ನವದೆಹಲಿ: ಜೂನ್ 21 ರಿಂದ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ. 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವೇ ಲಸಿಕೆ ವಿತರಣೆ ಮಾಡಲಿದೆ. ರಾಜ್ಯಗಳಿಗೆ ಕೇಂದ್ರ ಸರ್ಕಾರವೇ ಉಚಿತ ಲಸಿಕೆ ನೀಡಲಿದೆ. ಅಲ್ಲದೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡಜನರಿಗೆ ನೀಡಲಾಗುವ ಉಚಿತ ಆಹಾರಧಾನ್ಯಗಳ ಸೌಲಭ್ಯವನ್ನು ದೀಪಾವಳಿ, ನವೆಂಬರ್ ಮಾಸದವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ದೇಶದ ಜನರಿಗೆ ಉಚಿತ ಲಸಿಕೆ, ಆಹಾರಧಾನ್ಯ ವಿತರಣೆ : ನರೇಂದ್ರ ಮೋದಿ ಘೋಷಣೆ
