ಮುಳಗುಂದ: ಪಟ್ಟಣದ ಹೃದಯ ಭಾಗದ ಗಾಂಧಿಕಟ್ಟಿಯ ಹತ್ತಿರ ವೃತ್ತ ಪ.ಪಂ ಮಾಜಿ ಸದಸ್ಯ ದಿ.ಆರ್.ಎನ್ ದೇಶಪಾಂಡೆ ಅವರ ಹೆಸರು ನಾಮಕರಣ ಮಡಬೇಕು. ಎಂದು ಉನ್ನತಿ ಮಹಿಳಾ ಸಮಾಜ ಸೇವೆ ಹಾಗೂ ವಿವಿದೋದ್ದೇಶಗಳ ಸಂಘ, ಜೈ ಮಾತಾ ಜೀಜಾಬಾಯಿ ಕ್ಷತ್ರೀಯ ಮರಾಠ ಮಹಿಳಾ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ.ಪಂ.ಮುಖ್ಯಾಧಿಕಾರಿ ಎಂಎಸ್.ಬೆಂತೂರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ದಿ. ಆರ್.ಎನ್.ದೇಶಪಾಂಡೆಯವರು ಶಿಕ್ಷಣ ಪ್ರೇಮಿ,ಭೂದಾನಿ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಜಾತಶತ್ರು, ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ಸವೆಸಿದವರು. ಪಟ್ಟಣದ ಅಭಿವೃದ್ಧಿಗೆ ಕಾರಣರಾದ ಅವರ ಸೇವೆ ಅಚ್ಚಳಿಯದೇ ಉಳಿದಿದೆ, ಅವರ ಸವಿನೆನಪಿನ ಅಂಗವಾಗಿ ಪಟ್ಟಣದ ಹೃದಯ ಭಾಗದಲ್ಲಿ ವೃತ್ತಕ್ಕೆ ದಿ.ದೇಶಪಾಂಡೆ ಅವರ ಹೆಸರು ನಾಮಕರಣ ಮಾಡಬೇಕು. ಎಂದು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಉನ್ನತಿ ಮಹಿಳಾ ವಿವಿದೋದ್ದೇಶ ಸಂಘದ ಉಪಾಧ್ಯಕ್ಷೆ ಮಂಗಳಾ.ಕೆ.ನೀಲಗುಂದ, ಸಂಘದ ಅಧ್ಯಕ್ಷೆ ಗೀತಾ ಜಾಧವ, ಆರ್.ಬಿ ಜಾಧವ, ವಿಜಯಲಕ್ಷ್ಮೀ, ಕಿರಣ ನೀಲಗುಂದ, ಪ್ರಸನ್ನಕುಮಾರ ಹಿರೇಮಠ, ಫಕ್ಕಿರೇಶ ಕತ್ತಿ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

You May Also Like

ಗಾಳಿ ಶುದ್ಧಿ ಮಾಡಲಿದೆಯಂತೆ ಯಂತ್ರ: ಬೆಂಗಳೂರಲ್ಲಿ ಪ್ರಾಯೋಗಿಕ ಕಾರ್ಯ

ಈಗಾಗಲೇ ಶುದ್ಧ ಕುಡಿಯುವ ನೀರು ಒದಗಿಸುವ ಯಂತ್ರಗಳು ರಾಜ್ಯದಲ್ಲೆಲ್ಲಡೆ ಕಂಡು ಬರುತ್ತಿವೆ. ಆದರೆ ಇದೀಗ ನೀರಿನಂತೆ ಗಾಳಿಯನ್ನು ಶುದ್ಧೀಕರಣ ಗೊಳಿಸುವ ಯಂತ್ರದಿಂದ ಸಿಲಿಕಾನ ಸಿಟಿಯಲ್ಲಿ ಗಾಳಿ ಶುದ್ಧಿಕರಣ ಮಾಡುವ ಪ್ರಾಯೋಗಿಕ ಕಾರ್ಯ ಕೈಗೊಳ್ಳಲಾಗಿದೆ.

ಮುಳಗುಂದ : ಮರುಜೀವ ಪಡೆದ ಪಟ್ಟಣಶೆಟ್ಟಿ ಕೆರೆ

ಪಟ್ಟಣದ ಕಲ್ಲೂರ ರಸ್ತೆಗೆ ಹೊಂದಿಕೊಂಡ ಪಟ್ಟಣಶೆಟ್ಟಿ ಕೆರೆ ಈಗ ಅಭಿವೃದ್ದಿಗೊಂಡಿದ್ದು ಕಡಿಮೆ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಿದ ಧರ್ಮಸ್ಥಳ ಅಭಿವೃದ್ದಿ ಸಮಿತಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಡರಕಟ್ಟಿ ವಿಎಸ್ಎಸ್ ಸಂಘಕ್ಕೆ ಅವಿರೋಧ ಆಯ್ಕೆ

ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ ಮಾಡಲಾಯಿತು.

ಕೊಡಗಾನೂರ ವೀರಭದ್ರೇಶ್ವರ ರಥೋತ್ಸವ

ಸಮೀಪದ ಕೊಡಗಾನೂರ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಭಕ್ತರ ಹರ್ಷೊದ್ಘಾರದ ಮಧ್ಯೆ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.