ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಸೋಂಕನ್ನು ಸಂಪೂರ್ಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಕ್ತವೆಂದು ಪರಿಗಣಿಸಿ ಈ ಹಿಂದೆ ಜೂನ್ 7ರವರೆಗೆ ಜಾರಿಗೊಳಿಸಲಾಗಿತ್ತು. ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ, ವೈರಾಣು ಹರಡುವಿಕೆ ಮುಂದುವರೆದಿದೆ. ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಮುಂದುವರೆಸೋದು ಸೂಕ್ತ ಎಂದು ಪರಿಗಣಿಸಿ 14-06-2021ರವರೆಗೆ ಒಂದು ವಾರ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 500 ಕೋಟಿ ವಿಶೇಷ ಎರಡನೇ ಪ್ಯಾಕೇಜ್ ಇಂದು ಘೋಷಣೆ ಮಾಡಲಾಗುತ್ತಿದೆ. 7-06-2021ರಿಂದ ಶೇ.30ರಷ್ಟು ಕೋವಿಡ್ ವರ್ತನೆ ಪಾಲಿಸಿ ತೆರೆಯಲು ಅನುಮತಿಸಲಾಗಿದೆ. ಕೋವಿಡ್ ಪ್ಯಾಕೇಜ್ -2 ಪವರ್ ಲೂಮ್ ನೇಕಾರರಿಗೆ ಇಬ್ಬರು ಕೆಲಸಗಾರರಿಗೆ ಮೂರದಂತೆ ಮೂರು ಸಾವಿರ ಪರಿಹಾರ ನೀಡಲಾಗುತ್ತದೆ. ಚಲನ ಚಿತ್ರ, ದೂರು ದರ್ಶನ ಮಾಧ್ಯಮಮಿತ್ರರಿಗೆ 3 ಸಾವಿರ ನೀಡಲಾಗುತ್ತದೆ. ಮೀನುಗಾರರಿಗೆ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೊಂದಾಯಿಸಿದಂತ ಮೀನುಗಾರರಿಗೆ ತಲಾ 3 ಸಾವಿರ ನೀಡಲಾಗುತ್ತದೆ ಎಂದರು. ಇನ್ ಲ್ಯಾಂಡ್ ದೋಣಿ ಮಾಲೀಕರಿಗೆ ಮೂರು ಸಾವಿರ ಕೂಡ ನೀಡಲಾಗುತ್ತದೆ ಎಂದರು.
ಜೂ.14ರವರೆಗೆ ರಾಜ್ಯಾದ್ಯಂತ ಲಾಕ್ ಡೌನ್ ವಿಸ್ತರಣೆ!
