ಆಸ್ಪ್ರೇಲಿಯಾದಲ್ಲಿ ಇಲಿ ಹಾವಳಿಯಂತೆ: ಪಾಷಾಣಕ್ಕಾಗಿ ಭಾರತಕ್ಕೆ ಆರ್ಡರ್

ಸಿಡ್ನಿ: ಆಸ್ಟೇಲಿಯಾದಲ್ಲಿ ಇಲಿಗಳ ಹಾವಳಿಯಿಂದ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆಯಂತೆ! ಆಸ್ಟ್ರೇಲಿಯಾ ಪೂರ್ವದ 3 ರಾಜ್ಯಗಳ ಮೇಲೆ ಲಕ್ಷಾಂತರ ಸಂಖ್ಯೆಯಲ್ಲಿ ಇಲಿಗಳು ದಾಳಿ ಮಾಡುತ್ತಿದ್ದು, ಸಾವಿರಾರು ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳನ್ನ ಇಲಿಗಳು ತಿಂದುಹಾಕಿವೆ. ಈ ಸಮಸ್ಯೆ ಆಸ್ಟ್ರೇಲಿಯಾಗೆ ತಲೆನೋವಾಗಿದ್ದು ಇಲಿ ಪಾಷಾಣ ಪೂರೈಕೆಗಾಗಿ ಭಾರತಕ್ಕೆ ಆರ್ಡರ್ ನೀಡಿದೆ.
ಇನ್ನು ದೇಶದಲ್ಲಿ ಇಲಿಗಳ ಹಾವಳಿಗೆ ತಡೆವೊಡ್ಡದಿದ್ದರೇ, ನ್ಯೂ ಸೌತ್ ವೇಲೆಸ್ ರಾಜ್ಯ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಅಲ್ಲಿನ ಕೃಷಿ ಸಚಿವ ಆಡಮ್ ಮಾರ್ಷಲ್ ಹೇಳಿದ್ದಾರೆಂದು ವರದಿಯಾಗಿದೆ.
ಇನ್ನು ಇಲಿ ಹಾವಳಿಗೆ ಕಡಿವಾಣ ಹಾಕಲು ನ್ಯೂ ಸೌತ್ ವೇಲ್ಸ್ ಸರ್ಕಾರ ನಿಷೇಧಿತ ವಿಷ ಬ್ರೋಮಾಡಿಯೋಲೋನ್ ನ 5,000 ಲೀಟರ್ ಅನ್ನು ಭಾರತದಿಂದ ತರಿಸಿಕೊಳ್ಳಲು ಆರ್ಡರ್ ನೀಡಿದೆ.

Exit mobile version