ಸಹಾಯ ಧನ ಘೋಷಣೆ ಆಗಿ 15 ದಿನಗಳು ಆಗುತ್ತಾ ಬಂದರೂ ಸರ್ಕಾರ ಮಾತ್ರ ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಇದೀಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ, ಆದರೆ….

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮುಖಭಂಗ

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮುಖಭಂಗ ಅನುಭವಿಸಿದ್ದಾರೆ.…