ಬೆಂಗಳೂರು: ಬ್ಲಾಕ್ ಫಂಗಸ್ ಕಣ್ಣಿಗೆ ತಲುಪಿದ ಮೇಲೆ ಕಣ್ಣು ತೆಗೆಯಲೇ ಬೇಕಾಗುತ್ತದೆ. ಅದು ಮಿದುಳಿಗೆ ಹೋಗದಂತೆ ನೋಡಿಕೊಳ್ಳಬೇಕು. ಮೊದಲು ಡೆಂಟಲ್ ಪರೀಕ್ಷೆ ಮಾಡುತ್ತಾರೆ. ಬಳಿಕ ಕಣ್ಣಿನ ತಜ್ಞರು ಎಲ್ಲಾ ಸೇರಿ ಪರೀಕ್ಷೆ ಮಾಡುತ್ತಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಬ್ಲಾಕ್ ಫಂಗಸ್ ಔಷಧಿ 1300 ವಯಲ್ಸ್ ನೀಡಿದ್ದು, ಇವಿಷ್ಟು ವಯಲ್ಸ್ ಗಳು ರಾಜ್ಯದ ರೋಗಿಗಳಿಗೆ ಸಾಕಾಗುವುದಿಲ್ಲ. ಬ್ಲಾಕ್ ಫಂಗಸ್ ಔಷಧಿ ಕೊರತೆ ನೀಗಿಸುವ ಉದ್ದೇಶದಿಂದ ನಾನು ಕೇಂದ್ರ ಸಚಿವ ಸದಾನಂದಗೌಡರ ನಿರಂತರ ಮಾತನಾಡುತ್ತಿದ್ದೇನೆ. ನಾಲ್ಕು ಹಾಗೂ ಐದನೇ ತಾರೀಖಿನ ವೇಳೆಗೆ ಹೆಚ್ಚು ವಯಲ್ಸ್ ಕಳುಹಿಸುವುದಾಗಿ ಹೇಳಿದ್ದಾರೆ ಎಂದರು.
